ಮೈಸೂರು ರಸ್ತೆ: ಕಿಲ್ಲರ್ ಬಿಎಂಟಿಸಿಗೆ ಯುವತಿ ಬಲಿ

Posted By:
Subscribe to Oneindia Kannada

ಬೆಂಗಳೂರು, ಮೇ 22: 'ಕಿಲ್ಲರ್ ಬಿಎಂಟಿಸಿ' ಎಂಬ ಅಪಖ್ಯಾತಿಗೆ ಒಳಗಾಗಿರುವ ಬೆಂಗಳೂರಿನ ಮಹಾನಗರ ಸಾರಿಗೆ ಬಸ್ಸಿಗೆ ಸಿಲುಕಿ ಯುವತಿಯೊಬ್ಬರು ಸಾವನ್ನಪ್ಪಿರುವ ಘಟನೆ ಮೈಸೂರು ರಸ್ತೆಯಲ್ಲಿ ಭಾನುವಾರ ಬೆಳಗ್ಗೆ ಸಂಭವಿಸಿದೆ.

ಟಿ. ನರಸೀಪುರದಲ್ಲಿ ಮದುವೆ ಕಾರ್ಯಕ್ರಮಕ್ಕಾಗಿ ತನ್ನ ಅಣ್ಣನ ಜೊತೆ ಬೈಕಿನಲ್ಲಿ ತೆರಳುತ್ತಿದ್ದ 17 ವರ್ಷದ ಯುವತಿ ಸವಿತಾ ಮೃತ ದುರ್ದೈವಿ. ಮೈಸೂರು ರಸ್ತೆ ಪಂತರಪಾಳ್ಯ ಬಳಿ ಸಾಗುತ್ತಿದ್ದಾಗ,ಬೈಕಿಗೆ ಹಿಂಬದಿಯಿಂದ ಬಿಎಂಟಿಸಿ ಬಸ್ ಗುದ್ದಿದೆ.

ಬೈಕಿನಿಂದ ಬಿದ್ದ ಸವಿತಾ ಅವರ ತಲೆ ಮೇಲೆ ಬಸ್ ಚಕ್ರ ಹಾದು ಹೋಗಿದೆ. ಹೆಲ್ಮೆಟ್ ಧರಿಸಿದ ಸವಿತಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸವಿತಾಳ ಅಣ್ಣನಿಗೆ ತೀವ್ರ ಗಾಯಗಳಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. [ಮೃತ್ಯುರೂಪಿ ನಾಯಂಡಹಳ್ಳಿ ಜಂಕ್ಷನ್ ಹೀಗಿದೆ ನೋಡಿ]

Bengaluru : Killer BMTC bus mows down a Teenager in Mysore road, Kengeri

ಮೈಸೂರು ಮೂಲದ ಪುಟ್ಟಸ್ವಾಮಿ ಹಾಗೂ ವಿನೋದಮ್ಮ ಅವರ ಪುತ್ರಿಯಾಗಿದ್ದ ಸವಿತಾ ಇತ್ತೀಚೆಗೆ ಎಸ್ ಎಸ್ ಎಲ್ ಸಿಯಲ್ಲಿ 390 ಅಂಕ ಪಡೆದು ತೇರ್ಗಡೆಯಾಗಿದ್ದರು. ಅಕ್ಕನ ಮನೆಯಲ್ಲಿ ಉಳಿದುಕೊಂಡು, ಗಾರ್ಮೆಂಟ್ ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಶೀಘ್ರದಲ್ಲೇ ಪಿಯು ಕಾಲೇಜಿಗೆ ಸೇರುವ ಕನಸು ಹೊಂದಿದ್ದರು. ಆದರೆ, ಕನಸು ಕಮರಿ ಹೋಗಿದೆ.[ಮೈಸೂರು ರಸ್ತೆಗೆ ಬ್ಯಾಟರಾಯನಪುರ ಪೊಲೀಸರೇ ಡಾಕ್ಟರ್ಸ್!]

ಈ ಘಟನೆ ನಂತರ ಮೈಸೂರು ರಸ್ತೆಯಲ್ಲಿ ಕೆಲ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಪ್ರಕರಣ ದಾಖಲಿಸಿಕೊಂಡಿರುವ ಕೆಂಗೇರಿ ಪೊಲೀಸರು, ತನಿಖೆ ಮುಂದುವರೆಸಿದ್ದಾರೆ. (ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bengaluru : Killer BMTC bus mows down a teenager in Kengeri police station limits today. BMTC bus claimed life of a 17 year old girl Savitha, who was travelling on bike with her brother near Pantharapalya, Mysuru road. BMTC bus hit the bike from behind and she died on spot, while grievously injured brother has been admitted to Victoria hospital.
Please Wait while comments are loading...