ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅನಾಥ ಶಿಶುವಿಗೆ ಎದೆಹಾಲುಣಿಸಿದ್ದ ಕಾನ್ಸ್ಟೇಬಲ್‌ಗೆ ಮೇಯರ್‌ ಗೌರವ

By Manjunatha
|
Google Oneindia Kannada News

ಬೆಂಗಳೂರು, ಜೂನ್ 23: ಕಸದ ತೊಟ್ಟಿಯಲ್ಲಿ ಸಿಕ್ಕಿದ ಅನಾಥ ಶಿಶುವನ್ನು ಠಾಣೆಗೆ ಕರೆತಂದು ಎದೆಹಾಲುಣಿಸಿ ಕಂದನ ರಕ್ಷಿಸಿದ್ದ ಕಾನ್ಸ್ಟೇಬಲ್ ಅರ್ಚನಾಗೆ ಇಂದು ಬಿಬಿಎಂಪಿ ಮೇಯರ್ ಅವರು ಅಭಿನಂಧನೆ ಸಲ್ಲಿಸಿದರು.

ಮೇಯರ್ ಸಂಪತ್‌ರಾಜ್ ಅವರು ಇಂದು ಕಾನ್ಸ್ಟೇಬಲ್ ಅರ್ಚನಾ ಅವರನ್ನು ಭೇಟಿಯಾಗಿ ಹೂಗುಚ್ಛ ನೀಡಿ, ಸೀರೆ ಜೊತೆ ನಗದು ಹಣವನ್ನೂ ನೀಡಿ ಅವರ ಮಾನವೀಯತೆ ತುಂಬಿದ ಕಾರ್ಯಕ್ಕೆ ಅಭಿನಂಧನೆ ಸಲ್ಲಿಸಿದ್ದಾರೆ.

ಅನಾಥ ಶಿಶುವಿಗೆ ಎದೆ ಹಾಲುಣಿಸಿ ಮಾನವೀಯತೆ ತೋರಿದ ಮಹಿಳಾ ಕಾನ್‌ಸ್ಟೆಬಲ್ ಅನಾಥ ಶಿಶುವಿಗೆ ಎದೆ ಹಾಲುಣಿಸಿ ಮಾನವೀಯತೆ ತೋರಿದ ಮಹಿಳಾ ಕಾನ್‌ಸ್ಟೆಬಲ್

ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯ ಮಹಿಳಾ ಪೇದೆ ಅರ್ಚನಾ ಅವರಿಗೆ ಜೂನ್ 7ರಂದು ದೊಡ್ಡ ತೋಗೂರಿನ ಬಳಿ ಬೀದಿ ಬದಿಯಲ್ಲಿ ಕರುಳು ಬಳ್ಳಿ ಸಹ ಕತ್ತರಿಸಿದೆ ಪ್ಲಾಸ್ಟಿಕ್ ಕವರ್‌ನಲ್ಲಿ ಇಟ್ಟಿದ್ದ ಅನಾಥ ಶಿಶುವೊಂದು ಸಿಕ್ಕಿತ್ತು ಅದನ್ನು ಠಾಣೆಗೆ ತಂದಿದ್ದ ಅವರು ಹಾಲುಣಿಸಿ ಕಾಪಾಡಿದ್ದರು.

Kind hearted police Constable Archana gets awards from BBMP mayor

ಮಾತೃಹೃದಯದ ಅರ್ಚನಾ ಅವರ ಈ ಕಾರ್ಯ ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆಗೆ ಕಾರಣವಾಗಿತ್ತು. ದಿನ ಪತ್ರಿಕೆಗಳು, ಸುದ್ದಿ ಮಾಧ್ಯಮಗಳು ಈ ಮಾನವೀಯತೆ ತುಂಬಿದ ಕಾರ್ಯವನ್ನು ಶ್ಲಾಘಿಸಿ ವರದಿ ಮಾಡಿದ್ದವು.

ಮಹಿಳಾ ಪೇದೆ ಹಾಲುಣಿಸಿ ರಕ್ಷಿಸಿದ್ದ ಮಗು ಕುಮಾರಸ್ವಾಮಿ ಸಾವುಮಹಿಳಾ ಪೇದೆ ಹಾಲುಣಿಸಿ ರಕ್ಷಿಸಿದ್ದ ಮಗು ಕುಮಾರಸ್ವಾಮಿ ಸಾವು

ಅನಾಥ ಶಿಶುವಿಗೆ ಠಾಣೆಯ ಸಿಬ್ಬಂದಿಯೇ ಕುಮಾರಸ್ವಾಮಿ ಎಂದು ನಾಮಕರಣ ಮಾಡಿದ್ದರು. ಅದನ್ನು ಸರ್ಕಾರಿ ಶಿಶು ಪಾಲನಾ ಕೇಂದ್ರಕ್ಕೆ ಬಿಟ್ಟಿದ್ದರು. ಆದರೆ ದುರಾದೃಷ್ಟವಶಾತ್ ಮಗು ಬದುಕುಳಿಯಲಿಲ್ಲ.

English summary
kind hearted police Constable Archana who saved a orphan infant life gets reward from BBMP mayor Sampat Raj today. The Infant Archana saved unluckily died some days ago.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X