ಭೂತಾನ್‌ನಿಂದ 20 ಲಕ್ಷ ಹಣ ತಂದು ಶೆಡ್‌ನಲ್ಲಿ ವಾಸವಾಗಿದ್ದರು!

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 17 : ಬೆಂಗಳೂರಿನಲ್ಲಿ ಅಡಗಿದ್ದ ನಿಷೇಧಿತ ಎನ್‌ಡಿಎಫ್‌ಬಿ ಸದಸ್ಯ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಭೂತಾನ್‌ನಲ್ಲಿ ಹಂದಿ ಸಾಕಣೆ ಘಟಕದ ಮಾಲೀಕನ ಪುತ್ರನನ್ನು ಅಪಹರಣ ಮಾಡಿ, 20 ಲಕ್ಷ ಹಣ ಪಡೆದಿದ್ದ ಆರೋಪಿಗಳು, ಬೆಂಗಳೂರಿಗೆ ಬಂದು ಶೆಡ್ ಹಾಕಿಕೊಂಡು ವಾಸಿಸುತ್ತಿದ್ದರು.

ಅವಲಹಳ್ಳಿ ಸಮೀಪದ ಬಿದರಹಳ್ಳಿಯಲ್ಲಿ ವಾಸವಾಗಿದ್ದ ನಿಷೇಧಿತ ಬೋಡೊಲ್ಯಾಂಡ್ ರಾಷ್ಟ್ರೀಯ ಪ್ರಜಾಸತ್ತಾತ್ಮಕ ರಂಗ (ಎನ್‌ಡಿಎಫ್‌ಬಿ) ಸದಸ್ಯ ಸೇರಿದಂತೆ ಮೂವರನ್ನು, ಅಸ್ಸಾಂ ಪೊಲೀಸರು ಮತ್ತು ಸಿಸಿಬಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. [ಲಾಟರಿ ಆಸೆಗೆ 38 ಲಕ್ಷ ರು. ಕಳಕೊಂಡ ಬೆಂಗಳೂರು ಮಹಿಳೆ]

central crime branch

ಬಂಧಿತರನ್ನು ಅಸ್ಸಾಂ ಮೂಲದ ಬೊಬೆನ್ ಮುಶಾಯ್ (43), ಜೆಲ್ಸನ್‌ ಬಸುಮತಾರಿ (20) ಹಾಗೂ ನರ್ಸವಾನ್ ನರ್ಜಾರಿ (25) ಎಂದು ಗುರುತಿಸಲಾಗಿದೆ. ಈ ಮೂವರು ಆರೋಪಿಗಳು ಸೇರಿದಂತೆ 9 ಮಂದಿಯ ತಂಡ ಫೆಬ್ರವರಿ 22ರಂದು ಭೂತಾನ್‌ನಲ್ಲಿ ಹಂದಿ ಸಾಕಣೆ ಘಟಕದ ಮಾಲೀಕನ ಪುತ್ರ ಮತ್ತು ಅಲ್ಲಿನ ಕೆಲಸಗಾರನನ್ನು ಅಪಹರಿಸಿತ್ತು. [ಇವರು ಹಗಲಿನಲ್ಲಿ ಸೆಲ್ಸ್ ಮನ್, ರಾತ್ರಿ ದರೋಡೆಕೋರರು]

20 ಲಕ್ಷ ವಸೂಲಿ ಮಾಡಿದ್ದರು : 2016ರ ಫೆ.22ರಂದು ರಾತ್ರಿ 8.30ರ ಸುಮಾರಿಗೆ ಹಂದಿಗಳಿಗೆ ಮೇವು ಹಾಕಲು ಕೆಲಸಗಾರನ ಜೊತೆ ಬಂದಿದ್ದ ಅಜಿತ್‌ ರಾಯ್‌ನನ್ನು ನಾಡಪಿಸ್ತೂಲು ಹಾಗೂ ಮಾರಕಾಸ್ತ್ರಗಳಿಂದ ಬೆದರಿಸಿ ಇವರು ಆರೋಪಿಗಳು ಅಪಹರಣ ಮಾಡಿದ್ದರು. ಅಜಿತ್ ಜೊತೆಗೆ ಕೆಲಸಗಾರ ಬೋಲ್‌ ಬಹದ್ದೂರ್‌ ಸುಬ್ಬನನ್ನು ಅಪಹರಣ ಮಾಡಲಾಗಿತ್ತು. [ಬೆಂಗಳೂರಲ್ಲಿರುವ ವಿದೇಶಿ ವಿದ್ಯಾರ್ಥಿಗಳ ಜನಗಣತಿ ಶುರು]

ಇಬ್ಬರನ್ನು ಭಾರತ-ಭೂತಾನ್ ಗಡಿ ಪ್ರದೇಶವಾದ ಚಿರಾಂಗ್ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಐದು ದಿನ ಇಟ್ಟುಕೊಂಡು, ಅವರಿಗೆ ಚಿತ್ರಹಿಂಸೆ ನೀಡಿ, ಅಜಿತ್‌ ರಾಯ್‌ ತಂದೆಗೆ ಕರೆ ಮಾಡಿ 20 ವಸೂಲಿ ಮಾಡಿದ್ದರು. ಹಣಕೊಟ್ಟು ಇಬ್ಬರನ್ನು ಬಿಡಿಸಿಕೊಂಡು ಹೋಗಿದ್ದ ಅಜಿತ್ ತಂದೆ ನಂತರ ಚಿರಾಂಗ್‌ ಜಿಲ್ಲೆ ಸಿಡ್ಲಿ ಠಾಣೆಗೆ ದೂರು ನೀಡಿದ್ದರು.

ಆರೋಪಿಗಳ ಪೈಕಿ ಬಿರ್ಮೋಲ್, ಫಕೂಮ್, ಜಿಬೋನ್, ಅನ್ಸುಲ್ ಮುಶಾಯ್ ಹಾಗೂ ಮಾನಮ್ ಬಸುಮತಾರಿ ಎಂಬುವರನ್ನು ಅಸ್ಸಾಂ ಪೊಲೀಸರು ಬಂಧಿಸಿದ್ದರು. ಬಂಧಿತರ ವಿಚಾರಣೆ ನಡೆಸಿದಾಗ ಬೆಂಗಳೂರಿನಲ್ಲಿದ್ದ ಮೂವರ ಮೊಬೈಲ್ ಸಂಖ್ಯೆಗಳು ಸಿಕ್ಕಿದ್ದವು.

ಪೋನ್ ಕರೆಗಳ ವಿವರಗಳನ್ನು ಸಂಗ್ರಹಿಸಿದಾಗ ಆವಲಹಳ್ಳಿ ಸುತ್ತಮುತ್ತಲ ಟವರ್‌ಗಳಿಂದ ಅವರ ಮೊಬೈಲ್‌ಗಳು ಸಂಪರ್ಕ ಪಡೆಯುತ್ತಿದ್ದುದು ತಿಳಿದುಬಂದಿತ್ತು. ಈ ಬಗ್ಗೆ ಅಸ್ಸಾಂ ಪೊಲೀಸರು ನಗರ ಪೊಲೀಸ್ ಆಯುಕ್ತ ಎನ್‌.ಎಸ್‌.ಮೇಘರಿಕ್ ಅವರಿಗೆ ಮಾಹಿತಿ ನೀಡಿದ್ದರು. ಮೇಘರಿಕ್ ಅವರು, ಸಿಸಿಬಿಗೆ ಪ್ರಕರಣ ಹಸ್ತಾಂತರ ಮಾಡಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bengaluru Central Crime Branch (CCB) along with Assam police, arrested three men, including a member of the National Democratic Front of Bodoland (NDFB), from a shed in Bidarahalli in connection with the kidnapping case in Bhutan.
Please Wait while comments are loading...