ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಲೆಕ್ಟ್ರಿಕ್ ಬಸ್ ಬಿಡಿ: ಬಿಎಂಟಿಸಿಗೆ ಮಾಲಿನ್ಯ ನಿಯಂತ್ರಣ ಮಂಡಳಿ ಸೂಚನೆ

|
Google Oneindia Kannada News

ಬೆಂಗಳೂರು, ಜನವರಿ 17: ನಗರದ ವಾಯುಮಾಲಿನ್ಯದ ಪ್ರಮಾಣ ತಗ್ಗಿಸಲು ಬಿಎಸ್-III ಬಸ್‌ಗಳನ್ನು ರದ್ದುಗೊಳಿಸಿ ಎಲೆಕ್ಟ್ರಿಕ್ ಬಸ್‌ಗಳನ್ನು ಬಿಡುವಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ), ಬಿಎಂಟಿಸಿಗೆ ನಿರ್ದೇಶಿಸಿದೆ.

ಪ್ರಸ್ತುತ ಬಿಎಂಟಿಸಿ 3,067 ಬಿಎಸ್-III ಹಾಗೂ 3,423 ಬಿಎಸ್-IV ಬಸ್‌ಗಳನ್ನು ಹೊಂದಿದೆ. ಆದರೆ, ಎಲೆಕ್ಟ್ರಿಕ್ ಬಸ್‌ಗಳನ್ನು ಖರೀದಿಸುವ ಬಿಎಂಟಿಸಿ ಪ್ರಸ್ತಾವ ದೀರ್ಘ ಸಮಯದಿಂದ ಹಾಗೆಯೇ ಬಾಕಿ ಉಳಿದಿದೆ. ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಎಲೆಕ್ಟ್ರಿಕ್ ಬಸ್‌ಗಳನ್ನು ಕಡಿಮೆ ಲೀಸ್ ದರಕ್ಕೆ ಖರೀದಿಸಲು ಪ್ರಯತ್ನಿಸುತ್ತಿರುವುದು ಈ ವಿಳಂಬಕ್ಕೆ ಕಾರಣ ಎನ್ನಲಾಗಿದೆ.

ಬಿಎಂಟಿಸಿಯಲ್ಲಿ ಸಿಬ್ಬಂದಿ ಹಾಜರಾತಿ ನಿಗಾಕ್ಕೆ ಬರಲಿದೆ ಹೊಸ ವ್ಯವಸ್ಥೆ ಬಿಎಂಟಿಸಿಯಲ್ಲಿ ಸಿಬ್ಬಂದಿ ಹಾಜರಾತಿ ನಿಗಾಕ್ಕೆ ಬರಲಿದೆ ಹೊಸ ವ್ಯವಸ್ಥೆ

ನಿಯಮಾವಳಿಗಳಿಗೆ ಅನುಗುಣವಾಗಿ ಎಲ್ಲ ಬಿಎಸ್-III ಬಸ್‌ಗಳನ್ನು ಹಂತ ಹಂತವಾಗಿ ರದ್ದುಗೊಳಿಸಲಾಗುವುದು. 2010ರಲ್ಲಿ ದೇಶದಾದ್ಯಂತ ಬಿಎಸ್-III ನಿಯಮಾವಳಿಗಳನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿತ್ತು. 2017ರ ಏಪ್ರಿಲ್‌ನಿಂದ ಆ ಜಾಗಕ್ಕೆ ಬಿಎಸ್-IV ಬಸ್‌ಗಳ ಸೇವೆ ನೀಡಲಾಗುತ್ತಿದೆ.

3,000 ಬಸ್‌ಗಳ ಖರೀದಿ

3,000 ಬಸ್‌ಗಳ ಖರೀದಿ

2017-18ರಲ್ಲಿ ರಾಜ್ಯ ಸರ್ಕಾರವು ಹೆಚ್ಚುವರಿ 3,000 ಬಸ್‌ಗಳ ಖರೀದಿಯನ್ನು ಪ್ರಕಟಿಸಿತ್ತು. ಇದರಲ್ಲಿ ತಲಾ 1,500 ಬಸ್‌ಗಳನ್ನು ಖರೀದಿ ಆಧಾರದಲ್ಲಿ ಮತ್ತು ಗುತ್ತಿಗೆ ಮಾದರಿಯಲ್ಲಿ ಪಡೆದುಕೊಳ್ಳುವುದೆಂದು ತಿಳಿಸಲಾಗಿತ್ತು. ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು ನಗರದಲ್ಲಿ ಮಾಲಿನ್ಯ ಮಟ್ಟ ಕಡಿಮೆ ಮಾಡಲು ಸಿಎನ್‌ಜಿಯಂತಹ ಪರಿಸರ ಸ್ನೇಹಿ ವಾಹನಗಳನ್ನು ಮಾತ್ರ ಚಾಲನೆ ಮಾಡುವಂತೆ ಬಿಎಂಟಿಸಿಗೆ ಸೂಚಿಸಿತ್ತು.

ಓಲಾ ಮಾದರಿ ಸೇವೆ ನೀಡಲು ಬಿಎಂಟಿಸಿ ಸಿದ್ಧತೆ, ಹೇಗೆ ವ್ಯವಸ್ಥೆ? ಓಲಾ ಮಾದರಿ ಸೇವೆ ನೀಡಲು ಬಿಎಂಟಿಸಿ ಸಿದ್ಧತೆ, ಹೇಗೆ ವ್ಯವಸ್ಥೆ?

ಸಿಎನ್‌ಜಿ ಬಸ್‌ಗಳು ದುಬಾರಿ

ಸಿಎನ್‌ಜಿ ಬಸ್‌ಗಳು ದುಬಾರಿ

ಆದರೆ, ಸಿಎನ್‌ಜಿ ಬಸ್‌ಗಳ ಕಾರ್ಯಾಚರಣೆ ಮತ್ತು ನಿರ್ವಹಣಾ ವೆಚ್ಚವು ಎಲೆಕ್ಟ್ರಿಕ್ ಬಸ್‌ಗಳಿಗಿಂತಲೂ ತುಟ್ಟಿಯಾಗಿದೆ. ಎನ್‌ಜಿಟಿ ಆದೇಶದ ಕಾರಣ ಬಿಎಂಟಿಸಿ ಬಿಎಸ್-IV ಹೊಸ ಬಸ್‌ಗಳನ್ನು ರಸ್ತೆಗೆ ಇಳಿಸುವಂತಿಲ್ಲ. ಎಲೆಕ್ಟ್ರಿಕ್ ಬಸ್‌ಗಳ ಖರೀದಿ ನಿರ್ಧಾರದಲ್ಲಿನ ವಿಳಂಬವು ಬಿಎಂಟಿಸಿ ಮತ್ತು ಪ್ರಯಾಣಿಕರಿಗೂ ಸಂಕಷ್ಟ ತಂದೊಡ್ಡಿದೆ.

ಸದ್ಯಕ್ಕೆ ಬಸ್ ಟಿಕೆಟ್ ದರ ಏರಿಕೆ ಇಲ್ಲ: ಡಿಸಿ ತಮ್ಮಣ್ಣಸದ್ಯಕ್ಕೆ ಬಸ್ ಟಿಕೆಟ್ ದರ ಏರಿಕೆ ಇಲ್ಲ: ಡಿಸಿ ತಮ್ಮಣ್ಣ

ಎಸಿ ಮತ್ತು ನಾನ್ ಎಸಿ ಎಲೆಕ್ಟ್ರಿಕ್ ಬಸ್‌ಗಳು

ಎಸಿ ಮತ್ತು ನಾನ್ ಎಸಿ ಎಲೆಕ್ಟ್ರಿಕ್ ಬಸ್‌ಗಳು

ಕೇಂದ್ರ ಭಾರಿ ಕೈಗಾರಿಕೆಗಳ ಸಚಿವಾಲಯವು ಎಸಿ ಎಲೆಕ್ಟ್ರಿಕ್ ಬಸ್‌ಗಳಿಗಾಗಿ 1 ಕೋಟಿ ರೂ. ಮತ್ತು 74.7 ಲಕ್ಷ ರೂ.ಗಳನ್ನು 80 ನಾನ್ ಎಸಿ ಎಲೆಕ್ಟ್ರಿಕ್ ಬಸ್‌ಗಳಿಗಾಗಿ ಹಣಕಾಸಿನ ನೆರವನ್ನು ಅನುಮೋದಿಸಿದೆ ಎಂದು ಬಿಎಂಟಿಸಿ ತಿಳಿಸಿದೆ.

ಗುತ್ತಿಗೆ ಮಾದರಿಗೆ ಪ್ರಸ್ತಾವ ಸಲ್ಲಿಕೆ

ಗುತ್ತಿಗೆ ಮಾದರಿಗೆ ಪ್ರಸ್ತಾವ ಸಲ್ಲಿಕೆ

ಈ ಬಸ್‌ಗಳನ್ನು ಗುತ್ತಿಗೆ ಮಾದರಿಯಲ್ಲಿ ಪಡೆದುಕೊಳ್ಳಲು ಪ್ರಸ್ತಾವ ಸಲ್ಲಿಸಲಾಗಿದ್ದು, ಟೆಂಡರ್ ಪ್ರಕ್ರಿಯೆ ಅಂತಿಮಗೊಂಡಿದೆ. 60 ಎಸಿ ಪ್ರೀಮಿಯಂ ಮತ್ತು 20 ನಾನ್ ಎಸಿ ಎಲೆಕ್ಟ್ರಿಕ್ ಬಸ್‌ಗಳ ಕಾರ್ಯಾಚರಣೆಯ ಉದ್ದೇಶದೊಂದಿಗೆ ಪತ್ರ ಬರೆಯಲಾಗಿದೆ ಎಂದು ಬಿಎಂಟಿಸಿಯು ಕೆಎಸ್‌ಪಿಸಿಬಿಗೆ ಪ್ರತಿಕ್ರಿಯೆ ನೀಡಿದೆ.

ಈ ಬಸ್‌ಗಳ ಖರೀದಿಗೆ ಸಾರಿಗೆ ಸಚಿವರು ಅನುಮತಿ ನೀಡಿದ್ದಾರೆ. ಆದರೆ, ಅವುಗಳನ್ನು ಖರೀದಿ ಮಾಡುವುದೋ ಅಥವಾ ಗುತ್ತಿಗೆ ಪಡೆಯುವುದೋ ಎಂಬುದನ್ನು ಸರ್ಕಾರ ಇನ್ನೂ ನಿರ್ಧರಿಸಿಲ್ಲ.

ಬಿಬಿಎಂಪಿ ವ್ಯಾಪ್ತಿಯಾಚೆಗೂ ಕಾರ್ಯಾಚರಣೆ

ಬಿಬಿಎಂಪಿ ವ್ಯಾಪ್ತಿಯಾಚೆಗೂ ಕಾರ್ಯಾಚರಣೆ

ಬಿಬಿಎಂಪಿಯ 25 ಕಿ.ಮೀ. ಮಿತಿಯಾಚೆಗೂ ತನ್ನ ಕಾರ್ಯಾಚರಣೆಯ ವ್ಯಾಪ್ತಿಯನ್ನು ವಿಸ್ತರಿಸಿರುವುದಾಗಿ ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ಬಿಎಂಟಿಸಿಯು ನಗರ ಪ್ರದೇಶಗಳಲ್ಲಿ 1,024 ಷೆಡ್ಯೂಲ್‌ಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದು, 16,078 ಟ್ರಿಪ್‌ಗಳಲ್ಲಿ ಸಂಚರಿಸುತ್ತಿದೆ. ಉಪ ನಗರ ಪ್ರದೇಶಗಳಲ್ಲಿ 5,152 ಷೆಡ್ಯೂಲ್‌ಗಳಲ್ಲಿ 53,125 ಟ್ರಿಪ್‌ಗಳಲ್ಲಿ ಸಂಚರಿಸುತ್ತಿದೆ.

English summary
Karnataka State Pollution Control Board (KSPCB) has directed BMTC to phase out BS-III vehicles and induct electric buses.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X