ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮುಷ್ಕರ: ನಮ್ಮ ಮೆಟ್ರೋ ಓಡಿಸ್ತಾರೆ ಕೊಚ್ಚಿ ಮೆಟ್ರೋ ಸಿಬ್ಬಂದಿ?

By Nayana
|
Google Oneindia Kannada News

ಬೆಂಗಳೂರು, ಜೂನ್ 4: ಹೈಕೋರ್ಟ್ ತೀರ್ಮಾನದ ಮೇಲೆ ಮೆಟ್ರೋ ಮುಷ್ಕರ ನಿಂತಿದೆ. ಸೋಮವಾರದಿಂದ (ಜೂ.4) ಮುಷ್ಕರ ನಡೆಸಲು ಮೆಟ್ರೋ ನೌಕರರು ತೀರ್ಮಾನಿಸಿದ್ದರು. ಆದರೆ ಹೈಕೋರ್ಟ್ ಜೂ.4ರಂದೇ ವಿಚಾರಣೆಯನ್ನು ಮುಂದೂಡಿರುವ ಕಾರಣ ಹೈಕೋರ್ಟ್‌ ತೀರ್ಮಾನಕ್ಕಾಗಿ ಮೆಟ್ರೋ ನೌಕರರು ಕಾಯುತ್ತಿದ್ದಾರೆ.

ಹೈಕೋರ್ಟ್ ತೀರ್ಪು ಒಂದು ವೇಳೆ ಪರವಾಗಿಯೇ ಬಂದರೆ ನೌಕರರು ಹೊಂದಾಣಿಕೆ ಮಾಡಿಕೊಂಡು ಮುಂದುವರೆಯುವ ಚಿಂತನೆಯಲ್ಲಿದ್ದಾರೆ. ಮುಷ್ಕರದ ಭೀತಿಯಲ್ಲಿ ನಿಗಮವು ಕೊಚ್ಚಿ ಮೆಟ್ರೋದಿಂದ 20 ಲೊಕೊ ಪೈಲಟ್ ಗಳನ್ನು ಕರೆಸಿಕೊಳ್ಳುವ ಮಾತುಕತೆ ನಡೆಸಿದೆ. ಕೊಚ್ಚಿ ಮೆಟ್ರೋದಲ್ಲಿ ಕೆಲಸ ಮಾಡುತ್ತಿರುವ ಬಹುತೇಕ ನೌಕರರು ಈ ಹಿಂದೆ ಬೆಂಗಳೂರಿಗೆ ಬಂದು, ಬಿಎಂಆರ್‌ಸಿಎಲ್ ನಲ್ಲಿ ತರಬೇತಿ ಪಡೆದಿದ್ದರು.

ಕೇಂದ್ರ ಕಾರ್ಮಿಕ ಆಯುಕ್ತರ ಜತೆ ಮೆಟ್ರೋ ನೌಕರರ ಸಭೆ ವಿಫಲಕೇಂದ್ರ ಕಾರ್ಮಿಕ ಆಯುಕ್ತರ ಜತೆ ಮೆಟ್ರೋ ನೌಕರರ ಸಭೆ ವಿಫಲ

ಬಿಎಂಆರ್‌ಸಿಎಲ್‌ ಹಾಗೂ ಕೊಚ್ಚಿ ನಿಗಮದ ಸಂಬಂಧ ಉತ್ತಮವಾಗಿದೆ. ಅಲ್ಲಿನ ಅಧಿಕಾರಿಗಳು ಬಿಎಂಆರ್‌ಸಿಎಲ್‌ನ ಮನವಿಗೆ ಸ್ಪಂದಿಸಿದ್ದು, ಅಗತ್ಯವಿದ್ದರೆ ಕೂಡಲೇ ನೌಕರರನ್ನು ಕಳುಹಿಸಿಕೊಡಲಾಗುವುದು ಎಂದು ಹೇಳಿದ್ದಾರೆ.

Kochchi metro staff will run Namma metro

ಒಂದು ವರ್ಷದಿಂದ ಮೆಟ್ರೋ ನೌಕರರು ಹಾಗೂ ಅಧಿಕಾರಿಗಳ ನಡುವೆ ಸಂಘರ್ಷ ನಡೆಯುತ್ತಿದ್ದು, ಈಗ ಜಗಳ ತಾರಕಕ್ಕೇರಿದೆ. ಮುಂದೊಂದು ದಿನ ಸಮಸ್ಯೆಯಾಗಬಹುದು ಎಂದು ಅರಿತಿದ್ದ ನಿಗಮ ಬಹಳ ಹಿಂದೆಯೇ ತುರ್ತು ಪರಿಸ್ಥಿತಿಗಾಗಿ 60 ನೌಕರರ ಪ್ರತ್ಯೇಕ ತಂಡವನ್ನು ರಚಿಸಿತ್ತು. ಈ ನೌಕರರಿಗೆ ರೈಲು ಚಲಾಯಿಸುವುದು ಹಾಗೂ ರೈಲು ಕಾರ್ಯಾಚರಣೆಯನ್ನು ನಿರ್ವಹಿಸುವ ಕುರಿತು ತರಬೇತಿಯನ್ನು ಕೂಡ ನೀಡಿತ್ತು. ಇದೀಗ ಅಗತ್ಯ ಬಂದರೆ ಕೊಚ್ಚಿ ಮೆಟ್ರೋ ನೌಕರರು ಬೆಂಗಳೂರು ಮೆಟ್ರೋವನ್ನು ಓಡಿಸಲಿದ್ದಾರೆ.

English summary
Finally Namma Metro staff have gone for strike after many efforts to avoid made by the BMRCL. But the authorities have brought Kochchi staff to run the metro trains in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X