ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಐಎಎಲ್: ಎರಡನೇ ಟರ್ಮಿನಲ್ ವಿಶಾಲ ಸ್ಥಳಾವಕಾಶ

|
Google Oneindia Kannada News

ಬೆಂಗಳೂರು, ಜನವರಿ 16: ನಗರವು ಉದ್ಯಾನಗಳಿಗೆ ಹೆಸರುವಾಸಿಯಾಗಿರುವುದರಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ನಿರ್ಮಾಣವಾಗುತ್ತಿರುವ ಎರಡನೇ ಟರ್ಮಿನಲ್ ಹಸಿರಿನಿಂದ ಕಂಗೊಳಿಸುವಂತೆ ನಿರ್ಮಿಸಲಾಗುತ್ತಿದೆ.

ಮೊದಲ ಟರ್ಮಿನಲ್ ಕಾಮಗಾರಿ ಹಂತದಲ್ಲಿ 2.54 ಲಕ್ಷ ಚದರ ಮೀ. ನಿರ್ಮಾಣ ಪ್ರದೇಶವನ್ನು ಹೊಂದಿರುವ ಕಟ್ಟಡ ಹಾಗೂ ಎರಡನೇ ಹಂತದಲ್ಲಿ4.41 ಲಕ್ಷ ಚದರ ಮೀ. ನಿಮಾ್ಣ ಪ್ರದೇಶವಿರುವ ಕಟ್ಟಡ ಹಾಗೂ ಎರಡನೇ ಹಂತದಲ್ಲಿ 4.5 ಕೋಟಿ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಲಿದೆ.

ಕೆಐಎಎಲ್ ನಲ್ಲಿ ಶೀಘ್ರ ಪ್ರತ್ಯೇಕ ಕಾರ್ಗೋ ಟರ್ಮಿನಲ್ಕೆಐಎಎಲ್ ನಲ್ಲಿ ಶೀಘ್ರ ಪ್ರತ್ಯೇಕ ಕಾರ್ಗೋ ಟರ್ಮಿನಲ್

ಮೊದಲ ಹಂತದಲ್ಲಿ 90 ಕೌಂಟರ್ ಗಳು ಹಾಗೂ ಎರಡನೇ ಹಂತದಲ್ಲಿ 123 ಕೌಂಟರ್ ಗಳು ನಿರ್ಮಾಣವಾಗಲಿದೆ. ಈ ಪ್ರದೇಶದಲ್ಲಿ97 ವಲಸೆ ಕೌಂಟರ್ ಗಳು ಹಾಗೂ ಪ್ರಯಾಣಿಕರು ಸರತಿ ಸಾಲಿನಲ್ಲಿ ನಿಲ್ಲಲು 62 ಲೇನ್ ಗಳು ಬರಲಿವೆ. ಆಗಮನ ಪ್ರದೇಶದಲ್ಲಿ173 ವಲಸೆ ಕೌಂಟ್ ಗಳು ಇರಲಿವೆ. ಈ ಪೈಕಿ 113 ಕೌಂಟರ್ ಗಳು ನಿರ್ಮಾಣವಾಗುವುದು ಎರಡನೇ ಹಂತದಲ್ಲಿ ಪ್ರಯಾಣಿಕರ ಹ್ಯಾಂಡ್ ಬ್ಯಾಗ್ ತಪಾಸಣೆಗಾಗಿ 23ಲೇನ್ ಇರಲಿದೆ.

KIAL terminal-2 will be go Green

ಬ್ಯಾಗ್ ಗಳನ್ನು ಸಾಗಿಸುವ 25 ಬೆಲ್ಟ್ ಗಳನ್ನು ಎರಡು ಹಂತದಲ್ಲಿ ಅಳವಡಿಸಲಾಗುತ್ತದೆ. ವರ್ಷದಲ್ಲಿ 6.5 ಕೋಟಿ ಜನ ಬಳಸುವ ನಿರೀಕ್ಷೆ: ಕೆಐಎಎಲ್ 2017 ರಲ್ಲಿ2.5 ಕೋಟಿ ಪ್ರಯಾಣಿಕರನ್ನು ನಿರ್ವಹಿಸಿರುವ ದಾಖಲೆ ಹೊಂದಿದೆ. ಎರಡನೇ ಟರ್ಮಿನಲ್ ನ ಎರಡೂ ಹಂತಗಳ ಕಾಮಗಾರಿ ಪೂರ್ಣಗೊಂಡ ಬಳಿಕ ವರ್ಷದಲ್ಲಿ ಈ ವಿಮಾನ ನಿಲ್ದಾಣ ಬಳಸುವವರ ಸಂಖ್ಯೆ 6 ಕೋಟಿ ಮೀರುವ ನಿರೀಕ್ಷೆಯಿದೆ.

English summary
At the capacity of 2.50 crore of commuters, second terminal of Kempegowda international Airport will be more greenery environment. The detailed project report has revealed that the second phase of this terminal is planning to include handle of 4.5 crore commuters every year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X