ಕೆಐಎಎಲ್ ನಲ್ಲಿ ಶೀಘ್ರ ಪ್ರತ್ಯೇಕ ಕಾರ್ಗೋ ಟರ್ಮಿನಲ್

Posted By: Nayana
Subscribe to Oneindia Kannada

ಬೆಂಗಳೂರು, ನವೆಂಬರ್ 25 : ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೂರ್ವ ಭಾಗದಲ್ಲಿ ಸರಕು ಸಾಗಾಣಿಕೆ ವಹಿವಾಟು ಮುಕ್ತ ವಲಯವನ್ನು ವಿಶೇಷ ಕೈಗಾರಿಕಾ ವಲಯದಡಿ ಸ್ಥಾಪಿಸಲು ಯೋಜನೆ ರೂಪಿಸಲಾಗುತ್ತಿದೆ. ಇದರಿಂದ ಬಿಐಎಎಲ್ ನ ಸರಕು ಸಾಗಾಣಿಕೆ ಸಾಮರ್ಥ್ಯ ವೃದ್ಧಿಗೊಳ್ಳಲಿದೆ.

ಬಿಎಂಟಿಸಿ ಬಸ್ಸಿನಲ್ಲಿಯೇ ಬೋರ್ಡಿಂಗ್ ಪಾಸ್ ಪಡೆಯಿರಿ

ವಿಮಾನದ ಪ್ರಯಾಣಿಕರಿಗೆ ಸೇವೆ ಹೆಚ್ಚಿಸುವ ಸಂಬಂಧ ಈಗಾಗಲೇ ಎರಡನೇ ಟರ್ಮಿನಲ್ ಹಾಗೂ ಎರಡನೇ ರನ್ ವೇ ನಿರ್ಮಾಣ ಆರಂಭಗೊಂಡಿದ್ದು, ಕೆಲವೇ ವರ್ಷಗಳಲ್ಲಿ ಎರಡೂ ಕಾರ್ಯಾಚರಣೆ ಆರಂಭಗೊಳ್ಳಲಿದೆ. ಇದೇ ವೇಳೆ ಸರಕು ಸಾಗಾಟಕ್ಕೆ ಪ್ರತ್ಯೇಕ ಗೇಟ್ ವೇ ರೂಪುಗೊಳ್ಳಲಿದ್ದು, ಇದರಿಂದ ಕಾರ್ಗೊ ವಹಿವಾಟು ಮತ್ತಷ್ಟು ವೃದ್ಧಿಗೊಳ್ಳಲಿದೆ.

KIAL will have A Free-Trade Zone soon

2008ರಿಂದ ಈವರೆಗೆ ಶೇ.142ರಷ್ಟು ಕಾರ್ಗೊ ವಹಿವಾಟು ವೃದ್ಧಿಯಾಗಿದ್ದು, ಸದ್ಯ 3,50,000 ಮೆಟ್ರಿಕ್ ಟನ್ ಸಾಮರ್ಥ್ಯದ ಸರಕು ಸಾಗಾಟ ಮಾಡಬಹುದಾದ ಟರ್ಮಿನಲ್ ಹೊಂದಿದೆ. ಕಳೆದ ಮಾರ್ಚ್ ಅಂತ್ಯಕ್ಕೆ ವಾರ್ಷಿಕ 7,700 ಕೋಟಿ ರೂ.ಗಳ ಆದಾಯವನ್ನು ಅಬಕಾರಿ ತೆರಿಗೆ ರೂಪದಲ್ಲಿ ಸಂಗ್ರಹಿಸಿದ್ದು, 81, 849 ಕೋಟಿ ರೂ. ಮೌಲ್ಯದ ಸರಕು ರವಾನಿಸಿದೆ.

ಕೆಎಸ್ಆರ್‌ಟಿಸಿ ಫ್ಲೈ ಬಸ್ ಸೇವೆ ವಿಸ್ತರಣೆ, 15 ಹೊಸ ಬಸ್ ಖರೀದಿ

ಕಾರ್ಗೊ ವಹಿವಾಟಿನಿಂದ 12,50,000ಕೋಟಿ ರೂ.ಗಳ ವಹಿವಾಟು ನಡೆಯುತ್ತಿದ್ದು, ಇದು ಕರ್ನಾಟಕದ ಒಟ್ಟು ಜಿಡಿಪಿಯ ಶೇ.೧೧ರಷ್ಟು ಆಗಿದೆ ಎಂದು ಬಿಐಎಎಲ್ ವಹಿವಾಟು ಮತ್ತು ಮಾರುಕಟ್ಟೆ ಅಭಿವೃದ್ಧಿ ವಿಭಾಗದ ಉಪಾಧ್ಯಕ್ಷ ರಾಜ್ ಅಂದ್ರಾಡೆ ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A Free-Trade Zone at the Kempegowda International Airport which will have warehousing, storage and distribution facilities for trade, transhipment, and re-export operations has been proposed.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ