ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಗತ್ತಿನ ವೇಗದ ಅಭಿವೃದ್ಧಿಯ ಏರ್‌ಪೋರ್ಟ್‌ಗಳಲ್ಲಿ ಕೆಐಎಗೆ ದ್ವಿತೀಯ ಸ್ಥಾನ

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್ 22: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ದಾಖಲೆಯ ಪ್ರಮಾಣದ ಪ್ರಯಾಣಿಕರನ್ನು ಬರಮಾಡಿಕೊಂಡು ಈಗಾಗಲೇ ದಾಖಲೆ ಬರೆದಿದೆ, ಇದೀಗ ವಿಶ್ವದ 2ನೇ ಅತಿ ವೇಗದ ಬೆಳವಣಿಗೆ ಹೊಂದುತ್ತಿರುವ ಏರ್‌ಪೋರ್ಟ್‌ ಎಂಬ ಮನ್ನಣೆಗೆ ಪಾತ್ರವಾಗಿದೆ.

ರೂಟ್ಸ್‌ ಆನ್‌ಲೈನ್‌ ಕಂಪನಿಯು 2018ರ ಜನವರಿಯಿಂದ ಜೂನ್‌ವರೆಗೆ ವಿಮಾನಯಾನ ಸೇವೆ ಮಾಹಿತಿ ಆಧರಿಸಿ ಅಧ್ಯಯನ ನಡೆಸಿದೆ. ಜಪಾನ್‌ ರಾಜಧಾನಿ ಟೊಕಿಯೋ ಹನೇಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮೊದಲ ಸ್ಥಾನದಲ್ಲಿದ್ದು, 43.28 ಲಕ್ಷ ಪ್ರಯಾಣಿಕರು ಹಾಗೂ ಕೆಐಎಎಲ್‌ನಿಂದ 41.80 ಲಕ್ಷ ಮಂದಿ ಪ್ರಯಾಣಿಸಿದ್ದಾರೆ.

ಕೇರಳಕ್ಕೆ ಹೆಚ್ಚುವರಿ ವಿಮಾನ: ಖಾಸಗಿ ವಿಮಾನ ಕಂಪನಿಗಳಿಗೆ ಸೂಚನೆಕೇರಳಕ್ಕೆ ಹೆಚ್ಚುವರಿ ವಿಮಾನ: ಖಾಸಗಿ ವಿಮಾನ ಕಂಪನಿಗಳಿಗೆ ಸೂಚನೆ

ಕೆಐಎಎಲ್‌ನಲ್ಲಿ ಎರಡನೇ ಟರ್ಮಿನಲ್‌ ಸಿದ್ಧಗೊಳ್ಳುತ್ತಿದ್ದು, ಹೆಚ್ಚುವರಿ ಪ್ರಯಾಣಿಕರನ್ನು ನಿರ್ವಹಿಸಲು ಅನುಕೂಲ ಆಗಲಿದೆ. ವಿಶ್ವದ ಅತಿ ದಟ್ಟಣೆಯ ಏರ್‌ಪೋರ್ಟ್‌ ಆಗುವತ್ತ ಹೆಜ್ಜೆ ಇಟ್ಟಿರುವ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ನಾನಾ ಮೂಲಸೌಕರ್ಯ ಒದಗಿಸುವ ಕೆಲಸವೂ ಮುಂದುವರೆದಿದೆ.

KIAL worlds second fastest growing airport

ಪ್ರಯಾಣಿಕರನ್ನು ನಿರ್ವಹಿಸುವ ಶೇಕಡವಾರು ಲೆಕ್ಕದಲ್ಲಿ ಚೀನಾದ ಫ್ಯೂಜಿಯಾನ್‌ ಪ್ರಾಂತ್ಯದ ಕ್ವಾನ್‌ಝೂ ನಗರದ ಜಿಂಜಿಯಾಂಗ್‌ ಏರ್‌ಪೋರ್ಟ್‌ ಪ್ರಥಮ ಸ್ಥಾನ(ಶೇ. 58.6)ದಲ್ಲಿದೆ. ಕೆಐಎಎಲ್‌ - ಶೇ. 35.8, ಜೈಪುರ - ಶೇ. 32.5, ಲಕ್ನೋ - ಶೇ. 31.4, ಹೈದರಾಬಾದ್‌ - ಶೇ. 23.2 ಕ್ರಮವಾಗಿ ಎಂಟು, ಹತ್ತು, ಹನ್ನೊಂದು ಹಾಗೂ ಇಪ್ಪತ್ತನೇ ಸ್ಥಾನದಲ್ಲಿವೆ.

ಮಳೆಗೆ ಹೆದ್ದಾರಿಗಳು ಬಂದ್: ಬೆಂಗಳೂರು,ಮಂಗಳೂರು ವಿಮಾನ ದರ ದುಪ್ಪಟ್ಟು!ಮಳೆಗೆ ಹೆದ್ದಾರಿಗಳು ಬಂದ್: ಬೆಂಗಳೂರು,ಮಂಗಳೂರು ವಿಮಾನ ದರ ದುಪ್ಪಟ್ಟು!

25 ಲಕ್ಷಕ್ಕಿಂತ ಅಧಿಕ ಪ್ರಯಾಣಿಕರು ಸಂಚರಿಸಿರುವ ಇಪ್ಪತ್ತು ಏರ್‌ಪೋರ್ಟ್‌ಗಳ ಪಟ್ಟಿಯಲ್ಲಿ ಚೀನಾ ಹಾಗೂ ಭಾರತದ ನಗರಗಳು ಸ್ಥಾನ ಪಡೆದಿವೆ. ಭಾರತದ ಮಟ್ಟಿಗೆ ಬೆಂಗಳೂರು ಮೊದಲ ಸ್ಥಾನದಲ್ಲಿದ್ದು, ದೇಶದ ರಾಜಧಾನಿ ದಿಲ್ಲಿಯನ್ನು ಹಿಂದಿಕ್ಕಿದೆ. ಇದು ಆರ್ಥಿಕ ಬೆಳವಣಿಗೆ ಪೂರಕವಾಗಲಿದೆ ಎಂದು ಪರಿಣಿತರು ವಿಶ್ಲೇಷಿಸಿದ್ದಾರೆ.

English summary
Kempegowda International Airport has become second fastest growing airport in the world after Haneda airport of Tokyo in Japan, Route Online survey has revealed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X