ಈ ವರ್ಷ ಮಾವು ಬಲು ದುಬಾರಿ: ಮೇಳಕ್ಕೂ ನೀತಿ ಸಂಹಿತೆ ಅಡ್ಡಿ

Posted By: Nayana
Subscribe to Oneindia Kannada

ಬೆಂಗಳೂರು, ಏಪ್ರಿಲ್ 07: ಈ ಬಾರಿ ಮಾವಿನ ಹೂ ಭರ್ಜರಿಯಾಗಿ ಬಂದಿತ್ತು. ಆದರೆ ಅಕಾಲಿಕ ಮಳೆಯಿಂದಾಗಿ ಮಾವಿನ ಬೆಳೆ ನಾಶವಾಗಿದ್ದು, ಕೇವಲ ಅರ್ಧದಷ್ಟು ಹಣ್ಣು ಮಾತ್ರ ಮಾರುಕಟ್ಟೆ ಸೇರಲಿದೆ. ಈ ಬಾರಿ ಇಳಿ ಹಂಗಾಮನ್ನು ಎದುರಿಸಲಾಗುತ್ತಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | 2018ರ ನಿಮ್ಮ ಕನಸಿನ ಸಂಪುಟವನ್ನು ಆಯ್ಕೆ ಮಾಡಿ

8.5ಲಕ್ಷ ಟನ್ ಮಾವುಗಳನ್ನು ನಿರೀಕ್ಷಿಸಲಾಗಿತ್ತು ಆದರೆ ಕೇವಲ ನಾಲ್ಕು ಲಕ್ಷ ಟನ್ ಮಾತ್ರ ಮಾರುಕಟ್ಟೆಗೆ ಬರಲಿದೆ ಹಾಗಾಗಿ ಈ ಬಾರಿ ಮಾವಿನ ಬೆಲೆ ಗಗನಕ್ಕೇರುವುದು ಮಾತ್ರ ಸತ್ಯ. ಕೋಲಾರದ ಶ್ರೀನಿವಾಸಪುರದಲ್ಲಿ ಅತಿ ಹೆಚ್ಚು ಮಾವುಗಳನ್ನು ಬೆಳೆಯಲಾಗುತ್ತಿತ್ತು. ಆದರೆ ಈ ಬಾರಿ ಆಲಿಕಲ್ಲು ಮಳೆಯಿಂದಾಗಿ ಮಾವಿನ ಕಾಯಿಗಳು ಉದುರಿವೆ.

ಅಕಾಲಿಕ ಮಳೆ: ನಿರೀಕ್ಷೆಯಂತೆ ಮಾರುಕಟ್ಟೆ ತಲುಪಲಿದೆಯೇ ಮಾವುಗಳು

ಕರ್ನಾಟಕದಲ್ಲಿ ಕೋಲಾರ, ಚಿಕ್ಕಬಳ್ಳಾಪುರ, ಹಾವೇರಿ, ರಾಮನಗರ, ಬೆಂಗಳೂರು ಗ್ರಾಮಾಂತರ, ಧಾರವಾಡಿ ಹೀಗೆ ಒಟ್ಟು 16 ಜಿಲ್ಲೆಗಳಲ್ಲಿ 1.7 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತದೆ. ವರ್ಷದಲ್ಲಿ 7.5 ಲಕ್ಷ ಟನ್ ಗೂ ಅಧಿಕ ಮಾವು ಬೆಳೆಯಲಾಗುತ್ತದೆ.

King of fruits likely to get pricey this year

ಅದರಲ್ಲಿ 10ಸಾವಿರ ಟನ್‌ ನಷ್ಟು ವಿದೇಶಕ್ಕೆ ರಫ್ತು ಮಾಡಲಾಗುತ್ತದೆ. ಈ ವರ್ಷ 25 ಸಾವಿರ ಟನ್‌ ಅಷ್ಟು ಮಾವಿನ ಹಣ್ಣುಗಳನ್ನು ಅಮೇರಿಕ, ಸಿಂಗಾಪೂರ್, ಯುಕೆ, ಬ್ರೆಜಿಲ್ ಗೆ ರಫ್ತು ಮಾಡಬೇಕೆನ್ನುವ ಆಶಯ ಹೊಂದಿದ್ದೇವೆ ಎಂದು ಮಾವು ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ನಾಗರಾಜ್ ತಿಳಿಸಿದ್ದಾರೆ.

ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ಈ ಬಾರಿ ರೈತರು ಸಂಕಷ್ಟಕ್ಕೆ ಸಲಿಕುವ ಸಾದ್ಯತೆಗಳಿವೆ.ಯಾಕೆಂದರೆ ಪ್ರತಿ ವರ್ಷವೂ ಮಾವು ಅಭಿವೃದ್ಧಿ ನಿಗಮವು ಮಾವು ಮೇಳವನ್ನು ಆಯೋಜನೆ ಮಾಡುತ್ತಿತ್ತು. ಕಳೆದ ವರ್ಷ ಮೇ 5 ರಂದು ಮಾವು ಮೇಳ ನಡೆದಿತ್ತು. ಅದರಲ್ಲಿ 125 ಮಳಗೆಗಳಿಗೆ ಅವಕಾಶ ಕಲ್ಪಿಸಲಾಗಿತ್ತು.

ಈ ವರ್ಷ ಮೇಳವನ್ನು ಆಯೋಜಿಸುವ ಕುರಿತು ಆಲೋಚಿಸಬೇಕಿದೆ. ಮುಖ್ಯ ಚುನಾವಣಾಧಿಕಾರಿಗಳಿಗೆ ಪತ್ರ ಬರೆದು ಅನುಮತಿ ಪಡೆಯಬೇಕಿದೆ. ಆದರೆ ಯಾವುದೇ ಉದ್ಘಾಟನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳದೇ ಮೇಳವನ್ನು ಪ್ರಾರಂಭಿಸಬೇಕು. ಮೇ 20 ರಿಂದ 25ರವರೆಗೆ ಕಾಯಲೇ ಬೇಕಿದೆ.

ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ನಿಗಮವು ಪ್ರತಿ ವರ್ಷ ಮೇ ಮೊದಲ ವಾರದಲ್ಲಿ ಲಾಲ್‌ಬಾಗ್ ನಲ್ಲಿ ಮಾವು ಮೇಳವನ್ನು ಆಯೋಜನೆ ಮಾಡುತ್ತಿತ್ತು. ನಂತರ ನಗರದ ಹಲವಾರು ಭಾಗಗಳಲ್ಲಿ ಆಯೋಜಿಸುತ್ತಿತ್ತು. ರಾಮನಗರದಿಂದ ಈಗಾಗಲೇ ಮಾವುಗಳು ಬರಲು ಪ್ರಾರಂಭವಾಗಿದೆ.

ಕೋಲಾರದಿಂದ ಮೇ ತಿಂಗಳ ಆರಂಭದಲ್ಲಿ ಮಾವುಗಳು ಬರುತ್ತವೆ. ಪ್ರತಿ ಷರ್ವ 5 ಕೋಟಿ ರೂ ಮೌಲ್ಯದ ಮಾವಿನ ಹಣ್ಣಿ ವ್ಯಾಪಾರವು ಕೇವಲ ಲಾಲ್‌ಬಾಗ್‌ನಲ್ಲಿ ನಡೆಯುವ ಒಂದು ಮೇಳದಲ್ಲಿಯೇ ಬರುತ್ತಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Despite good flowering of the mango crop, the yield is expected to be only half the normal this year, all thanks to excess rainfall. thunder showers and hailstorms.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ