ಗಾರ್ಡನ್ ಸಿಟಿ ಕಾಲೇಜಿನಲ್ಲಿ 'ಕನ್ನಡೋತ್ಸವ', ಬಿದರಿಗೆ ಸನ್ಮಾನ

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 20: ನಗರದ ಕೆ.ಆರ್.ಪುರಂನಲ್ಲಿರುವ ಗಾರ್ಡನ್ ಸಿಟಿ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕನ್ನಡೋತ್ಸವ ಇದು ಕರುನಾಡು ಹೃದಯಗಳ ಉತ್ಸವ ಎಂಬ ಕಾರ್ಯಕ್ರಮದಲ್ಲಿ ಮಾಜಿ ಡಿಜಿಪಿ ಶಂಕರ್ ಬಿದರಿ ಅವರನ್ನು ಸನ್ಮಾನಿಸಲಾಯಿತು.

ಭಾಷೆ, ದ್ವೇಷ, ಪ್ರದೇಶ ಹಾಗೂ ಲಿಂಗವನ್ನು ಮರೆತು ನಾವು ಸತ್ಪ್ರಜೆಗಳಾಗಿ ಬೆಳೆಯಬೇಕು ಎಂದು ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಶಂಕರ್ ಬಿದರಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ನಗರದ ಕೆ.ಆರ್.ಪುರಂ ಗಾರ್ಡನ್ ಸಿಟಿ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕನ್ನಡೋತ್ಸವ ಇದು ಕರುನಾಡು ಹೃದಯಗಳ ಉತ್ಸವ ಎಂಬ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇತಿಹಾಸವನ್ನು ನೋಡಿದಾಗ ನಾಡಿಗೆ ಹಾಗೂ ದೇಶಕ್ಕೆ ಬಹಳಷ್ಟು ಮಹತ್ವ ಸಿಕ್ಕಿದೆ. ರಾಜ್ಯದ ಭಾಷೆಗಳನ್ನು ಮರೆತು ನಾವೆಲ್ಲರೂ ಭಾರತಾಂಬೆಯ ಮಕ್ಕಳು ಎಂಬುದನ್ನು ಅರಿಯಬೇಕು. ನಮ್ಮ ದೇಶದಲ್ಲಿ ಹೊರ ದೇಶದವರಿಗೆ ತೊಂದರೆ ಮಾಡದೆ, ನಮ್ಮಲ್ಲಿ ಅವರಿಗೆ ಜಾಗ ಕೊಟ್ಟಿದ್ದೇವೆ. ಇದು ಭಾರತೀಯ ಸಹೃದಯದ ಮನೋಭಾವ ಎಂದು ಹೇಳಿದರು.

ಗೆಲುವಿಗೆ ಯಾವುದೇ ಅಡ್ಡದಾರಿ ಇಲ್ಲ

ಗೆಲುವಿಗೆ ಯಾವುದೇ ಅಡ್ಡದಾರಿ ಇಲ್ಲ

ಗೆಲುವಿಗೆ ಯಾವುದೇ ಅಡ್ಡದಾರಿ ಇಲ್ಲ. ಸಾಧನೆ ಮಾಡಬೇಕಾದರೆ ನೇರ ಮಾರ್ಗದಲ್ಲಿ ನಡೆದಾಗ ಮಾತ್ರ ಜೀವನದಲ್ಲಿ ಯಶಸ್ಸು ಸಿಗುತ್ತದೆ ಎಂದು ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಶಂಕರ್ ಬಿದರಿ ತಿಳಿಸಿದರು.

ಭಾಷೆಯನ್ನು ಉಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮ

ಭಾಷೆಯನ್ನು ಉಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮ

ಗಾರ್ಡನ್ ಸಿಟಿ ಕಾಲೇಜಿಗೆ ರಾಜ್ಯದ ವಿದ್ಯಾರ್ಥಿಗಳಲ್ಲದೆ, ವಿವಿಧ ರಾಜ್ಯ ಹಾಗೂ ಹೊರ ದೇಶದ ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಾರೆ. ಕನ್ನಡ ಭಾಷೆ ನಶಿಸುತ್ತಿರುವದರಿಂದ ಭಾಷೆಯನ್ನು ಉಳಿಸುವ ನಿಟ್ಟಿನಲ್ಲಿ ಇಂಥ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕಾಲೇಜಿನ ಅಧ್ಯಕ್ಷ ವಿ.ಜಿ.ಜೋಸೆಫ್ ಹೇಳಿದರು.

ನವೆಂಬರ್ ಮಾಸಕ್ಕೆ ಮಾತ್ರ ಸೀಮಿತವಲ್ಲ

ನವೆಂಬರ್ ಮಾಸಕ್ಕೆ ಮಾತ್ರ ಸೀಮಿತವಲ್ಲ

ಕನ್ನಡ ಕಾರ್ಯಕ್ರಮ ನವೆಂಬರ್ ಮಾಸಕ್ಕೆ ಮಾತ್ರ ಸೀಮಿತವಾಗದೆ ವರ್ಷಪೂರ್ತಿ ಆಚರಿಸಬೇಕು. ರಾಜ್ಯದ ವಿದ್ಯಾರ್ಥಿಗಳು ಸೇರಿದಂತೆ ಅನ್ಯ ಭಾಷೆಯವರಿಗೂ ನಾಡ-ನುಡಿಯ ಸಂಸ್ಕೃತಿ, ಆಚಾರ-ವಿಚಾರ, ನೆಲ ಜಲದ ಗೌರವ ಹಾಗೂ ಭಾಷೆಗೆ ಇರುವ ಮಹತ್ವ ಬಗ್ಗೆ ಜಾಗೃತಿ ಮೂಡಿಸುವುದೇ ಈ ಕಾರ್ಯಕ್ರಮದ ಮೂಲ ಉದ್ದೇಶ.

ಸಂಶೋಧನಾತ್ಮಕ ಲೇಖಕ ಯೋಗೀಶ್ ಮಾಸ್ಟರ್

ಸಂಶೋಧನಾತ್ಮಕ ಲೇಖಕ ಯೋಗೀಶ್ ಮಾಸ್ಟರ್

ಸಂಶೋಧನಾತ್ಮಕ ಲೇಖಕ ಯೋಗೀಶ್ ಮಾಸ್ಟರ್ ಮಾತನಾಡಿ, ಕನ್ನಡ ಭಾಷೆಯೊಂದು ಅನುಭವ ಮಂಟಪವಿದ್ದಂತೆ. ಇಲ್ಲಿ ಎಲ್ಲಾ ಕಸುಬುದಾರರು ತಮ್ಮ ಚೌಕಟ್ಟಿನ ಅನುಭವ ಹಂಚಿಕೊಂಡು ಜೀವನ ನಡೆಸುತ್ತಾರೆ. ಚೌಕಟ್ಟಿನಿಂದ ಹೊರಬಂದು ಹೊಸ ಪ್ರಯೋಗಗಳನ್ನು ಮಾಡಬೇಕು ಆಗ ಕನ್ನಡ ಭಾಷೆಯ ಪರಂಪರೆ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಭಾಷೆಯನ್ನು ಮತ್ತಷ್ಟು ಶಿಖರಕ್ಕೆ ಏರಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಯಾವ ಭಾಷೆಗೂ ಇಂತಹ ಹೆಮ್ಮೆಯ ಕಿರೀಟ ಇಲ್ಲ

ಯಾವ ಭಾಷೆಗೂ ಇಂತಹ ಹೆಮ್ಮೆಯ ಕಿರೀಟ ಇಲ್ಲ

ಕನ್ನಡದ ದಾಸವರೇಣ್ಯರಾದ ಪುರಂದರದಾಸರು, ಕನಕದಾಸರು ಭಕ್ತಿಪಂಥದ ತಮ್ಮ ಕೀರ್ತನೆಗಳ ಮೂಲಕ ಅದ್ಭುತವಾದ ಕ್ರಾಂತಿ ಮಾಡಿದವರು. ನಾಡು-ನುಡಿಯನ್ನು ಶ್ರೀಮಂತಹೊಳಿಸಿದವರು. ಏಳು ಬಾರಿ ಜ್ಞಾನಪೀಠ ಪ್ರಶಸ್ತಿ ಪಡೆದ ಹೆಮ್ಮೆ ನಮ್ಮ ಕನ್ನಡಕ್ಕಿದೆ. ಬೇರೆ ಯಾವ ಭಾಷೆಗೂ ಇಂತಹ ಹೆಮ್ಮೆಯ ಕಿರೀಟ ಇರಲು ಸಾಧ್ಯವಿಲ್ಲ.

ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು

ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು

ನಾಡಿನವರೇ ಆದ ಹಿರಿಯ ಲೇಖಕ ಎಸ್.ಎಲ್.ಬೈರಪ್ಪ ಅವರ ಅದೆಷ್ಟೋ ಕಾದಂಬರಿಗಳು 13 ಭಾರತೀಯ ಭಾಷೆಗಳಿಗೆ ಅನುವಾದಗೊಂಡು ಜನಪ್ರಿಯತೆ ತಂಡುಕೊಟ್ಟಿದೆ ಎಂದು ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಎಂ.ಮಂಜುನಾಥ್ ತಿಳಿಸಿದರು.

ಸಾಹಸಪಟು ಜ್ಯೋತಿ ರಾಜ್

ಸಾಹಸಪಟು ಜ್ಯೋತಿ ರಾಜ್

ಗಾರ್ಡನ್ ಸಿಟಿ ಕಾಲೇಜಿನ 'ಕನ್ನಡೋತ್ಸವ ಕಾರ್ಯಕ್ರಮದಲ್ಲಿ ಸಾಹಸಪಟು ಜ್ಯೋತಿ ರಾಜ್ ಅವರಿಗೆ ಸನ್ಮಾನ.

ಗಾರ್ಡನ್ ಸಿಟಿ ಕಾಲೇಜಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ

ಗಾರ್ಡನ್ ಸಿಟಿ ಕಾಲೇಜಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ

ಕಾರ್ಯಕ್ರಮದಲ್ಲಿ ನಟಿ ವೈಶಾಲಿ ದೀಪಕ್, ಸುದ್ದಿ ಸಂಪಾದಕ ಮಹೇಶ್ ಕುಮಾರ್, ಸಾಹಸಪಟು ಜ್ಯೋತಿ ರಾಜ್, ಕಾಲೇಜಿನ ವಿಶ್ವವಿದ್ಯಾಲಯದ ಕುಲಪತಿ ಹಿಂಚಿಗೇರಿ ಇತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Garden City College in KR Puram, Bengaluru celebrated "Kannadotsava" on 19th March 2016. This was a day long programme celebrating the rich culture, traditions and heritage of Karnataka. Former DG & IGP Shankar Bidari and several other were felicitated.
Please Wait while comments are loading...