ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿಗೆ ಭಾರಿ ಮಳೆ ಭೀತಿ ಇಲ್ಲ: ಸೆಪ್ಟೆಂಬರ್‌ನಲ್ಲಿ ವಾಡಿಕೆ ಮಳೆ ಸಾಧ್ಯತೆ

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್ 23: ಕೇರಳ, ಕೊಡಗಿನಂತೆ ಬೆಂಗಳೂರಲ್ಲೂ ಮಳೆ ಬಂದರೆ ಏನಾಗಬಹುದು ಎಂದು ಯಾರಾದರೂ ಯೋಚನೆ ಮಾಡಿದ್ದೀರಾ?

ಕಳೆದ ವರ್ಷವೂ ಏಕಾಏಕಿ ಆರಂಭವಾದ ಮಳೆ ಬೆಂಬಿಡದೆ ತಿಂಗಳುಗಳ ಕಾಲ ಸುರಿದಿತ್ತು, ಆದರೆ ಇಲ್ಲಿಯವರೆಗೆ ಬಂದಿರುವ ಮಾಹಿತಿ ಪ್ರಕಾರ ಅಂತಹ ಮಳೆಯಾಗುವ ಯಾವ ಮುನ್ಸೂಚನೆಯೂ ಇಲ್ಲ.

ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ನೆರವಾಗುವುದು ಹೇಗೆ? ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ನೆರವಾಗುವುದು ಹೇಗೆ?

ಆದರೆ ಕೊಡಗಿನಂತೆ ಬೆಂಗಳೂರು ಕೂಡ ದಕ್ಷಿಣ ಒಳನಾಡಿನಲ್ಲೇ ಇದೆ,ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಹಾಗೂ ಹವಾಮಾನ ಇಲಾಖೆ ನೀಡಿರುವ ಅಂಕಿಅಂಶಗಳ ಪ್ರಕಾರ ನಗರದಲ್ಲಿ ಅಂತಹ ಮಳೆ ಬರುವುದು ಅನುಮಾನವಾಗಿದೆ. ಆದರೂ ಕಳೆದ ವರ್ಷ ಸುರಿದ ದಾಖಲೆ ಮಳೆ ಪುನರಾವರ್ತನೆಯಾದರೆ ಎನ್ನುವ ಆತಂಕ ಜನರ ಮನದಲ್ಲಿದೆ.

ಪಕ್ಕದ ಕೊಡಗಿನಲ್ಲಿ ಭಾರಿ ಮಳೆಯಾಗಿರುವ ಪರಿಣಾಮ ಉಳಿದ ಮುಂಗಾರಿನ ದಿನಗಳಲ್ಲಿ ನಗರದಲ್ಲಿಯೂ ಮಳೆ ಆರಂಭವಾಗಬಹುದೇ ಎಂಬ ಚಿಂತೆ ಜನರನ್ನು ಕಾಡುತ್ತಿದೆ. ಸಧ್ಯಕ್ಕೆ ಭಾರಿ ಮಳೆಯ ವಾತಾವರಣವೇನು ಇಲ್ಲ.

ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಕೊಡಗು ಜಿಲ್ಲೆಗೆ ಭೇಟಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಕೊಡಗು ಜಿಲ್ಲೆಗೆ ಭೇಟಿ

ಆಂಧ್ರ, ತಮಿಳುನಾಡಿನಲ್ಲಿ ಕರಾವಳಿ ಭಾಗದಲ್ಲಿ ವಾಯುಭಾರ ಕುಸಿತದಿಂದ ಉಂಟಾದರೆ ಬೆಂಗಳೂರಿಗೆ ದಿಢೀರ್ ಮಳೆ ಬರುವ ಸಾಧ್ಯತೆ ಇದೆ. ಆದರೂ ಈ ಕುರಿತು ಬಿಬಿಎಂಪಿ ಯಾವುದೇ ಮುಂಜಾಗ್ರತೆವಹಿಸಿದಂತೆ ಕಾಣುತ್ತಿಲ್ಲ. ಇಂಥ ಅನಾಹುತ ಎದುರಿಸಲು ಬಿಬಿಎಂಪಿ ಮಾತ್ರ ಸಜ್ಜುಗೊಂಡಿಲ್ಲ. ಇನ್ನೂ ಮೋರಿ, ರಾಜಕಾಲುವೆಗಳ ಹೂಳೆತ್ತುವ ಕೆಲಸದಲ್ಲೇ ತೊಡಗಿದೆ.

ಹವಾಮಾನ ವೈಪರೀತ್ಯದಿಂದ ಭಾರಿ ಮಳೆಯಾಗಬಹುದು

ಹವಾಮಾನ ವೈಪರೀತ್ಯದಿಂದ ಭಾರಿ ಮಳೆಯಾಗಬಹುದು

ವಾಯುಭಾರ ಕುಸಿತದಿಂದ ಕುಂಭದ್ರೋಣ ಮಳೆ ಸುರಿದಿರುವ ಉದಾಹರಣೆ ನಗರದಲ್ಲಿ ಇದೆ. ಹವಾಮಾನ ವೈಪರೀತ್ಯ ದಿಂದ ಭಾರಿ ಮಳೆ ಸುರಿಯಬಹುದು, ಭಾರಿ ಮಳೆಗೆ ಮುಂಬೈನಲ್ಲಿ ಅಪಾರ ಹಾನಿ ಸಂಭವಿಸಿರುವುದನ್ನು ನೋಡಿದ್ದೇವೆ, ಅದೇ ರೀತಿ ಬೆಂಗಳೂರಿನಲ್ಲೂ ಅಂಥ ಮಳೆ ಬಂದರೂ ಬರಬಹುದು ಎಂಬ ಆತಂಕವಿದೆ.

ಬೆಂಗಳೂರಿನಲ್ಲಿ ಸೆಪ್ಟೆಂಬರ್‌ನಲ್ಲಿ ಮಳೆ ಬೀಳಲಿದೆ

ಬೆಂಗಳೂರಿನಲ್ಲಿ ಸೆಪ್ಟೆಂಬರ್‌ನಲ್ಲಿ ಮಳೆ ಬೀಳಲಿದೆ

ಸೆಪ್ಟೆಂಬರ್‌ನಲ್ಲಿ ವಾಡಿಕೆಯಂತೆ ಉತ್ತಮ ಮಳೆಯಾಗಲಿದೆ. ಕೇರಳ ಕೊಡಗು ಜಿಲ್ಲೆಯಂತೆ ಬೆಂಗಳೂರಿನಲ್ಲೂ ಭಾರಿ ಮಳೆಯಾಗುತ್ತದೆ ಎಂಬ ಆತಂಕ ಇತ್ತು. ಆದರೆ ಈ ರೀತಿಯ ಸಾಧ್ಯತೆಗಳು ಈವರೆಗಿನ ಮುನ್ಸೂಚನೆ ಮಾಹಿತಿಯಲ್ಲಿ ಕಂಡುಬಂದಿಲ್ಲ.ನಗರದಲ್ಲಿ ಆಗಸ್ಟ್ ಕೊನೆಯವಾರ ಅಥವಾ ಸೆಪ್ಟೆಂಬರ್‌ನಲ್ಲಿ ಮಳೆಯಾಗಲಿದೆ.

ಕಳೆದ ವರ್ಷ ಜುಲೈ ಆಗಸ್ಟ್‌ನಲ್ಲಿ ಸುರಿದ ಮಳೆಯ ಜೀವಹಾನಿ, ಅಪಾರ ಸಂಪತ್ತು ಹಾನಿಗೆ ಕಾರಣವಾಗಿತ್ತು. ಹಿಂದಿನ ಐದು ವರ್ಷದ ದಾಖಲೆಯನ್ನು ಅಳಿಸಿ ಹಾಕಿತ್ತು. ನಗರವನ್ನು ಆತಂಕಕ್ಕೆ ದೂಡಿತ್ತು.

ಬಿಬಿಎಂಪಿ ಇನ್ನೂ ಎಚ್ಚೆತ್ತುಕೊಂಡಿಲ್ಲ

ಬಿಬಿಎಂಪಿ ಇನ್ನೂ ಎಚ್ಚೆತ್ತುಕೊಂಡಿಲ್ಲ

ಕೇರಳ ಕೊಡಗು ನಲ್ಲಿ ಸುರಿದ ಭಾರಿ ಮಳೆ ಅಲ್ಲಿನ ಜನತೆ ಅಸ್ತವ್ಯವಸ್ತಗೊಂಡಿದೆ, ಭಾರಿ ಸಾವು-ನೋವು ಸಂಭವಿಸಿದೆ. ಅಂಥದ್ದೇ ಸನ್ನಿವೇಶ ಬೆಂಗಳೂರಲ್ಲಿ ಉಂಟಾದರೆ ಅದನ್ನು ನಿಭಾಯಿಸುವ ಶಕ್ತಿ ಬಿಬಿಎಂಪಿಗೆ ಇದೆಯೇ ಎನ್ನುವುದು ದೊಡ್ಡ ಪ್ರಶ್ನೆಯಾಗಿದೆ. ಕಳೆದೊಂದು ದಶಕದಿಂದ ಎರೆಡು ಮೂರು ಬಾರಿ ಮಳೆಯಾಗಿದೆ, ಸಂದರ್ಭದಲ್ಲಿ 100 ಮಿ.ಮೀ ನಷ್ಟು ಮಳೆ ಮಳೆಯಾಗಿ ರಸ್ತೆಗಳೆಲ್ಲವೂ ಹೊಳೆಯಾಗಿತ್ತು.

ಕಳೆದ ವರ್ಷ ದುಪ್ಪಟ್ಟು ಮಳೆ

ಕಳೆದ ವರ್ಷ ದುಪ್ಪಟ್ಟು ಮಳೆ

ಬೆಂಗಳೂರು ನಗರದಲ್ಲಿ ಸೆಪ್ಟೆಂಬರ್‌ ತಿಂಗಳ ಸರಾಸರಿ ಮಳೆಯ ಪ್ರಮಾಣ 174 ಮಿಲಿ ಮೀಟರ್‌, ಆದರೆ 2017 ರಲ್ಲಿ ಸರಾಸರಿಗಿಂತ ದುಪ್ಪಟ್ಟು ಮಳೆ ಅಂದರೆ 383 ಮಿ.ಮೀ ಮಳೆಯಾಗಿತ್ತು. ಹಾಗಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿ ಮನೆಗಳಿಗೆ ನೀರು ನುಗ್ಗಿ ಅನಾಹುತ ಸೃಷ್ಟಿಸಿತ್ತು.

English summary
Karnataka State Natural Disaster Management Center said that there will be no heavy rain in Bangalore and normal rainfall expected in coming September.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X