ಕೋಲ್ಕತಾ ಯುವತಿ ಮೇಲೆ ಬೆಂಗಳೂರಲ್ಲಿ ಗ್ಯಾಂಗ್ ರೇಪ್

Subscribe to Oneindia Kannada

ಬೆಂಗಳೂರು, ಫೆಬ್ರವರಿ, 12: ಮಹಾನಗರಿಯಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಕೋಲ್ಕತಾ ಮೂಲದ ಯುವತಿ ಮೇಲೆ ಕೋರಮಂಗಲದಲ್ಲಿ ಅತ್ಯಾಚಾರ ನಡೆದಿದ್ದು ಆರೋಪಿಗಳನ್ನು ಬಂಧಿಸಲಾಗಿದೆ.

ಕೋಲ್ಕೊತಾ ಮೂಲದ 22 ವರ್ಷದ ಯುವತಿಯನ್ನು ಕೋರಮಂಗಲದ ಕರ್ನಾಟಕ ಬ್ಯಾಂಕ್ ಬಳಿ ಫೆಬ್ರವರಿ 2 ರಂದು ಅಪಹರಣ ಮಾಡಲಾಗಿತ್ತು. ಸ್ನೇಹಿತೆಯನ್ನು ಭೇಟಿಯಾಗಲು ಅಶೋಕ ನಗರದಿಂದ ಕೋರಮಂಗಲಕ್ಕೆ ತೆರಳುತ್ತಿದ್ದಾಗ ಕಾರಿನಲ್ಲಿ ಯುವತಿಯನ್ನು ಎಳೆದೊಯ್ಯಲಾಗಿತ್ತು. ಸಂತ್ರಸ್ತೆ ನೀಡಿದ ಮಾಹಿತಿ ಮೇರೆಗೆ ನಿತಿನ್ ಶೆಟ್ಟಿ, ಧನಂಜಯ್ ಮತ್ತು ರಜಿತ್ ಕುಮಾರ್ ಎಂಬುವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.[ಮಹಿಳಾ ದೌರ್ಜನ್ಯ ವಿರುದ್ದ ದನಿಯಾದ ವಾಮಾ ಬಲ್ದೋಟ]

Kolkata woman allegedly abducted and raped in Koramangala

ಗೋದಾಮಿಗೆ ಎಳೆದೊಯ್ದರು
ಕಾರಿನಲ್ಲಿ ಯುವತಿಯನ್ನು ಅಪಹರಿ ಗೋದಾಮುವೊಂದಕ್ಕೆ ತೆಗೆದುಕೊಂಡು ಹೋದ ನಾಲ್ವರು ಆರೋಪಿಗಳು ಅತ್ಯಾಚಾರ ನಡೆಸಿದ್ದಾರೆ. ಯುವತಿ ಬಳಿಯಿದ್ದ 15 ಸಾವಿರ ರೂ. ಹಣ ಹಾಗೂ ಮೊಬೈಲ್ ದೋಚಿದ ಆರೋಪಿಗಳು ಆಕೆಗೆ ಚಾಕು ತೋರಿಸಿ ಕೂಗಾಡದಂತೆ ಬೆದರಿಸಿದ್ದಾರೆ. ನಂತರ ಹೊಸೂರು ಬಳಿಯ ಆಡುಗೋಡಿ ಬಳಿ ಯುವತಿಯನ್ನು ಬಿಟ್ಟು ಆರೋಪಿಗಳು ಪರಾರಿಯಾಗಿದ್ದಾರೆ.[ಧಮ್ ಹೊಡೆಯೋದ್ರಲ್ಲೂ ಮಹಿಳೆಯರದ್ದೇ ಮೇಲುಗೈ!]

ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡಲಾಗುತ್ತಿದ್ದು ಇನ್ನು ಕೆಲವರು ಪ್ರಕರಣದಲ್ಲಿ ಭಾಗಿಯಾಗಿರುವ ಸಾಧ್ಯತೆ ಇದೆ. ಈ ಬಗ್ಗೆ ಇನ್ನು ಹೆಚ್ಚಿನ ಮಾಹಿತಿ ಸಂಗ್ರಹಣೆ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bengaluru: A 23-year-old woman filed a complaint on Wednesday, saying she was abducted and gang-raped recently.
Please Wait while comments are loading...