ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಪಟ ಜ್ಯೋತಿಷಿಗಳ ವಿರುದ್ಧ ಪ್ರತಿಭಟಿಸಲು ಬನ್ನಿ

By Mahesh
|
Google Oneindia Kannada News

ಬೆಂಗಳೂರು, ಡಿ.1: ಕನ್ನಡದ ಖಾಸಗಿ ಸುದ್ದಿ, ಮನರಂಜನೆ ವಾಹಿನಿಗಳಲ್ಲಿ ಫಲಜ್ಯೋತಿಷ್ಯ ಹೇಳುವ ಭವಿಷ್ಯಗಾರರ ವಿರುದ್ಧ ಫೇಸ್ ಬುಕ್ ನಲ್ಲಿ ಕೂಗೆದ್ದಿರುವುದು ಗೊತ್ತೇ ಇದೆ. ಕಪಟ ಜ್ಯೋತಿಷಿಗಳ ವಿರುದ್ಧ ಸಾಮಾಜಿಕ ಜಾಲ ತಾಣ ಫೇಸ್ ಬುಕ್ ನಲ್ಲಿ ಸಮಾನ ಮನಸ್ಕರಿಂದ ಆರಂಭವಾಗಿರುವ ಸಮರ ಮುಂದಿನ ಹಂತ ತಲುಪಿದೆ.

ಮಾನವ ಬಂಧುತ್ವ ವೇದಿಕೆ ಡಿಸೆಂಬರ್ 2ರಂದು ಬೆಳಿಗ್ಗೆ 10-30ಕ್ಕೆ ಜ್ಯೋತಿಷ್ಯ, ಮೂಢನಂಬಿಕೆ ವಿರೋಧಿ ಕಾನೂನು ಜಾರಿಗೊಳಿಸಲು ಒತ್ತಾಯಿಸಿ ಬೆಂಗಳೂರಿನ ಟೌನ್ ಹಾಲ್ ಮುಂಭಾಗ ಬಹಿರಂಗ ಸಭೆ ಮತ್ತು ಸಹಿ ಸಂಗ್ರಹ ಮತ್ತು ಜಾಥಾ ಹಮ್ಮಿಕೊಂಡಿದೆ. ಟೌನ್ ಹಾಲ್ ನಲ್ಲಿ ನಡೆಯುವ ಪ್ರತಿಭಟನೆ ಮುಂದುವರೆದು ರಾಜರಾಜೇಶ್ವರಿನಗರ ಪೊಲೀಸ್ ಠಾಣೆಯನ್ನು ತಲುಪಲಿದೆ.

ಬೆಂಗಳೂರಿನಿಂದ ಅರಂಭಗೊಳ್ಳುವ ಜಾಥಾ ರಾಜ್ಯದ ವಿವಿಧ ಭಾಗಗಳಲ್ಲಿ ಸಂಚರಿಸಿ ಬೆಳಗಾವಿಯಲ್ಲಿ ಸಮಾವೇಶಗೊಂಡು ಪೂರ್ಣವಾಗಲಿದೆ. ಫೇಸ್ ಬುಕ್ ನಲ್ಲಿ ಆರಂಭಿಸಿರುವ ಅಭಿಯಾನ ಮುಂದುವರೆಯಲಿದ್ದು, ಎಲ್ಲ ಟಿವಿಗಳಿಂದ ಈ ಕಪಟ ಜ್ಯೋತಿಷಿಗಳನ್ನು ಉಚ್ಚಾಟಿಸಲು ಚಳವಳಿ, ಕಾನೂನು ಹೋರಾಟ, ಜನಜಾಗೃತಿ ಮತ್ತಿತರ ಎಲ್ಲ ಮಾರ್ಗಗಳನ್ನು ಅನುಸರಿಸಲು ವೇದಿಕೆ ನಿರ್ಧರಿಸಿದೆ.

Kickout Astrologers Protest campaign on Dec 2 against Kannada TV Astrologers

Kickout Astrlogers ಎಂಬ ಹೆಸರಿನ ಫೇಸ್ ಬುಕ್ ಪುಟದಲ್ಲಿ ಟಿವಿ ಜ್ಯೋತಿಷಿಗಳ ಮಾತಿನ ಬಣ್ಣ ಬಯಲು ಮಾಡಲಾಗುತ್ತಿದೆ. ಜನರಲ್ಲಿ ಭೀತಿ ಹುಟ್ಟಿಸುವ, ಮಂತ್ರ ಜಪಿಸಿದರೆ ರೇಪ್ ನಡೆಯುವುದಿಲ್ಲ ಎಂದು ಪೊಳ್ಳು ಮಾತುಗಳನ್ನಾಡುವ ಜ್ಯೋತಿಷಿಗಳನ್ನು ಮೈಗಳ್ಳರು, ಸುಳ್ಳರು, ಸಾಮಾಜಿಕ ಪೀಡೆಗಳು ಎಂದು ಜರೆಯಲಾಗಿದೆ. ಟಿವಿ ಮಾಧ್ಯಮಗಳಲ್ಲದೆ ಪತ್ರಿಕಾ, ವೆಬ್ ಸೈಟ್ ಗಳಲ್ಲೂ ಈ 'ಗುರೂಜಿ' ಗಳ ಸಮಸ್ಯೆ ಇದ್ದೇ ಇದೆ. ಈ ಪಿಡುಗನ್ನು ಹೋಗಲಾಡಿಸಲು ಸಂಘಟಿತ ಹೋರಾಟ ಅಗತ್ಯವಾದ್ದು, ಈ ಪ್ರತಿಭಟನೆ ಕಾರ್ಯರೂಪ ಪಡೆದುಕೊಂಡಿದೆ.

ಎಲ್ಲ ನ್ಯೂಸ್ ಮತ್ತು ಮನರಂಜನಾ ವಾಹಿನಿಗಳು ಎಲ್ಲ ಬಗೆಯ ಜ್ಯೋತಿಷ್ಯ, ವಾಸ್ತು, ನ್ಯೂಮರಾಲಜಿ ಮಣ್ಣುಮಸಿ ಕಾರ್ಯಕ್ರಮಗಳನ್ನು ಕೂಡಲೇ ನಿಲ್ಲಿಸಿ ತಾವು ಜನಪರವಾಗಿರುವುದನ್ನು ಘೋಷಿಸಿಕೊಳ್ಳಬೇಕು. ಇದು ನಮ್ಮ ಕಳಕಳಿಯ ಮನವಿ. ಮಿಕ್ಕಂತೆ ಈ ಅಭಿಯಾನ ಮುಂದುವರೆಯಲಿದೆ, ಎಲ್ಲ ಮೀಡಿಯಾ ಚಾನಲ್ ಗಳಿಗೂ ಒಂದು ಆನ್ ಲೈನ್ ಪಿಟಿಷನ್ ಸಿದ್ಧವಾಗುತ್ತಿದೆ. Kickout Astrologers ಪುಟಕ್ಕೆ ದಿನವೊಂದರಲ್ಲೇ ಒಂದುಸಾವಿರಕ್ಕೂ ಹೆಚ್ಚು ಲೈಕುಗಳು ಬಿದ್ದಿವೆ. ಈ ಚಳವಳಿ ಮುಂದುವರೆಯಲಿದೆ ಎಂದು ವೇದಿಕೆ ಸದಸ್ಯರು ಹೇಳಿಕೊಂಡಿದ್ದಾರೆ.

English summary
A protest campaign against Kannada TV Astrologers will be held at Town Hall Bengaluru on Dec 2. It is a initiative started in social networking site Facebook by like mined people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X