ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆನ್‌ಲೈನ್‌ ಮೂಲಕ 280 ಕೋಟಿ ವಂಚಿಸಿದ್ದವರ ಬಂಧನ

|
Google Oneindia Kannada News

ಬೆಂಗಳೂರು, ಡಿ.15 : ಹಣ ದ್ವಿಗುಣಗೊಳಿಸಿ ಕೊಡುವುದಾಗಿ ಆನ್‌ಲೈನ್‌ನಲ್ಲಿ ಜಾಹೀ­ರಾತು ನೀಡಿ ಸುಮಾರು 280 ಕೋಟಿ ವಂಚನೆ ಮಾಡಿದ್ದ ಅಡೂಪ್ಸ್‌ ಸಂಸ್ಥೆಯ ಐವರು ಪ್ರತಿನಿಧಿ­ಗಳನ್ನು ಕೆ.ಆರ್‌.ಪುರ ಪೊಲೀಸರು ಬಂಧಿಸಿದ್ದಾರೆ. ಸಂಸ್ಥೆಯ ಮುಖ್ಯಸ್ಥ ಪರಾರಿಯಾಗಿದ್ದಾನೆ.

ಅಡೂಪ್ಸ್‌ ಸಂಸ್ಥೆಯ ಮುಖ್ಯಸ್ಥ ದಾಮೋದರ್‌ ರೆಡ್ಡಿ ಪರಾರಿಯಾಗಿದ್ದು, ಸಂಸ್ಥೆಯ ಐವರು ಪ್ರತಿನಿಧಿಗಳು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಕರ್ನಾಟಕ, ಆಂಧ್ರಪ್ರದೇಶ ಸೇರಿದಂತೆ ಮೂರು ರಾಜ್ಯಗಳಲ್ಲಿ ಜನರಿಗೆ ಇವರು ವಂಚಿಸಿದ್ದರು ಎಂಬುದು ಪ್ರಾಥಮಿಕ ವಿಚಾರಣೆಯಿಂದ ತಿಳಿದುಬಂದಿದೆ. [ಕಿವೀಸ್ ಮಹಿಳೆ ವಂಚನೆ ಜಾಲ ಬಯಲು]

chain link scam

ಅಡೂಪ್ಸ್‌ ಸಂಸ್ಥೆಯಲ್ಲಿ ಹಣ ಹೂಡಿದರೆ 140 ದಿನಗಳಲ್ಲಿ ದ್ವಿಗುಣಗೊಳಿಸಿ ಕೊಡುತ್ತೇವೆ ಎಂದು ಆರೋಪಿಗಳು ಆನ್‌ಲೈನ್ ಮೂಲಕ ಜಾಹೀರಾತು ನೀಡುತ್ತಿದ್ದರು. ಅಲ್ಲದೇ, ಹೂಡಿಕೆದಾರರಿಗೆ ಸಂಸ್ಥೆಯ ಲಾಭದಲ್ಲಿ ಪ್ರತಿನಿತ್ಯ ಪಾಲು ಕೊಡಲಾ­ಗುತ್ತದೆ ಎಂದು ಆಮಿಷವೊಡುತ್ತಿದ್ದರು.

ಹೂಡಿಕೆದಾರರು ಮತ್ತಷ್ಟು ಮಂದಿಯಿಂದ ಹಣ ಹೂಡಿ­ಸಿದರೆ ಕಮಿಷನ್‌ ಕೊಡುವು­ದಾಗಿ ದಾಮೋದರ್‌ ರೆಡ್ಡಿ ಅವರು ಜನರಿಗೆ ಮಾಹಿತಿ ನೀಡುತ್ತಿದ್ದರು. ಹೈದರಾಬಾದ್‌ ಮೂಲದ ದಾಮೋದರ್‌, ಕೆ.ಆರ್. ಪುರಂನಲ್ಲಿ ಮೇ ತಿಂಗಳಿನಲ್ಲಿ ಕಚೇರಿ ತೆರೆದು ವಹಿವಾಟು ಆರಂಭಿಸಿದ್ದರು.

ಮೂರು ರಾಜ್ಯದ ಸುಮಾರು ನಾಲ್ಕು ಸಾವಿರ ಜನರು ಈ ಸಂಸ್ಥೆಯಲ್ಲಿ ಹಣ ಹೂಡಿ ವಂಚನೆಗೊಳಗಾಗಿದ್ದಾರೆ. ರಾಜ್ಯದಲ್ಲಿ ಸುಮಾರು 10 ಕೋಟಿ ಹಾಗೂ ಆಂಧ್ರಪ್ರದೇಶ ಸೇರಿದಂತೆ ಮೂರು ರಾಜ್ಯಗಳಲ್ಲಿ ಒಟ್ಟು 280 ಕೋಟಿ ವಂಚನೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

English summary
Bengaluru KR Puram police busted online scam which is suspected to have cheated 280 core for people. Five persons were running an online advertisement viewing and chain link scheme. This website was operated by Damodar Reddy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X