ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು : 'ಕಿಸ್ ಆಫ್‌ ಲವ್' ನಡೆಯುತ್ತಾ?

|
Google Oneindia Kannada News

ಬೆಂಗಳೂರು, ನ.29 : ಬೆಂಗಳೂರಿನಲ್ಲಿ 'ಕಿಸ್ ಆಫ್‌ ಲವ್' ಆಚರಣೆ ನಡೆಯಲಿದೆಯೇ? ಇಲ್ಲವೇ? ಈ ಪ್ರಶ್ನೆಗೆ ಇನ್ನೂ ಉತ್ತರ ದೊರಕಿಲ್ಲ. ಪೊಲೀಸರು ಕಾರ್ಯಕ್ರಮಕ್ಕೆ ಅನುಮತಿ ನೀಡಿಲ್ಲ. ಆದರೆ, 'ಕಿಸ್‌ ಆಫ್‌ ಲವ್‌' ಆಯೋಜಕರು ಭಾನುವಾರ ಕಾರ್ಯಕ್ರಮ ನಡೆಸುತ್ತೇವೆ ಎಂದು ಪೊಲೀಸರೊಂದಿಗೆ ಸಂಘರ್ಷಕ್ಕೆ ಇಳಿದಿದ್ದಾರೆ.

'ಕಿಸ್ ಆಫ್‌ ಲವ್‌'ನ ಮೊದಲಿನ ಸ್ವರೂಪವನ್ನು ಬದಲಾವಣೆ ಮಾಡಿ, ಯಾರಿಗೂ ತೊಂದರೆಯಾಗದಂತೆ ಭಾನುವಾರ ಸಂಜೆ 4 ಗಂಟೆಗೆ ಟೌನ್‌ಹಾಲ್ ಮುಂಭಾಗದಲ್ಲಿದಲ್ಲಿ 'ಕಿಸ್‌ ಆಫ್‌ ಲವ್‌' ಆಚರಿಸುವ ಬಗ್ಗೆ ಯೋಜನೆ ರೂಪಿಸುತ್ತಿದ್ದೇವೆ ಎಂದು ಆಯೋಜಕರು ಹೇಳಿದ್ದಾರೆ. [ಕಿಸ್ ಲವ್ ನಡೆಸಲು ಪೊಲೀಸರ ಒಪ್ಪಿಗೆ ಇಲ್ಲ]

Kiss of Love

ಬೆಂಗಳೂರು ನಗರ ಪೊಲೀಸರು 'ಕಿಸ್ ಆಫ್ ಲವ್' ನಡೆಸಲು ಅನುಮತಿ ನಿರಾಕರಿಸಿರುವ ಆದೇಶದ ಪ್ರತಿ ನಮಗೆ ಲಭಿಸಿದೆ. ಶನಿವಾರ ಸಂಜೆ ಸಂಘಟನೆಯ ಸದಸ್ಯರೆಲ್ಲಾ ಸಭೆ ಸೇರಿ ಮುಂದಿನ ಯೋಜನೆ ರೂಪಿಸುತ್ತೇವೆ ಎಂದು ಆಯೋಜಕರು ತಿಳಿಸಿದ್ದಾರೆ. [ಕಿಸ್ ಆಫ್ ಲವ್ ವಿದ್ಯಾರ್ಥಿಗಳು ಹೇಳೋದೇನು?]

ಅನುಮತಿ ಕೊಡಬೇಡಿ : ಟೌನ್‌ಹಾಲ್ ಮುಂದೆ 'ಕಿಸ್‌ ಆಫ್ ಲವ್' ನಡೆಸಲು ಅನುಮತಿ ನೀಡಬೇಡಿ ಎಂದು ಪುಟ್ಟಣ್ಣ ಚೆಟ್ಟಿ ಕುಟುಂಬದವರು ಪೊಲೀಸರಿಗೆ ಮನವಿ ಮಾಡಿದ್ದಾರೆ. ಇಂಥ ಅಸಭ್ಯ ಕಾರ್ಯಕ್ರಮಗಳಿಗೆ ಅನುಮತಿ ಕೊಟ್ಟರೆ, ಪುಟ್ಟಣ್ಣ ಚೆಟ್ಟಿ ಅವರ ಗೌರವಕ್ಕೆ ಧಕ್ಕೆ ಬರಲಿದೆ ಎಂದು ಅವರು ಪೊಲೀಸರಿಗೆ ಮಾಡಿರುವ ಮನವಿಯಲ್ಲಿ ತಿಳಿಸಿದ್ದಾರೆ. [ಕಿಸ್ ಆಫ್ ಲವ್ ವಿರುದ್ಧ ಒನಕೆ ಚಳವಳಿ]

ನೈತಿಕ ಪೊಲೀಸ್‌ ಗಿರಿಯನ್ನು ವಿರೋಧಿಸಿ ಕಾನೂನು ಚೌಕಟ್ಟಿನೊಳಗೆ ಪ್ರತಿಭಟನೆ ಮಾಡಬಹುದು. ಆದರೆ, ಸಾರ್ವಜನಿಕ ಸ್ಥಳದಲ್ಲಿ ಚುಂಬಿಸುವುದು, ಅಶ್ಲೀಲವಾಗಿ ವರ್ತಿಸುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. [ಕಿಸ್ ಆಫ್ ಲವ್ ನಿಮ್ಮ ಅಭಿಪ್ರಾಯ ತಿಳಿಸಿ]

'ಕಿಸ್‌ ಆಫ್‌ ಲವ್‌' ನಡೆಸಲು ಅನುಮತಿ ಕೋರಿ ಆಯೋಜಕರು ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್‌ ಕುಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದ್ದರು. ಆದರೆ, ಅಲೋಕ್ ಕುಮಾರ್ ಸಹ ಒಪ್ಪಿಗೆ ನೀಡಲು ಸಾಧ್ಯವಿಲ್ಲ ಎಂದು ಮನವಿಯನ್ನು ತಿರಸ್ಕರಿಸಿದ್ದಾರೆ.

English summary
As the ‘Kiss of Love’ event organizers threaten to defy police orders and carry on with the event on Sunday, November 30, near Town Hall Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X