ಕೃಷ್ಣಗಿರಿ: ಕಾರು, ಲಾರಿ, ಬಸ್ ನಡುವೆ ಡಿಕ್ಕಿ, 16 ಸಾವು

Posted By:
Subscribe to Oneindia Kannada

ಕೃಷ್ಣಗಿರಿ, ಜೂನ್ 03: ಕೃಷ್ಣಗಿರಿಗೆ ತೆರಳುತ್ತಿದ್ದ ಖಾಸಗಿ ಬಸ್, ಲಾರಿ ಹಾಗೂ ಕಾರೊಂದರ ನಡುವೆ ಡಿಕ್ಕಿ ಸಂಭವಿಸಿದೆ. ಈ ಭೀಕರ ಅಪಘಾತದಲ್ಲಿ 16 ಜನ ಸಾವನ್ನಪ್ಪಿದ್ದಾರೆ.

ಬೆರಿಗೈಯಿಂದ ಕೃಷ್ಣಗಿರಿಗೆ ತೆರಳುತ್ತಿದ್ದ ಖಾಸಗಿ ಬಸ್ (33 ಪ್ರಯಾಣಿಕರಿದ್ದರು)ಗೆ ಕರ್ನಾಟಕದ ಕಡೆಯಿಂದ ಬಂದ ಲಾರಿಯೊಂದು ಅಪ್ಪಳಿಸಿದೆ. ಈ ನಡುವೆ ಕಾರೊಂದು ಸಿಲುಕಿಕೊಂಡಿದೆ.

Krishnagiri:multiple collisions kills 14

ಮೆಲುಮಲೈ ಪ್ರದೇಶದಲ್ಲಿ ಸಂಭವಿಸಿದ ಈ ಅಪಘಾತದಲ್ಲಿ 6 ಜನ ಮಹಿಳೆಯರು 12 ವರ್ಷದ ಮಗು ಸೇರಿದಂತೆ 16 ಜನ ಸಾವನ್ನಪ್ಪಿರುವ ಮಾಹಿತಿ ಸಿಕ್ಕಿದೆ. 30ಕ್ಕೂ ಅಧಿಕ ಮಂದಿಗೆ ಗಾಯಗಳಾಗಿವೆ.
ಕೃಷ್ಣಗಿರಿ: ಕಾರು, ಲಾರಿ, ಬಸ್ ನಡುವೆ ಡಿಕ್ಕಿ, 14 ಸಾವು

ಕೃಷ್ಣಗಿರಿ: ಕಾರು, ಲಾರಿ, ಬಸ್ ನಡುವೆ ಡಿಕ್ಕಿ, 14 ಸಾವು

-
-
-
-

ತಮಿಳುನಾಡು -ಕರ್ನಾಟಕ ನಡುವಿನ ರಾಷ್ಟ್ರೀಯ ಹೆದ್ದಾರಿಯ ಸೂಳಗಿರಿ ಎಂಬಲ್ಲಿ ಬಸ್ ತೆರಳುವಾಗ ಡಿವೈಡರ್ ದಾಟಿ ನುಗ್ಗಿದ ಲಾರಿ ಡಿಕ್ಕಿ ಹೊಡೆದಿದೆ. ನಂತರ ಸರಣಿ ಅಪಘಾತ ಸಂಭವಿಸಿದೆ. ಗಾಯಾಳುಗಳ ಪೈಕಿ 10 ಜನರನ್ನು ಬೊಮ್ಮಸಂದ್ರ ಸ್ಪರ್ಶ್ ಆಸ್ಪತ್ರೆಗೆ ಸೇರಿಸಲಾಗಿದ್ದು, ಮಿಕ್ಕವರನ್ನು ಕೃಷ್ಣಗಿರಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

ಬೈಕ್ ಸವಾರನೊಬ್ಬ ತಕ್ಷಣವೇ ಪೊಲೀಸರಿಗೆ ಕರೆ ಮಾಡಿ, ಆಂಬ್ಯುಲೆನ್ಸ್ ಕರೆಸಿ ಗಾಯಾಳುಗಳಿಗೆ ನೆರವಾಗಿದ್ದು ಕಂಡು ಬಂದಿತು. ಅಪಘಾತದ ಬಳಿಕ ಬೆಂಗಳೂರು -ಸೇಲಂ ಹೆದ್ದಾರಿಯಲ್ಲಿ ಎರಡು ಗಂಟೆಗಳಿಗೂ ಅಧಿಕ ಕಾಲ ಸಂಚಾರ ಸ್ತಬ್ದವಾಗಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Fourteen people including six women and a 12-year-old child were killed in a multiple collisions involving a bus, a lorry and a car here in Melumalai in Krishnagiri.
Please Wait while comments are loading...