ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೆ ರೈತರ ಪರ ಕಾಳಜಿ ಮೆರೆದ ಕಾಂಗ್ರೆಸ್ ರೈತ ವಿಭಾಗ

By Manjunatha
|
Google Oneindia Kannada News

ಬೆಂಗಳೂರು, ಜುಲೈ 12: ಕೆಪಿಸಿಸಿ ಅಧ್ಯಕ್ಷ ಹಾಗೂ ಕಾರ್ಯಾಧ್ಯಕ್ಷರ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಕೆಪಿಸಿಸಿಯ ರೈತ ವಿಭಾಗ ಗುರುತರ ಕಾರ್ಯವನ್ನು ಮಾಡಿದೆ.

ಕೆಪಿಸಿಸಿ ರೈತ ಘಟಕದಿಂದ ನೂತನ ಕಾರ್ಯಾಧ್ಯಕ್ಷ, ಅಧ್ಯಕ್ಷರ ಪರವಾಗಿ ಯಾವುದೇ ಫ್ಲೆಕ್ಸ್ ಅಥವಾ ಇನ್ನಿತರೆಜಾಹೀರಾತುಗಳನ್ನು ನೀಡಿ ವೆಚ್ಚ ಮಾಡದೆ ಅದೇ ಹಣವನ್ನು ನೊಂದ ರೈತರಿಗೆ ನೀಡಿ ಅವರಿಗೆ ನೆರವಾಗಿದೆ.

ವಿಧಾನಸೌಧದ ಪ್ರಾಂಗಣವೋ ಕಾಂಗ್ರೆಸ್ ಕಚೇರಿಯೋ? ಟ್ವೀಟ್ ತರಾಟೆವಿಧಾನಸೌಧದ ಪ್ರಾಂಗಣವೋ ಕಾಂಗ್ರೆಸ್ ಕಚೇರಿಯೋ? ಟ್ವೀಟ್ ತರಾಟೆ

ಹೌದು, ನಿನ್ನೆ ನಡೆದ ಕಾರ್ಯಕ್ರಮದಲ್ಲಿ ನೂತನ ಅಧ್ಯಕ್ಷ ಹಾಗೂ ಕಾರ್ಯಾಧ್ಯಕ್ಷರಿಂದಲೇ ಕೆಪಿಸಿಸಿ ರೈತ ಘಟಕವು ಬೆಳೆ ನಷ್ಟ ಅನುಭವಿಸಿದ್ದ ಮೆಣಸಿನ ಬೆಳೆಗಾರ ಸುಂಕಪ್ಪ ಎಂಬ ರೈತನಿಗೆ ರೂ.50000 ಚೆಕ್ ವಿತರಿಸಿದೆ. ಈ ಹಿಂದೆಯೂ ಕೆಪಿಸಿಸಿ ರೈತ ಘಟಕ ಈ ರೀತಿಯ ಕಾರ್ಯಗಳನ್ನು ಮಾಡಿದೆ.

KPCC farmer section helps farmers in need

ಬಳ್ಳಾರಿ ಜಿಲ್ಲೆಯ ತುಂಬ್ರಗುದ್ದಿಯ ರೈತ ಸಂಕಪ್ಪ ಮೆಣಸಿನಕಾಯಿ ಬೆಳೆದಿದ್ದರು, ಬಿಡಿದ ಮೆಣಸಿನಕಾಯಿಯನ್ನು ಒಕ್ಕಣೆ ಹಾಕಿದ್ದರು ಅದರೆ ದುರಾದೃಷ್ಟವಶಾತ್ ಮೆಣಸಿನಕಾಯಿ ಒಕ್ಕಣೆಗೆ ಸಿಡಿಲು ಬಡಿದು ಎಲ್ಲವೂ ಉರಿದು ಬೂದಿಯಾಗಿತ್ತು. ಸರ್ಕಾರದಿಂದ ಪರಿಹಾರ ವಿಳಂಭವಾದ ಕಾರಣ ರೈತ ಸುಂಕಪ್ಪ ರಾಜ್ಯ ಹಾಗೂ ರಾಷ್ಟ್ರದ ರಾಜಕಾರಣಿಗಳ ಮನೆ ಬಾಗಿಲು ತಟ್ಟಿದ್ದರು ಇದೀಗ ಕೆಪಿಸಿಸಿ ರೈತ ಘಟಕ ಅವರಿಗೆ ನೆರವಾಗಿದೆ.

ಈ ಹಿಂದೆ ರಾಹುಲ್ ಗಾಂಧಿ ಅವರು ರಾಜ್ಯಕ್ಕೆ ಆಗಮಿಸುವ ವೇಳೆ ಸಹ ಅವರಿಗೆ ಫ್ಲೆಕ್ಸ್, ಹಾರ, ತುರಾಯಿಗೆಂದು ಖರ್ಚು ಮಾಡದೆ ಅದೇ ಹಣಕ್ಕೆ ಇನ್ನಷ್ಟು ಹಣ ಸೇರಿಸಿ ಮಧ್ಯಪ್ರದೇಶದ ಮಂಡಸೂರಿನಲ್ಲಿ ಗೋಲಿಬಾರ್‌ನಲ್ಲಿ ಮೃತಪಟ್ಟ 6 ರೈತರ ಕುಟುಂಬಗಳಿಗೆ ತಲಾ 50000 ನೀಡಿದ್ದರು.

English summary
KPCC farmer section helps farmers in the occasion of new kpcc president and working president oath taking ceremony. KPCC farmer section issue 50000 check to farmer Sunkappa who lost his crop in a nature accident.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X