ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸ್ಪರ್ಷ್ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಇಬ್ಬರಿಗೆ ಕಿಡ್ನಿ ಕಸಿ

|
Google Oneindia Kannada News

ಬೆಂಗಳೂರು, ಏಪ್ರಿಲ್ 19: ನಗರದ ಯಶವಂತಪುರದಲ್ಲಿರುವ ಸ್ಪರ್ಷ ಆಸ್ಪತ್ರೆಯಲ್ಲಿ ಎರಡು ಕಿಸ್ನಿ ಕಸಿಯನ್ನು ಯಶಸ್ವಿಯಾಗಿ ನರವೇರಿಸಲಾಗಿದೆ.

ಮೆದುಳು ನಿಷ್ಕ್ರಿಯಗೊಂಡಿದ್ದ 21 ವರ್ಷದ ಮೃತ ದಾನಿಯಿಂದ ಪಡೆದುಕೊಂಡ ಕಿಡ್ನಿಯನ್ನು ಬೆಂಗಳೂರಿನ 61 ವರ್ಷದ ರೋಗಿಗೆ ಕಸಿ ಮಾಡಲಾಗಿದ್ದರೆ, ತುಮಕೂರಿನ 33 ವರ್ಷದ ನಾಗರತ್ನಮ್ಮ ಅವರು ತಮ್ಮ 43 ವರ್ಷ ವಯಸ್ಸಿನ ಗಂಡ ಅಶ್ವಥಯ್ಯ ಅವರಿಗೆ ತಮ್ಮ ಒಂದು ಕಿಡ್ನಿಯನ್ನು ದಾನಮಾಡಿದ್ದರು.

ಕತ್ತರಿಸಿಹೋಗಿದ್ದ ಕೈ ಹಾಸ್ಮಾಟ್ ಆಸ್ಪತ್ರೆಯಲ್ಲಿ ಮತ್ತೆ ಜೋಡಣೆಕತ್ತರಿಸಿಹೋಗಿದ್ದ ಕೈ ಹಾಸ್ಮಾಟ್ ಆಸ್ಪತ್ರೆಯಲ್ಲಿ ಮತ್ತೆ ಜೋಡಣೆ

ಎರಡೂ ಪ್ರಕರಣಗಳಲ್ಲಿ ಯಶಸ್ವಿಯಾಗಿ ಕಸಿ ಮಾಡಿಸಿಕೊಂಡಿರುವ ಇಬ್ಬರು ಚೇತರಿಸಿಕೊಳ್ಳುತ್ತಿರುವುದರ ಜೊತೆಗೆ ಚಿಕಿತ್ಸೆಗೆ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿರುವುದು ಸ್ಪರ್ಷ್ ಆಸ್ಪತ್ರೆಗೆ ವೈದ್ಯರಿಗೆ ಸಂತಸ ತಂದಿದೆ. ಓರ್ವ ದಾನಿಯಿಂದ ಅಂಗಾಂಗಳ ಕಸಿಗಾಗಿ ಕಾಯುತ್ತಿರುವ ಎಂಟು ಮಂದಿಯ ಜೀವವನ್ನು ಉಳಿಸಬಹುದು. ಹೀಗಾಗಿ, ಅಂಗಾಂಗ ದಾನ ಅತ್ಯಂತ ಶ್ರೇಷ್ಠ ದಾನವೆಂದು ಬಣ್ಣಿಸಲಾಗುತ್ತದೆ.

Kidney transplantation saves two lives in Sparsh hospital

ಕಿಡ್ನಿ ಕಸಿಯನ್ನು ನೆಫ್ರೋಯೂರಿಯಾಲಜಿಸ್ಟ್ ಡಾ. ರಾಮಚಂದ್ರ ಮತ್ತು ಯೂರಿಯಾಲಜಿಸ್ಟ್ ಡಾ. ಅವಿನಾಶ್‍ ಅವರ ನೇತೃತ್ವದ ತಂಡ ಯಶಸ್ವಿಯಾಗಿ ನೆರವೇರಿಸಿದೆ. ಪತಿ - ಪತ್ನಿಯರ ನೇರ ಕಿಡ್ನಿ ವರ್ಗಾವಣೆಯ ಶಸ್ತ್ರಚಿಕಿತ್ಸೆಗೆ ಮೂರು ಗಂಟೆ ಸಮಯ ತೆಗೆದುಕೊಂಡಿತ್ತು.

ಹಾಗೆಯೇ, ಮೃತ ದಾನಿಯಿಂದ ಪಡೆದುಕೊಂಡ ಕಿಡ್ನಿಯಲ್ಲಿ ಮೂರು ಗಂಟೆಗಳಲ್ಲಿ ಕಸಿ ಮಾಡಲಾಗಿತ್ತು. ಕಿಡ್ನಿ ಕಸಿ ಮಾಡಿಸಿಕೊಂಡ ಇಬ್ಬರು ಕೂಡ ಚೇತರಿಸಿಕೊಂಡಿದ್ದು, ದಿನ ನಿತ್ಯದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಕಿಡ್ನಿ ಕಸಿಯ ಜೊತೆಗೆ, ಹೃದಯ, ಮೆದೋಜೀರಕಾಂಗ, ಶ್ವಾಸಕೋಶ ಮತ್ತು ಹೃದಯ ಕವಾಟುಗಳ (ಟಿಶ್ಯು) ಕಸಿಯನ್ನು ಸಹ ಮಾಡುವುದಾಗಿ ಸ್ಪರ್ಷ್ ಹಾಸ್ಪಿಟಲ್‍ ಪ್ರಕಟಿಸಿದೆ. ಮೂರು ವರ್ಷಗಳ ಹಿಂದೆ ಯಶವಂತಪುರದಲ್ಲಿ ಪ್ರಾರಂಭಿಸಲಾದ 250 ಹಾಸಿಗೆಗಳ ಸ್ಪರ್ಷ್ ಆಸ್ಪತ್ರೆಯಲ್ಲಿ ಎಲ್ಲಾ ರೀತಿಯ ಸೌಲಭ್ಯಗಳು ಒಂದೆಡೆ ಲಭ್ಯವಾಗುತ್ತಿವೆ. ಬೆಂಗಳೂರಿನ ಇನ್‍ಫೆಂಟ್ರಿ ರಸ್ತೆ ಮತ್ತು ಬನ್ನೇರುಘಟ್ಟದಲ್ಲಿ ಸ್ಪರ್ಷ್ ಆಸ್ಪತ್ರೆಗಳಿವೆ. ಹಾಗೆಯೇ, ಮೈಸೂರು, ದಾವಣಗೆರೆ ಮತ್ತು ವಿಜಯಪುರದಲ್ಲೂ ಸ್ಪರ್ಷ್ ಆಸ್ಪತ್ರೆ ಇದೆ.

English summary
Sparsh hospital Bengaluru has successfully transplanted kidney to two different patients. A 21 years old youth who was medically dead has donated his kidney. In another incident, a wife donated her kidney to save her husband's life.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X