ಕಸಾಪ ಮಾಜಿ ಅಧ್ಯಕ್ಷ ಪುಂಡಲೀಕ ಹಾಲಂಬಿ ನಿಧನ

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 24 : ಕನ್ನಡ ಸಾಹಿತ್ಯ ಪರಿಷತ್ತಿನ 24ನೇ ಅಧ್ಯಕ್ಷರಾಗಿ ಕರ್ತವ್ಯ ನಿಭಾಯಿಸಿದ್ದ ಪುಂಡಲೀಕ ಹಾಲಂಬಿ ಅವರು ಭಾನುವಾರ ನಿಧನರಾಗಿದ್ದಾರೆ. ಕೆಲ ಕಾಲದಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಬಸವನಗುಡಿಯ ಶೇಖರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಇತ್ತೀಚೆಗೆ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿ, ಚೇತರಿಸಿಕೊಳ್ಳುತ್ತಿದ್ದರು. ಆದರೆ, ಭಾನುವಾರ ಬೆಳಗ್ಗೆ ಕಿಡ್ನಿ ವೈಫಲ್ಯದಿಂದ ಕೊನೆಯುಸಿರೆಳೆದಿದ್ದಾರೆ. ಮೃತರು ಪತ್ನಿ, ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ. [ಕಸಾಪ 24ನೇ ಅಧ್ಯಕ್ಷರಾಗಿ ಪುಂಡಲೀಕ ಹಾಲಂಬಿ]

Pundalika Halambi Passes Away

ಹಾಲಂಬಿ ಅವರ ಪಾರ್ಥೀವ ಶರೀರವನ್ನು ಮೊದಲಿಗೆ ಜಯನಗರದ ಅವರ ಸ್ವಗೃಹಕ್ಕೆ ಕೊಂಡೊಯ್ಯಲಾಗುತ್ತದೆ ನಂತರ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಆವರಣದಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಇಡಲು ಕುಟುಂಬದವರು ನಿರ್ಧರಿಸಿದ್ದಾರೆ. ಅಂತಿಮ ಸಂಸ್ಕಾರವನ್ನು ಟಿ.ಆರ್ ಮಿಲ್ ಬಳಿಯ ಸ್ಮಶಾನದಲ್ಲಿ ಸಂಜೆ ವೇಳೆಗೆ ನೆರವೇರಿಸಲಾಗುತ್ತದೆ.

ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಹಾಲಾಡಿಯಲ್ಲಿ ಜನಿಸಿದ ಹಾಲಂಬಿ ಅವರು ಕನ್ನಡ ಪರ ಚಿಂತಕರಾಗಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧಿಕಾರಿಯಾಗಿ ಸುಮಾರು 14 ವರ್ಷ ಕರ್ತವ್ಯ ನಿರ್ವಹಿಸಿರುವ ಹಾಲಂಬಿ ಅವರು ಪ್ರೊ ಚಂದ್ರಶೇಖರ ಪಾಟೀಲರ ನಂತರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದರು.[ಕಸಾಪ ಯಜಮಾನ್ಯಕ್ಕೆ ಕನ್ನಡ ಮಾತೆಯರೇ ಇಲ್ವಾ?]

ಪಂಪನ 'ಮಾನವ ಜಾತಿ ತಾನೊಂದೇ ವಲಂ' ಎಂಬುದನ್ನು ಪಾಲಿಸುತ್ತೇನೆ. ಇದನ್ನು ಅಧಿಕಾರ ಎಂದು ಸ್ವೀಕರಿಸದೆ ಸೇವಾ ಮನೋಭಾವದಿಂದ ನನ್ನ ಕರ್ತವ್ಯ ಪಾಲಿಸುತ್ತೇನೆ ಎಂದು ಹೇಳಿದ್ದರು.

ಮನು ಬಳಿಗಾರ್ ಅವರಿಂದ ಸಂತಾಪ ಸಂದೇಶ: ಉತ್ತಮ ವಾಗ್ಮಿಗಳು, ಪ್ರಬುದ್ಧ ಸಂಘಟಕರು, ಕ್ರಿಯಾಶೀಲರು, ಶುದ್ಧಹಸ್ತರು, ಸಕಲರನ್ನೂ ಸಮಾನ ಗೌರವದಿಂದ ಕಾಣುವ ವಿಶಾಲ ಹೃದಯಿಗಳು, ನನಗೆ ಮಾಗ೯ದಶ೯ಕರೂ, ಜಾತ್ಯಾತೀತ ಮನೋಭಾವವನ್ನು ಮೈಗೂಡಿಸಿಕೊಂಡಿರುವವರಾದ ಪುಂಡಲೀಕ ಹಾಲಂಬಿ ಅವರು ಇತರರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರ ಪ್ರೀತಿಯನ್ನು ಪಡೆದುಕೊಂಡಿದ್ದ ಪರಿಷತ್ತಿನ ನಿಕಟ ಪೂವ೯ ಅಧ್ಯಕ್ಷರಾಗಿ ಕನ್ನಡ ಕಟ್ಟುವ ಕೆಲಸವನ್ನು ಪ್ರಾಮಾಣಿಕವಾಗಿ ನಿವ೯ಹಿಸಿ ಕನ್ನಡಿಗರ ಹೃದಯದಲ್ಲಿ ಜನಮಾನಸರಾಗಿದ್ದ ಹಾಲಂಬಿ ಅವರು ಇಂದು ನಮ್ಮನ್ನು ಅಗಲಿದ್ದು ಕನ್ನಡ ನಾಡಿಗೆ ತುಂಬಲಾರದ ನಷ್ಟವಾಗಿದೆ. ಅವರ ಕುಟುಂಬಕ್ಕೆ ದುಖಃ ಸಹಿಸಿಕೊಳ್ಳುವ ಶಕ್ತಿ ಭಗವಂತ ಕರುಣಿಸಲಿ. ಅವರ ಆತ್ಮಕ್ಕೆ ಚಿರಶಾಂತಿ ದೊರಕಲೆಂದು ಪ್ರಾಥಿ೯ಸುತ್ತೇನೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Former Kannada Sahithya Parishath president Pundalika Halambi passed away today at a private hospital in Basavanagudi. He was 24th President of Sahithya Parishath.
Please Wait while comments are loading...