ಬೆಂಗಳೂರಿನಲ್ಲಿ ನನ್ನ ಹೃದಯ ನೆಲೆಸಿದೆ : ಕೃತಿ

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 04: 1 ಎಂಜಿ ಲಿಡೊನಲ್ಲಿ ಫ್ಯಾಷನಬಲ್ ಒನ್ 4ನೇ ಆವೃತ್ತಿಯು ಸಮಾರೋಪಗೊಂಡಿದ್ದು, ಬೆಂಗಳೂರಿನ ಖ್ಯಾತ ವಿನ್ಯಾಸಕ ರಮೇಶ್ ಡೆಂಬ್ಲ ಕ್ಯುರೇಟ್ ಮಾಡಿದ ಫ್ಯಾಷನ್ ಪ್ರಸ್ತುತಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಟಿ ಕೃತಿ, ಬೆಂಗಳೂರಿನಲ್ಲಿ ನನ್ನ ಹೃದಯ ನೆಲೆಸಿದೆ, ಎಲ್ಲೇ ಹೋದರೂ ಇಲ್ಲಿಗೆ ಬಂದಾಗ ಸಿಗುವ ನೆಮ್ಮದಿ ಬೇರೆಡೆ ಸಿಗುವುದಿಲ್ಲ ಎಂದರು.

ಈ ಕಾರ್ಯಕ್ರಮದಲ್ಲಿ 2017ರ ಸಮಕಾಲೀನ ಟ್ರೆಂಡಿಂಗ್‍ನ ಎಂಅಂಡ್‍ಎಸ್, ಬೀಯಿಂಗ್ ಹ್ಯೂಮನ್, ಫ್ಯಾಬ್ ಇಂಡಿಯಾ, ಸ್ಮೂರ್, ಅಲ್ಡೊ, ಹೈಡಿಸೈನ್, ಹೋಲಿ, ಆಯೆಷಾ, ಅಂಡ್, ಗ್ಲೋಬಲ್ ದೇಸಿ, ಡಾ ಮಿಲಾನೊ ಮತ್ತು ಎಫ್‍ಬಿಬಿ ಬ್ರಾಂಡ್ ಉತ್ಪನ್ನಗಳನ್ನು ಪ್ರದರ್ಶಿಸಲಾಯಿತು.

ಆಕರ್ಷಕ ಜಗಮಗಿಸುವ 1 ಎಂಜಿ ಲಿಡೊನಲ್ಲಿ ನಡೆದ ಈ ಕಾರ್ಯಕ್ರಮ ಬೆಂಗಳೂರಿನ ಖ್ಯಾತನಾಮರನ್ನು ಒಳಗೊಂಡಿದ್ದ ಸಂಪೂರ್ಣ ಫ್ಯಾಷನ್ ಉತ್ಸವವಾಗಿತ್ತು. ನಗರದ ಮುಂಚೂಣಿಯ ರೂಪದರ್ಶಿಯರಾದ ಜಾಕಿ ಬೆಸ್ಟರ್‍ವಿಚ್, ಪ್ರಿಯಾಂಕ ದಿವಾನ್, ಅವಾ ಸಫಾರಿ, ಔಚಿತ್ಯ ಠಾಕೂರ್, ಆಕಾಶ್ ಸಿಂಗ್ ರಜ್‍ಪೂತ್, ಮಧುಮೋಹನ್ ಮತ್ತಿತರರು ರ್ಯಾಂಪ್ ಮೇಲೆ ಸ್ಟೈಲ್ ಪ್ರದರ್ಶಿಸಿದರು.

ಬ್ರಾಂಡ್ ಕೃಷ್ಣ ಡೆಂಬ್ಲ ಪ್ರದರ್ಶನ

ಬ್ರಾಂಡ್ ಕೃಷ್ಣ ಡೆಂಬ್ಲ ಪ್ರದರ್ಶನ

ಕಾರ್ಯಕ್ರಮದ ಶಕ್ತಿ ರಮೇಶ್ ಡೆಂಬ್ಲ ಅವರ ಬ್ರಾಂಡ್ ಕೃಷ್ಣ ಡೆಂಬ್ಲ ಪ್ರದರ್ಶನದಲ್ಲಿ ಅಪಾರ ಔನ್ನತ್ಯ ಕಂಡಿತು. ಈ ಸಂಗ್ರಹದಲ್ಲಿ ಅಸಂಖ್ಯ ಬಣ್ಣಗಳಿದ್ದು ಬ್ರೈಡಲ್ ಘಾಗ್ರಾಗಳು ಒಳಗೊಂಡಿದ್ದು ಅವು ಬರೀ ರ್ಯಾಂಪ್‍ಗಳಲ್ಲಿ ಮಾತ್ರವಲ್ಲದೆ ಪ್ರತಿಯೊಬ್ಬ ವಧುವಾಗುವವರೂ ಧರಿಸಬಲ್ಲ ಸಂಗ್ರಹವಾಗಿದೆ.

ಬಾಲಿವುಡ್‍ಗೆ ಜಿಗಿದ ತಾರೆ ಕೃತಿ

ಬಾಲಿವುಡ್‍ಗೆ ಜಿಗಿದ ತಾರೆ ಕೃತಿ

ಬೆಂಗಳೂರಿನಿಂದ ಬಾಲಿವುಡ್‍ಗೆ ಜಿಗಿದ ತಾರೆ ಕೃತಿ ಕರಬಂಧ Ramp ಮೇಲೆ ನಡೆದು ಶೋ ಸ್ಟಾಪರ್ ಎನಿಸಿದರು.

ಈ ಕಾರ್ಯಕ್ರಮ ಕುರಿತು ಚೀಫ್ ಆಪರೇಟಿಂಗ್ ಆಫೀಸರ್ ಸುಮನ್ ಲೆಹರಿ, ``ನಾವು `ಫ್ಯಾಷನಬಲ್ ಒನ್'ನ ನಾಲ್ಕನೇ ಆವೃತ್ತಿಯ ಜನಪ್ರಿಯತೆ ಮತ್ತು ಯಶಸ್ಸಿನಿಂದ ನಮಗೆ ಖುಷಿ ನೀಡಿದೆ

ಮುಂಚೂಣಿಯ ವಾರ್ಷಿಕ ಫ್ಯಾಷನ್ ಕಾರ್ಯಕ್ರಮವಾಗಿರುವ ಫ್ಯಾಷನಬಲ್ ಒನ್ ಹೈ-ಫ್ಯಾಷನ್ ಕೋಷೆಂಟ್‍ಅನ್ನು ನಗರದ ಫ್ಯಾಷನ್ ಪ್ರಿಯರಿಗೆ ಎತ್ತಿ ಹಿಡಿಯುವ ಉದ್ದೇಶ ಹೊಂದಿದೆ. ಪ್ರತಿಯೊಂದು ಆವೃತ್ತಿಯಲ್ಲೂ ನಾವು ಇನ್ನೂ ಉತ್ತಮ ಪ್ರದರ್ಶನ ಕೊಡಬೇಕೆಂಬುದು ನಮ್ಮ ಉದ್ದೇಶ ಎಂದರು.

ಮ್ಯಾನೇಜರ್ ರೋಬಿ ವರ್ಗೀಸ್

ಮ್ಯಾನೇಜರ್ ರೋಬಿ ವರ್ಗೀಸ್

1 ಎಂಜಿ ಲಿಡೊದ ಸೆಂಟರ್ ಮ್ಯಾನೇಜರ್ ರೋಬಿ ವರ್ಗೀಸ್, `ಫ್ಯಾಷನಬಲ್ ಒನ್‍ನ 4ನೇ ಆವೃತ್ತಿ ಅದ್ಧೂರಿ ಯಶಸ್ಸು ಪಡೆದಿದೆ ಮತ್ತು 1ನೇ ಆವೃತ್ತಿಯಿಂದ ಬಹುಪಟ್ಟು ಬೆಳೆದಿದೆ. ಈ ಕಾರ್ಯಕ್ರಮ ಮುಂದಿನ ವರ್ಷಗಳಲ್ಲಿ ಮತ್ತಷ್ಟು ಯಶಸ್ಸು ಪಡೆಯಲಿದೆ' ಎಂದರು.

ಖ್ಯಾತ ನಟಿ ಕೃತಿ ಕರಬಂಧ

ಖ್ಯಾತ ನಟಿ ಕೃತಿ ಕರಬಂಧ

ಖ್ಯಾತ ನಟಿ ಕೃತಿ ಕರಬಂಧ, `ಮನೆ ಎಲ್ಲಿರುವುದೋ ಅಲ್ಲಿ ಹೃದಯ ಇರುತ್ತದೆ. ನಾನು ಎಲ್ಲಿಯೇ ಹೋಗಲಿ, ನಾನು ಬೆಂಗಳೂರಿಗೆ ಬರುವುದನ್ನೇ ಎದುರು ನೋಡುತ್ತಿರುತ್ತೇನೆ. 1ಎಂಜಿ ಲಿಡೊದ ಫ್ಯಾಷನಬಲ್ ಒನ್‍ನ ಕಾರ್ಯಕ್ರಮದಲ್ಲಿ ರ್ಯಾಂಪ್ ಮೇಲೆ ನಡೆಯುವುದು ನಿಜಕ್ಕೂ ಬಹಳ ಸಂತೋಷವಾಗಿದೆ' ಎಂದರು.

ಫ್ಯಾಷನಬಲ್ ಒನ್ 1ಎಂಜಿ ಲಿಡೊ

ಫ್ಯಾಷನಬಲ್ ಒನ್ 1ಎಂಜಿ ಲಿಡೊ

ಫ್ಯಾಷನಬಲ್ ಒನ್ 1ಎಂಜಿ ಲಿಡೊದ ಸಿಗ್ನೇಚರ್ ಫ್ಯಾಷನ್ ಪ್ರಾಪರ್ಟಿಯಾಗಿದೆ. 2ನೇ ದಿನದ ಫ್ಯಾಷನ್ ಉತ್ಸವದಲ್ಲಿ 2017ರ ಶ್ರೇಷ್ಠ ಸ್ಟೈಲ್‍ಗಳನ್ನು ಪ್ರದರ್ಶಿಸಲಾಯಿತು. ತನ್ನ 4ನೇ ಆವೃತ್ತಿಯಲ್ಲಿ ಈ ಕಾರ್ಯಕ್ರಮ ಮತ್ತಷ್ಟು ಉತ್ತಮ ಹಾಗೂ ದೊಡ್ಡದಾಗುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Kriti Kharbanda walks the ramp as show stopped at 1MG Lido's Fashionable One show. The 2day fashion extravaganza witnessed top brands such as Aldo, Hidesign, M&S, And, Global Desi, Smoor, Ayisha and many more…showcasing the best of 2017’s styles.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ