ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಂಪೇಗೌಡ ವಿಮಾನ ನಿಲ್ದಾಣ- ನಮ್ಮ ಮೆಟ್ರೋಗೆ ಕೆಆರ್ ಪುರಂ ಚೆಕ್ ಇನ್ ಸ್ಟಾಪ್

|
Google Oneindia Kannada News

ಬೆಂಗಳೂರು, ನವೆಂಬರ್ 28: ನಾಗವಾರ-ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಂಪರ್ಕಿಸುವ ನಮ್ಮ ಮೆಟ್ರೋ ರೈಲು ಮಾರ್ಗ ವಿನ್ಯಾಸ ಮತ್ತೊಮ್ಮೆ ಬದಲಾವಣೆಯಾಗಲಿದೆ.

ಗೊಟ್ಟಿಗೆರೆ -ನಾಗವಾರ ಮಾರ್ಗದ ವಿಳಂಬದಿಂದಾಗಿ ಈಗ ನಾಗವಾರ ಬದಲಿಗೆ ಬೈಯಪ್ಪನಹಳ್ಳಿ- ವೈಟ್​ಫೀಲ್ಡ್ ಮಾರ್ಗದಲ್ಲಿರುವ ಕೆ.ಆರ್. ಪುರ ಮೆಟ್ರೋ ನಿಲ್ದಾಣವು ಏರ್​ಪೋರ್ಟ್ ಮೆಟ್ರೋದ ಚೆಕ್​-ಇನ್ ನಿಲ್ದಾಣವಾಗಲಿದೆ.

ಉತ್ತರ- ದಕ್ಷಿಣ ಸಂಪರ್ಕ ಕಲ್ಪಿಸುವ ಗೊಟ್ಟಿಗೆರೆ- ನಾಗವಾರ (21.2 ಕಿ.ಮೀ.) ಮೆಟ್ರೋ ಮಾರ್ಗ ನಿರ್ಮಾಣ ವಿಳಂಬವಾಗಿದೆ. ಕೆಐಎಗೆ ಸಂಪರ್ಕ ಒದಗಿಸುವ ನಮ್ಮ ಮೆಟ್ರೋನ ಹೊಸ ಹಬ್ ಆಗಿ ಕೆಆರ್ ಪುರಂ ಬಳಸಲಾಗುವುದು ಎಂದು ರಾಜ್ಯ ಸರ್ಕಾರಕ್ಕೆ ಬಿಎಂಆರ್​ಸಿಎಲ್ ಹೊಸ ವಿನ್ಯಾಸ ವರದಿಯನ್ನು ಸಲ್ಲಿಸಿದೆ.

ನಾಯಂಡಹಳ್ಳಿ-ಕೆಂಗೇರಿ ಮೆಟ್ರೋ ಸಂಚಾರಕ್ಕೆ 2 ವರ್ಷ ಕಾಯ್ಬೇಕಂತೆನಾಯಂಡಹಳ್ಳಿ-ಕೆಂಗೇರಿ ಮೆಟ್ರೋ ಸಂಚಾರಕ್ಕೆ 2 ವರ್ಷ ಕಾಯ್ಬೇಕಂತೆ

ನಮ್ಮ ಮೆಟ್ರೋ 2ನೇ ಹಂತದಲ್ಲೇ 'ಬಿ' ಎಂಬ ಹೆಸರಿನಲ್ಲಿ ಏರ್​ಪೋರ್ಟ್ ಮೆಟ್ರೋ ಯೋಜನೆ ಕೈಗೆತ್ತಿಕೊಳ್ಳಲು ಸರ್ಕಾರ ತೀರ್ಮಾನಿಸಿದೆ.

ಉದ್ದೇಶಿತ ಮಾರ್ಗದಲ್ಲಿ ಬೆಂಗಳೂರು-ಮಂಗಳೂರು ಪೆಟ್ರೋಲಿಯಂ ಪೈಪ್ ಲೈನ್ ಹಾದು ಹೋಗಿದೆ. ಆದ್ದರಿಂದ, ಬಿಎಂಆರ್‌ಸಿಎಲ್ ಮಾರ್ಗವನ್ನು ಬದಲಾವಣೆ ಮಾಡಲಿದೆ. ನಮ್ಮ ಮೆಟ್ರೋ ಫೇಸ್‌2ಬಿ 29.62 ಕಿ.ಮೀ. ಯೋಜನೆಗೆ 2017ರ ಡಿಸೆಂಬರ್ 11ರಂದೇ ಸರ್ಕಾರ ಒಪ್ಪಿಗೆ ಸೂಚಿಸಿದೆ.

ಮೊದಲ ಹಂತ ಜಾರಿಯಲ್ಲಿದೆ

ಮೊದಲ ಹಂತ ಜಾರಿಯಲ್ಲಿದೆ

ನಾಗವಾರ-ಕೆಂಪೇಗೌಡ ವಿಮಾನ ನಿಲ್ದಾಣ ನಡುವಿನ 29.62 ಕಿ.ಮೀ.ಮಾರ್ಗ ನಾಗವಾರದಲ್ಲಿ ಆರಂಭವಾಗಲಿದೆ. ಮೊದಲ ನಕ್ಷೆಯಂತೆ ನಾಗವಾರ-ಆರ್.ಕೆ.ಹೆಗ್ಡೆ ನಗರ-ಥಣಿಸಂದ್ರ ಮುಖ್ಯರಸ್ತೆ-ಜಕ್ಕೂರು ಫ್ಲೈಯಿಂಗ್ ಸ್ಕೂಲ್-ಬಳ್ಳಾರಿ ರಸ್ತೆ ಮೂಲಕ ಮಾರ್ಗ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುತ್ತಿತ್ತು. ಆದರೆ, ಈಗ ಬಿಎಂಆರ್‌ಸಿಎಲ್ ಮಾರ್ಗವನ್ನು ಬದಲಾವಣೆ ಮಾಡಲಿದೆ. ಮಾರ್ಗ ಬದಲಾವಣೆಯಾದರೂ ನಾಗವಾರ-ಕೆಂಪೇಗೌಡ ವಿಮಾನ ನಿಲ್ದಾಣದ ನಡುವಿನ ದೂರ ಹೆಚ್ಚಾಗುವುದಿಲ್ಲ.

ಮಾರ್ಗ ಬದಲಾವಣೆ ಏಕೆ?

ಮಾರ್ಗ ಬದಲಾವಣೆ ಏಕೆ?

ಬಿಎಂಆರ್‌ಸಿಎಲ್ ಮೊದಲು ತಯಾರಿಸಿದ ನಕ್ಷೆ ಪ್ರಕಾರ ಮಾರ್ಗ ನಿರ್ಮಿಸಲು ಅಡೆ-ತಡೆಗಳಿವೆ. ಬೆಂಗಳೂರು-ಮಂಗಳೂರು ಪೆಟ್ರೋಲಿಯಂ ಪೈಪ್ ಲೈನ್ ಹೆಗಡೆ ನಗರದ ಮೂಲಕ ಹಾದು ಹೋಗಲಿದೆ. ಆದ್ದರಿಂದ, ಅನಿವಾರ್ಯವಾಗಿ ಮಾರ್ಗ ಬದಲಾವಣೆ ಮಾಡಬೇಕಾಗಿದೆ. ಪೈಪ್ ಲೈನ್ 9 ಮೀಟರ್ ಅಕ್ಕಪಕ್ಕ ಯಾವುದೇ ಕಾಮಗಾರಿಯನ್ನು ಕೈಗೊಳ್ಳುವುದನ್ನ ನಿಷೇಧಿಸಲಾಗಿದೆ. ಈ ಮಾರ್ಗದಲ್ಲಿ ದೊಡ್ಡ ನೀರಿನ ಪೈಪ್‌ ಲೈನ್ ಸಹ ಇತ್ತು. ಅದನ್ನು ಸ್ಥಳಾಂತರ ಮಾಡಲು ಚಿಂತಿಸಲಾಗಿತ್ತು. ಆದರೆ, ಪೆಟ್ರೋಲಿಯಂ ಪೈಪ್ ಲೈನ್ ಸ್ಥಳಾಂತರ ಸಾಧ್ಯವಿರಲಿಲ್ಲ. ಆದ್ದರಿಂದ, ಮಾರ್ಗ ಬದಲಾವಣೆ ಮಾಡಲಾಗಿದೆ.

ನಮ್ಮ ಮೆಟ್ರೋ 2ನೇ ಹಂತದಲ್ಲಿ ಬದಲಾವಣೆ

ನಮ್ಮ ಮೆಟ್ರೋ 2ನೇ ಹಂತದಲ್ಲಿ ಬದಲಾವಣೆ

ನಮ್ಮ ಮೆಟ್ರೋ 2ನೇ ಹಂತದಲ್ಲಿ ಅಂದಾಜು 11 ಸಾವಿರ ಕೋಟಿ ರೂ. ವೆಚ್ಚದಲ್ಲಿ ಗೊಟ್ಟಿಗೆರೆ- ನಾಗವಾರ ಮೆಟ್ರೋ ಮಾರ್ಗ ನಿರ್ಮಾಣವಾಗಲಿದೆ. ಈ ಮಾರ್ಗದಲ್ಲಿ ವೆಲ್ಲಾರ ಜಂಕ್ಷನ್​ನಿಂದ ಟ್ಯಾನರಿ ರಸ್ತೆವರೆಗೆ ಅಂದಾಜು 2,235 ಕೋಟಿ ರೂ. ವೆಚ್ಚದಲ್ಲಿ 5.63 ಕಿ.ಮೀ. ಸುರಂಗ ಮಾರ್ಗ ನಿರ್ಮಾಣಕ್ಕೆ ಬಿಎಂಆರ್ ಸಿಎಲ್ ನಿರ್ಧರಿಸಿದೆ. 2023 ನಂತರವಷ್ಟೇ ಈ ಮಾರ್ಗ ಪೂರ್ಣ ಗೊಳ್ಳುವ ನಿರೀಕ್ಷೆಯಿದೆ.

ಬೈಯಪ್ಪನಹಳ್ಳಿ- ವೈಟ್​ಫೀಲ್ಡ್ ನಡುವೆ 2021ಕ್ಕೆ

ಬೈಯಪ್ಪನಹಳ್ಳಿ- ವೈಟ್​ಫೀಲ್ಡ್ ನಡುವೆ 2021ಕ್ಕೆ

2021ರ ವೇಳೆಗೆ ಬೈಯಪ್ಪನಹಳ್ಳಿ- ವೈಟ್​ಫೀಲ್ಡ್ ನಡುವೆ ಮೆಟ್ರೋ ಮಾರ್ಗ ಪೂರ್ಣಗೊಳ್ಳಲಿದೆ. ಬೈಯಪ್ಪನಹಳ್ಳಿಯಿಂದ 2ನೇ ನಿಲ್ದಾಣವಾಗಿ ಕೆ.ಆರ್. ಪುರ ಮೆಟ್ರೋ ನಿಲ್ದಾಣ ನಿರ್ಮಾಣವಾಗಲಿದೆ. ಆನಂತರ ಹೊರವರ್ತಲ ರಸ್ತೆಯ ಸಿಲ್ಕ್ ಬೋರ್ಡ್ ಮೆಟ್ರೋ ಮಾರ್ಗಕ್ಕೂ ಕೆ.ಆರ್. ಪುರ ಮೆಟ್ರೋ ನಿಲ್ದಾಣ ಇಂಟರ್​ಚೇಂಜ್ ನಿಲ್ದಾಣವಾಗಲಿದೆ.

ವಿಮಾನ ನಿಲ್ದಾಣಕ್ಕೆ ಇಂಟರ್ ಚೇಂಜ್, ಚೆಕ್ ಇನ್ ಸ್ಟಾಪ್ ಆಗಲಿರುವ ಕೆ.ಆರ್. ಪುರದಿಂದ ಹೊರ ವರ್ತಲ ರಸ್ತೆಯಲ್ಲೇ ಈ ಮಾರ್ಗ ಸಾಗಲಿದ್ದು, ನಾಗವಾರ -ಹೆಬ್ಬಾಳ -ಜಕ್ಕೂರು ಮೂಲಕ ಕೆಐಎ ತಲುಪಬಹುದಾಗಿದೆ.

English summary
With delay in Gottigere-Nagawara stretch (Reach 6 of Phase II) extension, KR Puram likely to become new Check in hub for Namma metro in connecting Kempegowda International Airport (KIA)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X