ಇಸ್ಕಾನ್ ನಲ್ಲಿ ಕೃಷ್ಣ ಜನ್ಮಾಷ್ಟಮಿ: ಸಂಚಾರ ವ್ಯವಸ್ಥೆ ಬದಲಾಗಿದೆ

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 24: ಕೃಷ್ಣ ಜನ್ಮಾಷ್ಟಮಿ ಆಚರಣೆ ಅಂಗವಾಗಿ ವೆಸ್ಟ್ ಆಫ್ ಕಾರ್ಡ್ ರೋಡ್ ನ ಇಸ್ಕಾನ್ ಮಂದಿರದಲ್ಲಿ ಆ.24, 25ರಂದು ಅದ್ಧೂರಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕಾರ್ಯಕ್ರಮಗಳಿಗೆ ಬರುವ ಗಣ್ಯರು ಹಾಗೂ ಸಾರ್ವಜನಿಕರ ಸಂಖ್ಯೆ ಹೆಚ್ಚಾಗುವುದರಿಂದ ಸುಗಮ ಸಂಚಾರಕ್ಕಾಗಿ ಪೊಲೀಸರು ಕೆಲವು ಬದಲಾವಣೆಗಳನ್ನು ಮಾಡಿದ್ದಾರೆ.

ಸಂಚಾರ ಬಂದೋಬಸ್ತ್ ಗಾಗಿ ಹೆಚ್ಚಿನ ಸಿಬ್ಬಂದಿ ನಿಯೋಜಿಸಿ, ಇಸ್ಕಾನ್ ಮಂದಿರಕ್ಕೆ ಬರುವ ವಾಹನಗಳ ನಿಲುಗಡೆ ವ್ಯವಸ್ಥೆ ಮತ್ತು ಸಂಚಾರದಲ್ಲಿ ತಾತ್ಕಾಲಿಕವಾಗಿ ಮಾರ್ಪಾಡು ಮಾಡಲಾಗಿದೆ.[ಬಸವನಗುಡಿಯ ಶ್ರೀಪುತ್ತಿಗೆ ಮಠದಲ್ಲಿ ವೈಭವದ ಶ್ರೀಕೃಷ್ಣ ಲೀಲೋತ್ಸವ]

Krishna janmshtami at ISKON: Changes in Traffic

ಪರ್ಯಾಯ ಸಂಚಾರ ವ್ಯವಸ್ಥೆ: ತುಮಕೂರು ರಸ್ತೆ ಕಡೆಯಿಂದ ವೆಸ್ಟ್ ಆಫ್ ಕಾರ್ಡ್ ರೋಡ್ ಕಡೆಗೆ ಸಂಚರಿಸುವ ಎಲ್ಲ ವಾಹನಗಳು ಮಾರಪ್ಪನ ಪಾಳ್ಯದಲ್ಲಿ ನೇರವಾಗಿ ಸಂಚರಿಸಿ - ಯಶವಂತಪುರ - ಬಿ.ಎಚ್.ಇ.ಎಲ್., ಮಾರಮ್ಮ ಸರ್ಕಲ್ - ಬೆಂಗಳೂರು ನಗರದ ಕಡೆಗೆ ಸಂಚರಿಸಬಹುದು.

ಇಸ್ಕಾನ್ ಮಂದಿರಕ್ಕೆ ಬರುವ ವಾಹನ ಚಾಲಕರು, ಸವಾರರು ತಮ್ಮ ವಾಹನವನ್ನು ನಿಲುಗಡೆ ಮಾಡಲು ವಿವಿಐಪಿ., ಪಾರ್ಕಿಂಗ್ ಇಸ್ಕಾನ್ ಬೆಟ್ಟದ ಮೇಲೆ (ಇಸ್ಕಾನ್ ಆವರಣ) ಸ್ಥಳಾವಕಾಶ ಕಲ್ಪಿಸಲಾಗಿದೆ. ಅದೇ ರೀತಿ ವೆಸ್ಟ್ ಆಫ್ ಕಾರ್ಡ್ ರೋಡ್ ಸಂಚರಿಸಿ, ಮಹಾಲಕ್ಷ್ಮೀ ಲೇ ಔಟ್ ಜ್ಯೂಸ್ ಫ್ಯಾಕ್ಟರಿ ಮೈದಾನದಲ್ಲಿ (ಕಮಲಮ್ಮ ಗುಂಡಿ ಎದುರು) ನಾಲ್ಕು ಚಕ್ರದ ವಾಹನಗಳ ನಿಲುಗಡೆಗೆ ಸ್ಥಳಾವಕಾಶ ಕಲ್ಪಿಸಲಾಗಿದೆ.[ಮತ್ತೆ ಬರಲಿದ್ದಾನೆ ಶ್ರೀಕೃಷ್ಣ, 50 ಹೆಸರುಗಳ ಅರ್ಥ]

ವೆಸ್ಟ್ ಆಫ್ ಕಾರ್ಡ್ ರೋಡ್ ಅಷ್ಟಲಕ್ಷ್ಮಿ ದೇವಸ್ಥಾನ ಪಕ್ಕದ ಪೈಪ್ ಲೇನ್ ರಸ್ತೆಯಲ್ಲಿ ದ್ವಿಚಕ್ರ ವಾಹನಗಳ ನಿಲುಗಡೆಗೆ ಸ್ಥಳವಕಾಶ ಕಲ್ಪಿಸಲಾಗಿದೆ. ಮೆಟ್ರೋ ಕೆಳಭಾಗದ ರಸ್ತೆಯ ಪಕ್ಕದಲ್ಲಿ ನಾಲ್ಕು ಚಕ್ರ/ ದ್ವಿಚಕ್ರ ವಾಹನಗಳ ನಿಲುಗಡೆಗೆ ಸ್ಥಳಾವಕಾಶ ಕಲ್ಪಿಸಲಾಗಿದೆ.[ಕದ್ರಿ ಶ್ರೀಮಂಜುನಾಥ ದೇವಸ್ಥಾನದಲ್ಲಿ ಶ್ರೀ ಕೃಷ್ಣ ವೇಷ ಸ್ಪರ್ಧೆ ಆ 24ಕ್ಕೆ]

ಡಾ.ರಾಜ್ ಕುಮಾರ್ ರಸ್ತೆಯಲ್ಲಿ ಮೇಲು ಸೇತುವೆ ಕಾಮಗಾರಿ ಪ್ರಗತಿಯಲ್ಲಿರುವುದರಿಂದ ಮತ್ತು ಆ.24, 25ರಂದು ಬೆಳಿಗ್ಗೆ 7ಗಂಟೆಯಿಂದ ರಾತ್ರಿ 11 ಗಂಟೆಯವರೆಗೂ ಎಲ್ಲ ವಾಹನಗಳ ಚಾಲಕರು/ಸವಾರರು ಈ ಮೇಲ್ಕಂಡ ರಸ್ತೆಯಲ್ಲಿ ಸಂಚರಿಸದೇ ತಾತ್ಕಾಲಿಕವಾಗಿ ಪರ್ಯಾಯ ರಸ್ತೆಗಳಲ್ಲಿ ಸಂಚರಿಸುವಂತೆ ಮನವಿ ಮಾಡಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Krishna janmashtami celebration at ISKON on August 24 and 25th. Anticipation of huge crowd there are some changes in traffic. So, police department requested public to cooperate.
Please Wait while comments are loading...