ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು 'ಕಿಸ್ ಆಫ್‌ ಲವ್' ವಿರುದ್ಧ ಒನಕೆ ಚಳವಳಿ

|
Google Oneindia Kannada News

ಬೆಂಗಳೂರು. 20 : 'ಕಿಸ್ ಆಫ್‌ ಲವ್' ಆಯೋಜನೆ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. 'ಕಿಸ್ ಆಫ್ ಲವ್‌' ನಡೆಸಲು ಆಯೋಜಕರು ಪೊಲೀಸರಿಗೆ ಮನವಿ ಸಲ್ಲಿಸಿದ್ದಾರೆ. ಕಾರ್ಯಕ್ರಮ ಅಶ್ಲೀಲ ಮತ್ತು ಅಸಭ್ಯವಾಗಿದ್ದರೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ. ಕಾರ್ಯಕ್ರಮ ನಡೆದರೆ ಅದಕ್ಕೆ ವಿರುದ್ಧವಾಗಿ ಒನಕೆ ಚಳವಳಿ ನಡೆಯಲಿದೆ.

'ಕಿಸ್ ಆಫ್ ಲವ್' ಬಗ್ಗೆ ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ಕಾರ್ಯಕ್ರಮ ಆಯೋಜಿಸಲು ಅಭ್ಯಂತರ ಇಲ್ಲ. ಆದರೆ, ಅದು ಅಶ್ಲೀಲ, ಅಸಭ್ಯವಾಗಿದ್ದರೆ ಮತ್ತು ಕಾನೂನು ಸುವ್ಯವಸ್ಥೆಗೆ ಅಡ್ಡಿಯುಂಟು ಮಾಡುವ ಸಾಧ್ಯತೆ ಇದ್ದರೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. [ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?]

Kiss Of Love

ದೂರು ದಾಖಲು : 'ಕಿಸ್ ಆಫ್‌ ಲವ್' ಆಯೋಜಿಸಲು ಹೊರಟಿರುವ ರುಚಿತಾ ತನೇಜಾ ವಿರುದ್ಧ ಸಾಮಾಜಿಕ ಕಾರ್ಯಕರ್ತ ವಿಜಯ್ ಕುಮಾರ್ ಎಂಬುವವರು ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ಅವರಿಗೆ ದೂರು ನೀಡಿದ್ದಾರೆ. ಮಂತ್ರಿಮಾಲ್‌ನಲ್ಲಿರುವ ಎಫ್‌ಐಆರ್‌ ನೋಂದಣಿ ಕೇಂದ್ರದಿಂದ ವಿಧಾನಸೌಧ ಪೊಲೀಸರಿಗೂ ರುಚಿತ ವಿರುದ್ಧ ವಿಜಯ್ ಕುಮಾರ್ ದೂರು ನೀಡಿದ್ದಾರೆ.[ಕೇಂದ್ರದಲ್ಲಿ ದೂರು ನೀಡುವುದು ಹೇಗೆ?]

ಒನಕೆ ಚಳವಳಿ : ನಮ್ಮ ಸಂಸ್ಕೃತಿಗೆ ವಿರುದ್ಧವಾದ ಕಿಸ್ ಆಫ್ ಲವ್ ಆಚರಣೆ ಮಾಡುವುದು ಸರಿಯಲ್ಲ. ಬೆಂಗಳೂರು ನಗರ ಪೊಲೀಸರು ಕಾರ್ಯಕ್ರಮಕ್ಕೆ ಅವಕಾಶ ನೀಡಿದರೆ, ಒನಕೆ ಚಳವಳಿ ಹಮ್ಮಿಕೊಂಡು ತಕ್ಕ ಪಾಠ ಕಲಿಸುವುದಾಗಿ ಕರ್ನಾಟಕ ನವ ನಿರ್ಮಾಣ ಸೇನೆ ರಾಜ್ಯಾಧ್ಯಕ್ಷ ಭೀಮಾ ಶಂಕರ್ ಪಾಟೀಲ್ ಎಚ್ಚರಿಕೆ ನೀಡಿದ್ದಾರೆ. [ಬೆಂಗಳೂರಿಗೂ ಬಂತು 'ಕಿಸ್ ಆಫ್ ಲವ್'!]

Bengaluru

ಮುತ್ತಿನ ವಿನಿಮಯಕ್ಕೆ ಅವಕಾಶ ಬೇಡ : ಕಿಸ್ ಆಫ್ ಲವ್ ಕಾರ್ಯಕ್ರಮ ಆಯೋಜಿಸಲು ಪೊಲೀಸರು ಅನುಮತಿ ನೀಡಬಾರದು ಎಂದು ಹಿಂದೂ ಜಾಗರಣ ವೇದಿಕೆ ಅಧ್ಯಕ್ಷ ಹೊನ್ನೇನಹಳ್ಳಿ ರಾಜಣ್ಣ ಒತ್ತಾಯಿಸಿದ್ದಾರೆ. ಸಾರ್ವಜನಿಕವಾಗಿ ಮುತ್ತಿನ ವಿನಿಮಯ ಮಾಡಿಕೊಳ್ಳುವುದು ಅಸಭ್ಯ ಸಂಸ್ಕೃತಿ ಕಾರ್ಯಕ್ರಮಕ್ಕೆ ಅನುಮತಿ ಕೊಟ್ಟರೆ ಹೋರಾಟ ನಡೆಸುವುದಾಗಿ ಅವರು ಎಚ್ಚರಿಸಿದ್ದಾರೆ.

ಕೇರಳದಲ್ಲಿ ನಡೆಯುತ್ತಿರುವ 'ನೈತಿಕ ಪೊಲೀಸ್‌ ಗಿರಿ' ವಿರೋಧಿಸಿ ಕೆಲವು ದಿನಗಳ ಹಿಂದೆ ಕೊಚ್ಚಿಯಲ್ಲಿ ಕೆಲವು ಪ್ರಗತಿಪರ ಸಂಘಟನೆಗಳು 'ಕಿಸ್‌ ಆಫ್ ಲವ್‌' ಆಯೋಜಿಸಿದ್ದವು. ನಂತರ ರಾಷ್ಟ್ರಮಟ್ಟದಲ್ಲಿ 'ಕಿಸ್‌ ಆಫ್ ಲವ್‌' ಪರ ಮತ್ತು ವಿರೋಧ ಚರ್ಚೆ, ಪ್ರತಿಭಟನೆಗಳು ನಡೆಯುತ್ತಿವೆ.

ಅನುಮತಿಗಾಗಿ ಮನವಿ : ಬೆಂಗಳೂರಿನಲ್ಲಿ ನವೆಂಬರ್ ಅಂತ್ಯದೊಳಗೆ 'ಕಿಸ್ ಆಫ್ ಲವ್' ಆಯೋಜಿಸಬೇಕೆಂದು 2008ರಲ್ಲಿ 'ಪಿಂಕ್ ಚಡ್ಡಿ' ಚಳವಳಿಯಲ್ಲಿ ಸಕ್ರಿಯಪಾತ್ರ ವಹಿಸಿದ್ದ ರಚಿತಾ ತನೇಜಾ ಎಂಬ 23 ವರ್ಷದ ಮಾನವ ಹಕ್ಕು ಹೋರಾಟಗಾರ್ತಿ ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಸಂದೀಪ್ ಪಾಟೀಲ್ ಅವರಿಗೆ ಬುಧವಾರ ಮನವಿ ಸಲ್ಲಿಸಿದ್ದಾರೆ.

ಸಂದೀಪ್ ಪಾಟೀಲ್ ಅವರು ಕಾರ್ಯಕ್ರಮ ಆಯೋಜನೆ ಉದ್ದೇಶಗಳ ಬಗ್ಗೆ ಹಲವಾರು ಸ್ಪಷ್ಟನೆಗಳನ್ನು ನೀಡಿದ್ದು, ಇದಕ್ಕೆ ಉತ್ತರಿಸಲು ರಚಿತಾ ತನೇಜಾ ಅವರು ಕಾಲಾವಕಾಶ ಕೇಳಿದ್ದಾರೆ. ನವೆಂಬರ್ ಅಂತ್ಯದೊಳಗೆ ಬೆಂಗಳೂರಿನಲ್ಲಿ ಕಿಸ್‌ ಆಫ್‌ ಲವ್ ಆಯೋಜಿಸಲು ಸಿದ್ಧತೆ ನಡೆಸಲಾಗುತ್ತಿದ್ದು, ಭಾರೀ ವಿರೋಧ ವ್ಯಕ್ತವಾಗುತ್ತಿದೆ.

English summary
Organizers of the 'Kiss of Love' met po­l­ice officials on Wednesday to seek permission for the upcoming event in Bengaluru. DCP (Central) Sandeep Patil said, organizers had sought police permission. But we want some more clarifications about the event.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X