ಬಿಎಂಟಿಸಿಯ ಐಟಿಎಸ್‌ ಯೋಜನೆ ಬಗ್ಗೆ ತಿಳಿಯಿರಿ

Posted By:
Subscribe to Oneindia Kannada

ಬೆಂಗಳೂರು, ಜನವರಿ 08 : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಮತ್ತಷ್ಟು ಜನಸ್ನೇಹಿಯಾಗಲಿದೆ. ಬಿಎಂಟಿಸಿ ಬಸ್ಸುಗಳ ಕುರಿತು ಬೆರಳ ತುದಿಯಲ್ಲಿಯೇ ಮಾಹಿತಿ ನೀಡುವ ಐಟಿಎಸ್‌ ಸೇವೆಗೆ ಶೀಘ್ರದಲ್ಲೇ ಚಾಲನೆ ನೀಡಲಿದೆ. ಸುಮಾರು 79 ಕೋಟಿ ರೂ. ವೆಚ್ಚದ ಬೃಹತ್ ಯೋಜನೆ ಇದಾಗಿದೆ.

ಬಿಎಂಟಿಸಿ ಬಸ್ ಎಲ್ಲಿದೆ?, ನಿಲ್ದಾಣಕ್ಕೆ ಎಷ್ಟು ಹೊತ್ತಿಗೆ ಬರಲಿದೆ?, ಎಷ್ಟು ಹೊತ್ತು ಬಸ್ಸಿಗಾಗಿ ಕಾಯಬೇಕು? ಮುಂತಾದ ಮಾಹಿತಿಗಳು ಜನರ ಮೊಬೈಲ್‌ನಲ್ಲಿಯೇ ಸಿಗಲಿವೆ. ಕಳೆದ ಒಂದು ವರ್ಷದಿಂದ ಯಲಹಂಕ ಡಿಪೋದಲ್ಲಿ ಪ್ರಾಯೋಗಿಕವಾಗಿ ಜಾರಿಯಲ್ಲಿದ್ದ ಐಟಿಎಸ್ ಸೇವೆಯನ್ನು 40 ಬಸ್ ಡಿಪೋಗಳಿಗೆ ವಿಸ್ತರಣೆ ಮಾಡಲಾಗುತ್ತಿದೆ. [ಬಿಎಂಟಿಸಿ ಮಾಹಿತಿ ಬೆರಳ ತುದಿಯಲ್ಲಿ ಪಡೆಯಿರಿ]

ಇಂಟೆಲಿಜೆಂಟ್‌ ಟ್ರಾನ್ಸ್‌ಪೋರ್ಟ್‌ ಸಿಸ್ಟಮ್‌ (ಐಟಿಎಸ್‌)ಅನುಷ್ಠಾನಕ್ಕಾಗಿ 2014ರಲ್ಲಿ ಮುಂಬೈ ಮೂಲದ ಟ್ರೈಮ್ಯಾಕ್ಸ್ ಕಂಪನಿ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಹಲವಾರು ಅಡೆತಡೆಗಳ ನಂತರ 2016ರಲ್ಲಿ ಈ ಯೋಜನೆ ಜಾರಿಗೆ ಬರುತ್ತಿದೆ. [ಬಿಎಂಟಿಸಿ ವೊಲ್ವೋ ಬಸ್ಸುಗಳಲ್ಲಿ ಉಚಿತ ವೈಫೈ ಸೇವೆ]

ಈ ಯೋಜನೆ ಅನ್ವಯ ಬಸ್ಸುಗಳಿಗೆ ಜಿಪಿಎಸ್ ಅಳವಡಿಸಲಾಗುತ್ತದೆ. ಎಲ್ಲಾ ನಿರ್ವಾಹಕರಿಗೆ ಎಲೆಕ್ಟ್ರಾನಿಕ್ ಟಿಕೆಟಿಂಗ್ ಮೆಷಿನ್ ನೀಡಲಾಗುತ್ತದೆ. 35 ಬಸ್ ನಿಲ್ದಾಣದಲ್ಲಿ ದೊಡ್ಡ ಎಲ್‌ಇಡಿ ಸ್ಕ್ರೀನ್‌ಗಳನ್ನು ಅಳವಡಿಸಿ, ಪ್ರಯಾಣಿಕರಿಗೆ ಬಸ್ಸಿನ ಕುರಿತು ಮಾಹಿತಿ ನೀಡಲಾಗುತ್ತದೆ. ಐಟಿಎಸ್‌ ಯೋಜನೆ ಕುರಿತ ಮಾಹಿತಿ ಚಿತ್ರಗಳಲ್ಲಿ.....

ಅಂಗೈಯಲ್ಲೇ ಸಿಗಲಿದೆ ಬಿಎಂಟಿಸಿ ಬಸ್ಸುಗಳ ಮಾಹಿತಿ

ಅಂಗೈಯಲ್ಲೇ ಸಿಗಲಿದೆ ಬಿಎಂಟಿಸಿ ಬಸ್ಸುಗಳ ಮಾಹಿತಿ

ಬಿಎಂಟಿಸಿ ಬಸ್ಸುಗಳ ಎಲ್ಲಾ ಮಾಹಿತಿಗಳು ಇನ್ನು ಮುಂದೆ ಬೆರಳ ತುದಿಯಲ್ಲಿಯೇ ಮೊಬೈಲ್‌ನಲ್ಲಿ ಸಿಗಲಿವೆ. ನಿಲ್ದಾಣಕ್ಕೆ ಬಸ್‌ ಎಷ್ಟು ಹೊತ್ತಿಗೆ ಬರಲಿದೆ?, ಪ್ರಯಾಣಿಕರು ಎಷ್ಟು ಹೊತ್ತು ಕಾಯಬೇಕು? ಮುಂತಾದ ಮಾಹಿತಿಗಳು ಲಭ್ಯವಾಗಲಿವೆ.

79 ಕೋಟಿ ವೆಚ್ಚದ ಯೋಜನೆ

79 ಕೋಟಿ ವೆಚ್ಚದ ಯೋಜನೆ

ಇಂಟೆಲಿಜೆಂಟ್‌ ಟ್ರಾನ್ಸ್‌ಪೋರ್ಟ್‌ ಸಿಸ್ಟಮ್‌ (ಐಟಿಎಸ್‌) ಯೋಜನೆಯನ್ನು ಬಿಎಂಟಿಸಿ ಜಾರಿಗೆ ತರುತ್ತಿದ್ದು, ಇದಕ್ಕಾಗಿ 79 ಕೋಟಿ ರೂ.ಗಳನ್ನು ಖರ್ಚು ಮಾಡುತ್ತಿದೆ. ಪ್ರಾಯೋಗಿಕವಾಗಿ ಯಲಹಂಕ ಡಿಪೋದಲ್ಲಿ ಜಾರಿಯಲ್ಲಿದ್ದ ಈ ಯೋಜನೆ ಈಗ ಎಲ್ಲಾ 40 ಡಿಪೋಗಳನ್ನು ಅನುಷ್ಠಾನಕ್ಕೆ ಬರಲಿದೆ. ಸಂಸ್ಥೆಯ 6 ಸಾವಿರ ಬಸ್ಸುಗಳು ಇದರ ವ್ಯಾಪ್ತಿಗೆ ಒಳಪಡಲಿವೆ.

ಮುಂಬೈ ಮೂಲದ ಕಂಪನಿಯಿಂದ ನಿರ್ವಹಣೆ

ಮುಂಬೈ ಮೂಲದ ಕಂಪನಿಯಿಂದ ನಿರ್ವಹಣೆ

ಐಟಿಎಸ್ ಯೋಜನೆ ಅನುಷ್ಠಾನಕ್ಕಾಗಿ 2014ರಲ್ಲಿ ಮುಂಬೈ ಮೂಲದ ಟ್ರೈಮ್ಯಾಕ್ಸ್ ಕಂಪೆನಿ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಯೋಜನೆಯ ವಿನ್ಯಾಸ ರೂಪಿಸಿರುವ ಸಂಸ್ಥೆ ಇದನ್ನು ಅನುಷ್ಠಾನ ಮಾಡುವ ಜೊತೆಗೆ ನಿರ್ವಹಣೆ­ಯನ್ನು ನೋಡಿಕೊಳ್ಳಲಿದೆ.

ಟಿಕೆಟ್ ಹೋಯ್ತು ಮೆಷಿನ್ ಬಂತು

ಟಿಕೆಟ್ ಹೋಯ್ತು ಮೆಷಿನ್ ಬಂತು

ಐಟಿಎಸ್ ಯೋಜನೆಯಡಿ ಎಲ್ಲಾ ನಿರ್ವಾಹಕರಿಗೂ ಎಲೆಕ್ಟ್ರಾನಿಕ್ ಟಿಕೆಟಿಂಗ್ ಮೆಷಿನ್‌ಗಳು (ಇಟಿಎಂ)ಗಳನ್ನು ನೀಡಲಾಗುತ್ತಿದೆ. ಒಟ್ಟು 10 ಸಾವಿರ ಎಲೆಕ್ಟ್ರಾ­ನಿಕ್ ಟಿಕೆಟಿಂಗ್ ಮೆಷಿನ್‌ಗಳನ್ನು ಸಂಸ್ಥೆ ನೀಡಿದೆ. ಶೇ 75 ರಷ್ಟು ಬಸ್ಸುಗಳಿಗೆ ಈಗಾಗಲೇ ಇಟಿಎಂ ಒದಗಿಸಲಾಗಿದೆ.

ಬಸ್ಸಿನ ಮಾಹಿತಿ ಪಡೆಯಲು ಜಿಪಿಎಸ್ ಆಳವಡಿಕೆ

ಬಸ್ಸಿನ ಮಾಹಿತಿ ಪಡೆಯಲು ಜಿಪಿಎಸ್ ಆಳವಡಿಕೆ

ವೆಹಿಕಲ್ ಟ್ರ್ಯಾಕಿಂಗ್ ಸಿಸ್ಟಮ್ ಮೂಲಕ ಬಸ್ಸುಗಳು ಎಲ್ಲಿವೆ ಎಂದು ಪತ್ತೆ ಹಚ್ಚಲಾಗುತ್ತದೆ. ಇದಕ್ಕಾಗಿ ಸಂಸ್ಥೆಯ ಎಲ್ಲಾ 6000 ಬಸ್ಸುಗಳಿಗೆ ಜಿಪಿಎಸ್ ಆಳವಡಿಕೆ ಮಾಡಲಾಗುತ್ತದೆ. ಬಸ್ಸುಗಳಿಗೆ ಜಿಪಿಎಸ್ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bangalore Metropolitan Transport Corporation (BMTC) ambitious Intelligent Transport Solution (ITS) will be launched soon. Rs 79 core project offers passengers a real-time interaction with public transport.
Please Wait while comments are loading...