ಕಿಚ್ಚ ಸುದೀಪ ದಂಪತಿ ವಿಚ್ಛೇದನ ಪ್ರಕರಣ ಸುಖಾಂತ್ಯ

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 24: ನಟ ಕಿಚ್ಚ ಸುದೀಪ್ ಹಾಗೂ ಅವರ ಪತ್ನಿ ಪ್ರಿಯಾ ರಾಧಾಕೃಷ್ಣನ್ ಅವರ ವಿವಾಹ ವಿಚ್ಛೇದನ ಪ್ರಕರಣವು ಸುಖಾಂತ್ಯ ಕಂಡಿದೆ.

ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರು ಇಬ್ಬರ ವಿರುದ್ಧ ಗರಂ ಆಗಿ, ಕಳೆದ ವಿಚಾರಣೆಯಲ್ಲಿ ಎಚ್ಚರಿಕೆ ನೀಡಿದ್ದರು.'ದಂಪತಿ ರಾಜಿ ಆಗಿದ್ರೆ ಅರ್ಜಿ ಹಿಂಪಡೆಯಿರಿ, ಕೋರ್ಟ್ ಸಮಯ ಏಕೆ ವ್ಯರ್ಥ ಮಾಡ್ತೀರಿ, ಆಗಸ್ಟ್ 24ರಂದು ಇಬ್ಬರು (ಕಿಚ್ಚ ಸುದೀಪ್ ಹಾಗೂ ಪ್ರಿಯಾ ರಾಧಾಕೃಷ್ಣನ್) ಎಲ್ಲೇ ಇದ್ದರೂ ನ್ಯಾಯಾಲಯಕ್ಕೆ ಹಾಜರಾಗಿ ವಿಚಾರಣೆ ಎದುರಿಸಬೇಕು' ಎಂದು ಕೌಟುಂಬಿಕ ನ್ಯಾಯಾಲಯದ ನ್ಯಾಯಧೀಶರು ಬುಧವಾರ (ಜೂನ್ 14) ದಂದು ಆದೇಶಿಸಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಸುದೀಪ್ ಪರ ವಕೀಲರು, ಕೇಸು ಹಿಂಪಡೆಯುವುದಾಗಿ ಕೋರ್ಟಿಗೆ ತಿಳಿಸಿದರು.

Kichcha Sudeepa -Priya Divorce case solved

ಇಬ್ಬರ ಕಿಚ್ಚ ಸುದೀಪ್ ದಾಂಪತ್ಯ ಜೀವನದಲ್ಲಿ ಬಿರುಕು ಉಂಟಾಗಿ, ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆದುಕೊಳ್ಳುವುದಕ್ಕೆ ಸುದೀಪ್, ಪತ್ನಿ ಪ್ರಿಯಾ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರುವ ಸುದ್ದಿ 2015ರಷ್ಟು ಹಳೆಯದು. ಸದ್ಯದ ಮಾಹಿತಿಯಂತೆ ಇಬ್ಬರು ಬೇರೆ ಬೇರೆ ಇದ್ದರೂ ಪರಸ್ಪರ ಚೆನ್ನಾಗಿದ್ದಾರೆ.

ಇದು ನನ್ನ ವೈಯಕ್ತಿಕ ವಿಚಾರ ಮಾಧ್ಯಮಗಳು, ಅಭಿಮಾನಿಗಳು, ಸಾರ್ವಜನಿಕರು ನನ್ನ ಖಾಸಗಿತನಕ್ಕೆ ಬೆಲೆ ನೀಡುವ ಭರವಸೆ ಇದೆ ಎಂದು ಸುದೀಪ ಅವರು ಈ ಹಿಂದೆ ಮನವಿ ಮಾಡಿಕೊಂಡಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Kichcha Sudeepa -Priya Divorce case solved as both agreed to take back the plea before family court.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ