ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಾಲು ಖರೀದಿಸಿ ಹಣ ಕೊಡದೇ ತುಪ್ಪ ತಗೊಳ್ಳಿ ಎನ್ನುತ್ತಿದೆ ಕೆಎಂಎಫ್‌

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್ 6: ಆರ್ಥಿಕವಾಗಿ ತೀವ್ರ ನಷ್ಟ ಅನುಭವಿಸುತ್ತಿರುವ ಕರ್ನಾಟಕ ಹಾಲು ಒಕ್ಕೂಟ ರೈತರಿಂದ ಖರೀದಿಸಿದ ಹಾಲಿಗೆ ದುಡ್ಡು ಕೊಡದೆ ಬದಲಾಗಿ ತುಪ್ಪ ಮಾರಾಟ ಮಾಡಲು ಮುಂದಾಗಿದೆ.

ಹಾಲಿಗೆ ನೀಡಬೇಕಾದ 4 ರೂ. ಪ್ರೋತ್ಸಾಹಧನದ ಬದಲಾಗಿ ಅಷ್ಟೇ ಪ್ರಮಾಣದ ತುಪ್ಪವನ್ನು ಮಾರಾಟ ಮಾಡಲು ಕೆಎಂಎಫ್‌ ನಿರ್ಧರಿಸಿತ್ತು. ಇದರಿಂದ ಹಾಲು ಮಾರಾಟ ಮಾಡುವ ರೈತರು ಕೆಎಂಎಫ್ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಲು ಉತ್ಪಾದನೆ ಮಾಡುವ ರೈತರಿಗೆ ತುಪ್ಪಕ್ಕೆ ಗತಿ ಇರುವುದಿಲ್ಲವಾ ಎಂದು ರೈತರು ಬೇಸರ ವ್ಯಕ್ತಪಡಿಸಿದ್ದಾರೆ.

ಒಂದು ಲೀಟರ್ ನಂದಿನಿ ಹಾಲಿಗೆ 100 ಮಿಲೀ ಉಚಿತ? ಒಂದು ಲೀಟರ್ ನಂದಿನಿ ಹಾಲಿಗೆ 100 ಮಿಲೀ ಉಚಿತ?

ಹಾಲು ಉತ್ಪಾದನೆ ಮಾಡುವುದು ಕುಟುಂಬದ ನೆರವಿಗಾಗಿ ಅದರಲ್ಲಿ ಬರುವ ಪ್ರೋತ್ಸಾಹಧನವನ್ನೂ ಕಡಿತ ಮಾಡಿದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ. ಹಾಲು ಹಾಗೂ ಹಾಲಿನ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಕಂಡುಕೊಳ್ಳಲಾಗದ ಕೆಎಂಎಫ್‌, ನಷ್ಟ ಭರಿಸಲು ರೈತರಿಗೆ ನೀಡುತ್ತಿದ್ದ ಹಾಲಿನ ಮೊತ್ತದಲ್ಲಿ ಕಡಿತ ಮಾಡಲು ಮುಂದಾಗಿದೆ. ಬೆಂಗಳೂರು ಹಾಲು ಒಕ್ಕೂಟ ಕಳೆದ 2 ತಿಂಗಳಿಂದ ರೈತರಿಗೆ 460 ರೂ. ಬೆಲೆಯ ಒಂದು ಕೆಜಿ ತುಪ್ಪವನ್ನು 390 ರೂ.ಗೆ ಮಾರಾಟ ಮಾಡಲು ಮುಂದಾಗಿದೆ.

KMF forcefully selling ghee to farmers in spite of paying money for milk

ರೈತರು ಹೆಚ್ಚಿನ ಪ್ರಮಾಣದಲ್ಲಿ ಹಾಲು ಮಾರಾಟ ಮಾಡುತ್ತಿದ್ದಾರೆ, ಇದರಿಂದ ಕೆಎಂಎಫ್‌ಗೂ ಬರುವ ಹಾಲಿನ ಪ್ರಮಾಣ ಹೆಚ್ಚಳವಾಗಿದೆ. ಹೆಚ್ಚಳಗೊಂಡ ಹಾಲಿನ ಹಿನ್ನೆಲೆಯಲ್ಲಿ ಹಾಲಿನ ಉಪ ಉತ್ಪನ್ನಗಳಾದ ಪೌಡರ್‌, ತುಪ್ಪ ಸೇರಿದಂತೆ ಇನತರೆ ನಂದಿ ಬ್ರ್ಯಾಂಡ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ.

ಆದರೆ ಸೂಕ್ತ ಮಾರುಕಟ್ಟೆ ಇಲ್ಲದೆ ಕೆಎಂಎಫ್‌ ಕಂಗಾಲಾಗಿದೆ. ಹಾಗಾಗಿ ರೈತರಿಗೆ ಹಾಲಿನಿಂದ ಸಿಗುವ ಪ್ರೋತ್ಸಾಹ ಧನವನ್ನು ಕಡಿತಗೊಳಿಸಿ ತುಪ್ಪವನ್ನು ಮಾರಾಟ ಮಾಡಲು ಮುಂದಾಗಿದೆ.

English summary
Karnataka Milk Federation has selling ghee to its farmer milk producers in spite of paying money to purchase milk forcefully.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X