ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೇವನಹಳ್ಳಿ ಬಿಜಿನೆಸ್ ಪಾರ್ಕ್‌ನಲ್ಲಿ ಏನಿರುತ್ತೆ?

|
Google Oneindia Kannada News

ಬೆಂಗಳೂರು, ಅಕ್ಟೋಬರ್ 28 : ಕರ್ನಾಟಕ ಸರ್ಕಾರ ದೇವನಹಳ್ಳಿ ಬಿಜಿನೆಸ್ ಪಾರ್ಕ್ ನಿರ್ಮಾಣ ಕಾಮಗಾರಿಯ ಪ್ರಾಥಮಿಕ ಕೆಲಸಗಳನ್ನು ಆರಂಭಿಸಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ 413 ಎಕರೆ ಜಾಗದಲ್ಲಿ ಬಿಜಿನೆಸ್ ಪಾರ್ಕ್ ತಲೆ ಎತ್ತಲಿದೆ.

ಕರ್ನಾಟಕ ರಾಜ್ಯ ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆಎಸ್‌ಐಐಡಿಸಿ) ದೇವನಹಳ್ಳಿ ಬಿಜಿನೆಸ್ ಪಾರ್ಕ್ ನಿರ್ಮಾಣದ ಮೇಲುಸ್ತುವಾರಿ ನೋಡಿಕೊಳ್ಳಲಿದೆ. ಕೆಲವು ದಿನಗಳ ಹಿಂದೆ ನಡೆದ ಸಭೆಯಲ್ಲಿ ಎರಡು ಕಂಪನಿಗಳನ್ನು ಯೋಜನೆಯ ಕನ್ಸಲ್ಟ್‌ಟೆಂಟ್‌ ಆಗಿ ನೇಮಕ ಮಾಡಲಾಗಿದೆ. [ನವೆಂಬರ್ ಬದಲು 2016ರ ಫೆಬ್ರವರಿಯಲ್ಲಿ ಜಿಮ್]

devanahalli

ಬಿಜಿನೆಸ್ ಪಾರ್ಕ್‌ನಲ್ಲಿ ಏನಿರುತ್ತೆ? : ದೇವನಹಳ್ಳಿ ಬಿಜಿನೆಸ್ ಪಾರ್ಕ್‌ನ 50 ಎಕರೆ ಪ್ರದೇಶದಲ್ಲಿ ಐಟಿ ಪಾರ್ಕ್, ವಿಶೇಷ ಆರ್ಥಿಕ ವಲಯ ನಿರ್ಮಾಣವಾಗಲಿವೆ. ಏರೋಸ್ಪೇಸ್ ಪಾರ್ಕ್, ಸೈನ್ಸ್ ಪಾರ್ಕ್‌, ಮೂರು ಮಲ್ಪಿ ಸ್ಪೆಷಾಲಿಟಿ ಆಸ್ಪತ್ರೆಗಳು ಸೇರಿದಂತೆ ವಿವಿಧ ಕಟ್ಟಡಗಳು ನಿರ್ಮಾಣಗೊಳ್ಳಲಿವೆ. [ತುಮಕೂರಿನಲ್ಲಿ ಟೊಯೋಟಾ ಘಟಕ ನಿರ್ಮಾಣಕ್ಕೆ ಒಪ್ಪಿಗೆ]

ವಸ್ತು ಪ್ರದರ್ಶನ ಕೇಂದ್ರ : ಸುಮಾರು 35 ಎಕರೆ ಪ್ರದೇಶದಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ ನಿರ್ಮಾಣಗೊಳ್ಳಲಿದೆ. ವಸ್ತು ಪ್ರದರ್ಶನ ಕೇಂದ್ರಕ್ಕೆ ಸೋಲಾರ್ ಫಲಕಗಳ ಮೇಲ್ಛಾವಣಿ, ಮಳೆ ಕೊಯ್ಲು ಪದ್ಧತಿಯನ್ನು ಆಳವಡಿಸಲಾಗುತ್ತದೆ.

ದೇವನಹಳ್ಳಿ ಬಿಜಿನೆಸ್ ಪಾರ್ಕ್ ಅನ್ನು ಪಿಪಿಪಿ (ಸಾರ್ವಜನಿಕ-ಖಾಸಗಿ-ಪಾಲುದಾರಿಕೆ)ಯಲ್ಲಿ ನಿರ್ಮಾಣ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ ಘೋಷಿಸಿದ್ದಾರೆ.

English summary
Karnataka government has initiated the implementation of the proposed Devanahalli Business Park (DBP) project near the Kempe Gowda International Airport (KIA). Park will develop in 413.65 acres of land.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X