ಕಿರಣ್ ಮಜುಂದಾರ್ ಷಾ ವಿರುದ್ಧ ವಾಟಾಳ್ ವಾಗ್ದಾಳಿ

Posted By:
Subscribe to Oneindia Kannada

ಬೆಂಗಳೂರು, ಸೆಪ್ಟೆಂಬರ್ 09 : "ಕಿರಣ್ ಮಜುಂದಾರ್ ಷಾ ಅವರನ್ನು ನಿಮ್ಹಾನ್ಸ್‌ಗೆ ಸೇರಿಸಬೇಕು, ಅವರಿಗೆ ಹುಚ್ಚುಹಿಡಿದೆ. ಬೆಂಗಳೂರನ್ನು 'ಬಂದ್‌ಳೂರು' ಅಂತ ಕರೆಯಲು ಅವರು ಯಾರು? ಕನ್ನಡಿಗರ ಪರವಾಗಿ ಹೋರಾಟ ಮಾಡಲು ಇಷ್ಟವಿಲ್ಲದಿದ್ದರೆ ಕರ್ನಾಟಕ ಬಿಟ್ಟು ಹೋಗಲಿ."

ಹೀಗೆಂದು ಆಕ್ರೋಶ ವ್ಯಕ್ತಪಡಿಸಿದವರು ಕನ್ನಡ ಕಟ್ಟಾಳು, ಕರ್ನಾಟಕ ಬಂದ್ ಹೋರಾಟದ ನೇತೃತ್ವ ವಹಿಸಿರುವ ವಾಟಾಳ್ ನಾಗರಾಜ್ ಅವರು. ವಿಶೇಷವಾಗಿ ರೂಪಿಸಿರುವ ಆಟೋದಲ್ಲಿ, ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆಗೆ ತೆರಳುವ ಮುನ್ನ, ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಷಾ ವಿರುದ್ಧ ಕಿಡಿಕಾರಿದರು.[ಹೊಸ ತಲೆಮಾರಿನ ಹೋರಾಟಗಾರರು, ಗಟ್ಟಿ ದನಿ, ಆಕ್ರೋಶ]

Kiran Mazumdar Shaw should be sent to NIMHANS : Vatal Nagaraj

ಕನ್ನಡಿಗರಿಗೆ ಕುಡಿಯಲು, ನೀರಾವರಿಗೆ ಸಾಕಷ್ಟು ನೀರಿಲ್ಲದಿದ್ದರೂ ತಮಿಳುನಾಡಿಗೆ ಕಾವೇರಿ ನೀರು ಹರಿಸಿದ್ದಕ್ಕಾಗಿ ಆಕ್ರೋಶಗೊಂಡಿರುವ ಕನ್ನಡಪರ ಸಂಘಟನೆಗಳು ಸೆಪ್ಟೆಂಬರ್ 9ರಂದು ಕರ್ನಾಟಕ ಬಂದ್‌ಗೆ ಕರೆ ನೀಡಿವೆ. ಕಳೆದ ಆರು ತಿಂಗಳಲ್ಲಿ ಕರ್ನಾಟಕ ಬಂದ್‌ಗೆ ನೀಡಲಾಗಿರುವ ನಾಲ್ಕನೇ ಕರೆ ಇದು.[ಕಾವೇರಿ: ಉರಿಯೋ ಬೆಂಕಿಗೆ ತುಪ್ಪ ಸುರಿದ ತಮಿಳುನಾಡು]

ಇದಕ್ಕೆ ಪ್ರತಿಯಾಗಿ ಬಯೋಕಾನ್ ಸಂಸ್ಥೆಯ ಮುಖ್ಯಸ್ಥೆ ಕಿರಣ್ ಮಜುಂದಾರ್ ಷಾ ಅವರು ಟ್ವಿಟ್ಟರ್‌ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು. ಬಂದ್‌ನಿಂದ ಎರಡೂ ರಾಜ್ಯದ ರೈತರಿಗೆ ಪ್ರಯೋಜನವಾಗುವುದಿಲ್ಲ. ಉತ್ಪನ್ನ ಕುಂಠಿತವಾಗುತ್ತದೆ ಎಂದು ವಾಗ್ಝರಿಯನ್ನು ಹರಿಯಬಿಟ್ಟಿದ್ದರು.[ಬಂದ್ ಬಗ್ಗೆ ಬಯೋಕಾನ್ ಕಿರಣ್ ಕಿಡಿ, ಟ್ವಿಟ್ಟರ್ ನಲ್ಲಿ ಉರಿ]

ಇಡೀ ಕರ್ನಾಟಕವೇ ಕಾವೇರಿ ನೀರಿಗಾಗಿ ಬಂದ್‌ನಲ್ಲಿ ಧುಮುಕಿರುವಾಗ ಕಿರಣ್ ಮಜುಂದಾರ್ ಷಾ ಅವರು ಈರೀತಿ ಹೇಳಿದರೆ ವಾಟಾಳ್ ನಾಗರಾಜ್ ಸುಮ್ಮನಿದ್ದಾರಾ? ಕಿರಣ್ ಅವರಿಗೆ ಹುಚ್ಚು ಹಿಡಿದಿದೆ.. ಕರ್ನಾಟಕದಲ್ಲಿ ಇರಲು ಇಷ್ಟವಿಲ್ಲದಿದ್ದರೆ ರಾಜ್ಯ ಬಿಟ್ಟು ತೊಲಗಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.[LIVE: ದೇವರಿದ್ದಾನೆ, ಎಲ್ಲವನ್ನು ನೋಡುತ್ತಿದ್ದಾನೆ: ಉಪೇಂದ್ರ]


ಕಿರಣ್ ಸಮಜಾಯಿಷಿ : ಕನ್ನಡಿಗರ ಆಕ್ರೋಶ ಭುಗಿಲೇಳುತ್ತಿದ್ದಂತೆ ತಮ್ಮ ಟ್ವೀಟನ್ನು ತೆಗೆದುಹಾಕಿರುವ ಕಿರಣ್ ಮಜುಂದಾರ್ ಷಾ, ಮಾಧ್ಯಮದವರು ನನ್ನ ಹೇಳಿಕೆಯನ್ನು ತಿರುಚಿ ಹಾಕಿದ್ದಾರೆ. ಅವರ ಮಾತಿಗೆ ಕಿವಿಯಾಗಬೇಡಿ. ನಾನು ಯಾವಾಗಲೂ ಕರ್ನಾಟಕದ ರೈತರ ಪರ ದನಿಯೆತ್ತಿದ್ದೇನೆ. ಎರಡೂ ರಾಜ್ಯಗಳ ನಡುವಿನ ವ್ಯಾಜ್ಯ ಅಹಿಂಸಾತ್ಮಕವಾಗಿ ಬಗೆಹರಿಯಬೇಕು ಎಂದಷ್ಟೇ ಹೇಳಿದ್ದು ಎಂದು ಅವರು ಸಮಜಾಯಿಷಿ ನೀಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Kannada activist and former MLC Vatal Nagaraj has lambasted Kiran Mazumdar Shaw, Biocon chief, for tweeting against Karnataka bandh on 9th September, which has been called to protest against releasing Cauvery water to Tamil Nadu. Vatal Nagaraj said, Shaw should be sent to NIMHANS.
Please Wait while comments are loading...