ಕ್ರಿಸ್ತು ಜಯಂತಿ ಕಾಲೇಜಿನಲ್ಲಿ ತೆರೆದುಕೊಂಡ ಪುಸ್ತಕ ಭಂಡಾರ

Subscribe to Oneindia Kannada

ಬೆಂಗಳೂರು, ಆಗಸ್ಟ್, 10: ಅಲ್ಲಿ ಪುಸ್ತಕಗಳ ಬಹುದೊಡ್ಡ ಭಂಡಾರವಿತ್ತು. ಕೋರ್ಸ್ ಗಳಿಗೆ ಸಂಬಂಧಿಸಿದ ಪುಸ್ತಕಗಳ ಜತೆಗೆ ವ್ಯಕ್ತಿತ್ವ ವಿಕಸನ, ಕಾದಂಬರಿ, ಕವಿತೆ, ಲಲಿತ ಪ್ರಭಂಧ,ಇಂಗ್ಲಿಷ್ ಸಾಹಿತ್ಯ ಎಲ್ಲವೂ ಇದ್ದವು.

ಕಳೆದ 17 ವರ್ಷದಿಂದ ಬೆಂಗಳೂರಿನ ಪೂರ್ವದಲ್ಲಿ ವಿದ್ಯಾರ್ಥಿಗಳಿಗೆ ಜ್ಞಾನದ ಹಸಿವು ನೀಗಿಸುತ್ತಿರುವ ಕ್ರಿಸ್ತು ಜಯಂತಿ ಕಾಲೇಜಿನಲ್ಲಿ ಎರಡು ದಿನಗಳ 'ಜ್ಞಾನ ದರ್ಶನ' ಪುಸ್ತಕಗಳ ಪ್ರದರ್ಶನ ಆರಂಭವಾಗಿದೆ.[ಬೆಂಗಳೂರಿನ ಕ್ರಿಸ್ತು ಜಯಂತಿ ಕಾಲೇಜಿನಲ್ಲಿ ಜ್ಞಾನದ ಹರಿವು]

ಪುಸ್ತಕ ಹಬ್ಬದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ಏನು ಹೇಳಿದರು?

ಅತ್ಯಾಧುನಿಕ ಸಂಪನ್ಮೂಲಗಳ ಕಾಲೇಜಿನ ಬಗ್ಗೆ ಒಂದು ನೋಟವನ್ನು ಹರಿಸಲೇಬೇಕು. ಹಿರಿಯ ಪತ್ರಕರ್ತ, ಒನ್ ಇಂಡಿಯಾ ಕನ್ನಡ ಪ್ರಧಾನ ಸಂಪಾದಕ ಎಸ್ ಕೆ ಶಾಮಸುಂದರ್ ಪುಸ್ತಕ ಮೇಳದ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.

ಕ್ರಿಸ್ತು ಜಯಂತಿ ಕಾಲೇಜು ಎಲ್ಲಿದೆ?

ಕ್ರಿಸ್ತು ಜಯಂತಿ ಕಾಲೇಜು ಎಲ್ಲಿದೆ?

ಬೆಂಗಳೂರಿನ ಪೂರ್ವದ ಬಾಣಸವಾಡಿ ಸಮೀಪದ ನಾರಾಯಣಪುರದಲ್ಲಿ ವಿಶಾಲವಾದ ಕಾಲೇಜಿದ್ದು ಎರಡು ಗ್ರಂಥಾಲಯಗಳನ್ನು ಹೊಂದಿದೆ. ಪಿಜಿ ಮತ್ತು ಯುಜಿ ಕೋರ್ಸಿಗೆ ಪ್ರತ್ಯೇಕ ಗ್ರಂಥಾಲಯಗಳಿವೆ.

46 ಸಾವಿರ ಪುಸ್ತಕಗಳು

46 ಸಾವಿರ ಪುಸ್ತಕಗಳು

ಕಾಲೇಜಿನ ಗ್ರಂಥಾಲಯದಲ್ಲಿ 46 ಸಾವಿರ ಪುಸ್ತಕಗಳು ಇವೆ. ಯುಜಿ ಮತ್ತು ಪಿಜೆ ಸೇರಿದಂತೆ ಸುಮಾರು 28 ಕ್ಕೂ ಅಧಿಕ ಕೋರ್ಸ್ ಗಳು ವಿದ್ಯಾರ್ಥಿಗಳಿಗೆ ಲಭ್ಯವಿದೆ ಎಂದು ಗ್ರಂಥಾಲಯ ನಿರ್ವಹಣೆ ಹೊಣೆ ಹೊತ್ತಿರುವ ಹರೀಶ್ ಹೇಳುತ್ತಾರೆ.

ಒಳ್ಳೆಯ ಪ್ರತಿಕ್ರಿಯೆ ಇದೆ

ಒಳ್ಳೆಯ ಪ್ರತಿಕ್ರಿಯೆ ಇದೆ

ನಾನು ಕಳೆದ 5 ವರ್ಷಗಳಿಂದ ಇಲ್ಲಿಗೆ ಬರುತ್ತಿದ್ದೇನೆ. ಉತ್ತಮ ಪ್ರತಿಕ್ರತಿಯೆ ಸಿಗುತ್ತಿದೆ. ಕನ್ನಡ ಪುಸ್ತಕಗಳಿಗಿಂತ ಇಂಗ್ಲಿಷ್ ಪುಸ್ತಕಗಳನ್ನು ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳುತ್ತಾರೆ ಎಂದು ಸ್ಟಾಲ್ ಹಾಕಿರುವ ಚಾಮರಾಜಪೇಟೆಯ ನಾಲೇಜ್ ಬುಕ್ ಹೌಸ್ ನ ಮಾಲೀಕರು ಹೇಳುತ್ತಾರೆ.

ಜ್ಞಾನದ ಹರಿವಿಗೆ ಕಾರಣ

ಜ್ಞಾನದ ಹರಿವಿಗೆ ಕಾರಣ

ಇಂಥ ಕಾರ್ಯಕ್ರಮಗಳು ನಮ್ಮ ಯೋಚನೆಯ ಹರಿವನ್ನು ವಿಸ್ತಾರ ಮಾಡಿತ್ತವೆ. ಇದೊಂದು ಒಳ್ಳೆಯ ಕಲಿಕಾ ಅನುಭವ, ದಿನದ ಓದಿನ ಜತೆ ಸಾಹಿತ್ಯಿಕ ಓದು ಸಾಕಾರವಾಗುತ್ತದೆ ಎಂದು ಕಾಲೇಜಿನ ವಿದ್ಯಾರ್ಥಿನಿ ಅನಿಷಾ ಹೇಳುತ್ತಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Book Publishers and Students at Kristu Jayanthi College faculty members share their thoughts on Book Fare and what it means to them. 2 day book fest was organized at the college campus to promote reading habits. Syllabus and reference books. It was a great day at the college. Management, Librarians, Publishers, faculty and the students unite and one umbrella in Bengaluru.
Please Wait while comments are loading...