ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು-ಮೈಸೂರು ಫ್ಲೈ ಬಸ್ ದರ ಇಳಿಕೆ

|
Google Oneindia Kannada News

ಬೆಂಗಳೂರು, ಡಿಸೆಂಬರ್ 03 : ಕೆಎಸ್‌ಆರ್‌ಟಿಸಿ ಫ್ಲೈ ಬಸ್ಸುಗಳ ದರಗಳನ್ನು ಕಡಿತ ಮಾಡಿದೆ. ಹೊಸ ಮಾರ್ಗಗಳಲ್ಲಿ ಶೀಘ್ರದಲ್ಲೇ ಫ್ಲೈ ಬಸ್ ಸೇವೆಯನ್ನು ಆರಂಭಿಸಲು ಯೋಜನೆ ಸಿದ್ಧವಾಗಿದೆ.

ಕೆಎಸ್ಆರ್‌ಟಿಸಿ ಫ್ಲೈ ಬಸ್ ಸೇವೆ ವಿಸ್ತರಣೆ, 15 ಹೊಸ ಬಸ್ ಖರೀದಿಕೆಎಸ್ಆರ್‌ಟಿಸಿ ಫ್ಲೈ ಬಸ್ ಸೇವೆ ವಿಸ್ತರಣೆ, 15 ಹೊಸ ಬಸ್ ಖರೀದಿ

ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೈಸೂರಿಗೆ ತೆರಳುವ ಫ್ಲೈ ಬಸ್ ದರವನ್ನು ಕಡಿತಗೊಳಿಸಲಾಗಿದೆ. ಮೂರು ಜನರು ಒಟ್ಟಿಗೆ 700 ರೂ.ಗಳಿಗೆ ಟಿಕೆಟ್ ಬುಕ್ ಮಾಡಬಹುದಾಗಿದೆ.

KSRTC cuts Fly-bus service group booking fares

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರಾಜ್ಯ ಮತ್ತು ಹೊರ ರಾಜ್ಯದ ವಿವಿಧ ನಗರಗಳಿಗೆ ಹೊಸ ಬಸ್‌ಗಳನ್ನು ಓಡಿಸಲು ಕೆಎಸ್‌ಆರ್‌ಟಿಸಿ ನಿರ್ಧರಿಸಿದೆ. ಸಿಂಗಲ್‌ ಸೀಟ್‌ನ ಎಸಿ ಬಸ್ಸುಗಳು ವೈ-ಫೈ, ಎಲ್‌ಇಡಿ ಸ್ಕ್ರೀನ್, ಜಿಪಿಎಸ್ ಟ್ರಾಕಿಂಗ್, ರಾಸಾಯನಿಕ ಟಾಯ್ಲೆಟ್‌ಗಳನ್ನು ಹೊಂದಿವೆ.

ಮಣಿಪಾಲ್-ಬೆಂಗಳೂರು ನಡುವೆ ಫ್ಲೈ ಬಸ್ ಸೇವೆಮಣಿಪಾಲ್-ಬೆಂಗಳೂರು ನಡುವೆ ಫ್ಲೈ ಬಸ್ ಸೇವೆ

ಕೆಎಸ್ಆರ್‌ಟಿಸಿ ಫ್ಲೈ ಬಸ್ ಸೇವೆಯನ್ನು ಮಡಿಕೇರಿ, ತಿರುಪತಿ, ಸೇಲಂ, ಕೊಚ್ಚಿಕೋಡ್ ಮತ್ತು ಕೊಯಮತ್ತೂರಿಗೆ ವಿಸ್ತರಿಸಲು ನಿರ್ಧರಿಸಿದೆ. ಶೀಘ್ರದಲ್ಲಿಯೇ ಈ ಬಸ್ ಸೇವೆ ಆರಂಭವಾಗಲಿದೆ. ಬೆಂಗಳೂರು-ಮೈಸೂರು, ಬೆಂಗಳೂರು-ಮಣಿಪಾಲ್ ನಡುವೆ ಈಗಾಗಲೇ ಫ್ಲೈ ಬಸ್ ಸಂಚಾರ ನಡೆಸುತ್ತಿದೆ.

English summary
Karnataka road transport corporation (KSRTC) has announced new fare for group booking on Fly-bus service between Bengaluru-Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X