ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗ್ರಾಮೀಣ ಕುಡಿವ ನೀರಿನ ಅನುದಾನ ಕಟ್: ಕೃಷ್ಣ ಬೈರೇಗೌಡ ಆಕ್ರೋಶ

By Nayana
|
Google Oneindia Kannada News

ಬೆಂಗಳೂರು, ಜೂನ್ 12: ಗ್ರಾಮೀಣ ಪ್ರದೇಶದ ಕುಡಿಯುವ ನೀರಿನ ಯೋಜನೆಗೆ ಕೇಂದ್ರ ಸರ್ಕಾರ ನೀಡುತ್ತಿದ್ದ ಶೇ.50ರಷ್ಟು ಅನುದಾನವನ್ನು ಕೇವಲ ಶೇ.12ಕ್ಕೆ ಇಳಿಸಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಡಿಯುವ ನೀರಿಗೆ ಕೇಂದ್ರ ಸರ್ಕಾರ ನೀಡುತ್ತಿದ್ದ ಅನುದಾನ ಕುಂಠಿತವಾಗಿದೆ. 3 ವರ್ಷದ ಹಿಂದೆ ಕೇಂದ್ರ, ರಾಜ್ಯ ಶೇ.50ರಷ್ಟು ಇತ್ತು. ಆದರೆ ಪ್ರಸ್ತುತ ಕೇಂದ್ರ ಶೇ.12, ರಾಜ್ಯ ಶೇ.88ರಷ್ಟು ಅನುದಾನ ವ್ಯತ್ಯಾಸವಾಗಿದೆ ಎಂದರು.

ಮೋದಿ ಸರ್ಕಾರಕ್ಕೆ 4 ವರ್ಷ : ಶುದ್ಧ ಕುಡಿಯುವ ನೀರು ಪ್ರತಿಯೊಬ್ಬರ ಹಕ್ಕುಮೋದಿ ಸರ್ಕಾರಕ್ಕೆ 4 ವರ್ಷ : ಶುದ್ಧ ಕುಡಿಯುವ ನೀರು ಪ್ರತಿಯೊಬ್ಬರ ಹಕ್ಕು

ಉದ್ಯೋಗ ಖಾತ್ರಿ ಬಾಬ್ತು 1050 ಕೋಟಿ ರೂ. ಕೇಂದ್ರ ಸರ್ಕಾರ ಬಾಕಿ ಉಳಿಸಿಕೊಂಡಿದೆ, ರಾಜ್ಯ ಸರ್ಕಾರದ ಹಣ ವಾಪಸ್ ಕೊಡಬೇಕಿದೆ. ಕೇಂದ್ರ ಸರ್ಕಾರ ಸಾಲದಲ್ಲಿದೆ ಎಂದರು. ಆಡಳಿತ ವ್ಯವಸ್ಥೆ 20 ವರ್ಷದಿಂದ ಕುಸಿದಿದೆ ಅದರ ಸುಧಾರಣೆ ನಮ್ಮ ಜವಾಬ್ದಾರಿಯಾಗಿದೆ., ಸದ್ಯ ನಾವು ಅದೇ ಪ್ರಯತ್ನವನ್ನು ಮಾಡುತ್ತಿದ್ದೇವೆ,ಎಲ್ಲಾ ಹಂತದಲ್ಲೂ ಭ್ರಷ್ಟಾಚಾರವಿದೆ.

Krishna Byregowda alleges central govt cut down aid for drinking water

ಮೇಲಿಂದ ಆರಂಭವಾಗಿ ಕೆಳಗಿನ ಹಂತದವರೆಗೂ ಇದೆ, ನಾನು 24 ಕ್ಯಾರೆಟ್ ಅಪರಂಜಿ ಎಂದು ಹೇಳಲು ಸಾಧ್‌ಯವಿಲ್ಲ ಹಾಗೆಂದರೆ ಆತ್ಮವಂಚನೆ ಮಾಡಿಕೊಂಡಂತೆ, ನಮ್ಮ ಕೆಲಸ ಪ್ರಾಮಾಣಿಕವಾಗಿ, ಆತ್ಮವಂಚನೆ ಇಲ್ಲದೇ ಮಾಡಲು ಮಾತ್ರ ಸಾಧ್ಯವಿದೆ ಎಂದು ಹೇಳಿದರು.

English summary
RDPR minister Krishna Byregowda alleged that central government has cut down aid for rural drinking water from 50 percent to 12 percent. He also said that state government forced to bear the 82 percent of aid for the purpose rather earlier 50 percent.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X