ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಐಎನಲ್ಲಿ ವಿಮಾನ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ

|
Google Oneindia Kannada News

ಬೆಂಗಳೂರು, ಏಪ್ರಿಲ್ 14: ವಿಮಾನ ನೋಡಬೇಕೆಂದಿದ್ದರೆ ಅದರ ಮೂಲಕ ಪ್ರಯಾಣಿಸಬೇಕೆಂದೇನೂ ಇಲ್ಲ. ಪ್ರಯಾಣದ ಟಿಕೆಟ್ ಇಲ್ಲದೆಯೂ ಹತ್ತಿರದಿಂದ ವಿಮಾನ ನೋಡಬಹುದು, ಲ್ಯಾಂಡಿಂಗ್, ಟೇಕ್ ಆಫ್ ಪ್ರಕ್ರಿಯೆಯನ್ನು ವೀಕ್ಷಿಸಬಹುದು.

ಸದ್ಯ ವಿಶೇಷ ಅನುಮತಿ ಪಡೆದರೆ ಈ ಸೌಲಭ್ಯ ಒದಗಿಸಲಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಸಾರ್ವಜನಿಕ ವೀಕ್ಷಣೆಗಾಗಿಯೇ ಪ್ರತ್ಯೇಕ ಸ್ಥಳ ನಿಗದಿ ಪಡಿಸಲು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮುಂದಾಗಿದೆ.

ಹೊಸ ದಾಖಲೆ ನಿರ್ಮಿಸಿದ ಕೆಂಪೇಗೌಡ ವಿಮಾನ ನಿಲ್ದಾಣಹೊಸ ದಾಖಲೆ ನಿರ್ಮಿಸಿದ ಕೆಂಪೇಗೌಡ ವಿಮಾನ ನಿಲ್ದಾಣ

ಕೆಐಎ ಕಾರ್ಯಾರಂಭ ,ಆಡಿದ ಹತ್ತು ವರ್ಷಗಳ ನಂತರ ಇತಹದೊಂದು ಸೌಲಭ್ಯ ಕಲ್ಪಿಸುತ್ತಿದೆ. ಆಸಕ್ತರು ಕಾರ್ಯಾಚರಣೆ ವಿಭಾಗ ಸಂರ್ಕಿಸಿ ವಿಶೇಷ ಅನುಮತಿ ಪಡೆದಲ್ಲಿ ಸೌಲಭ್ಯ ಒದಗಿಸಲಾಗುತ್ತದೆ.

KIAL planning to set up flight watching lounge

ವಿಶೇಷ ಅನುಮತಿ ಪಡೆವರು ಫೋಟೊ ತೆಗೆದುಕೊಳ್ಳಲು, ವಿಡಿಯೋ ಮಾಡಿಕೊಳ್ಳಲು ಅವಕಾಶವಿದೆ. ಎರಡನೇ ರನ್ ವೇ ನಿರ್ಮಾಣ ಕಾರ್ಯ 2019ರ ವೇಳೆಗೆ ಪೂರ್ಣಗೊಳ್ಳಲಿದ್ದು, ಬಳಿಕ ಸಾರ್ವಜನಿಕ ವೀಕ್ಷಣೆಗಾಗಿಯೇ ಪ್ರತ್ಯೇಕ ವ್ಯವಸ್ಥೆ ಮಾಡುವ ಚಿಂತನೆ ನಡೆದಿದೆ ಎಂದು ಕೆಐಎ ಮೂಲಗಳು ತಿಳಿಸಿವೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ

ಈ ಬಗ್ಗೆ ಸಾಮಾಜಿಕ ಜಾಲತಾಣ ಇನ್ ಸ್ಟಾಗ್ರಾಂ ನಲ್ಲಿ ಕಾರ್ಯಾಚರಣೆಗಳ ವಿಭಾಗದ ಮುಖ್ಯ ಅಧಿಕಾರಿ ಜಾವೇದ್ ಮಲೀಕ್ ಕೂಡ ಮಾಹಿತಿ ನೀಡಿದ್ದಾರೆ. ವಿಮಾನಗಳ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ಮಾಡಿಕೊಡಬೇಕು ಎಂಬ ಬೇಡಿಕೆ ಬಹಳ ದಿನಗಳಿಂದ ಇದೆ. ಕೆಐಎನಲ್ಲಿ ವಿಮಾನಗಳ ವೀಕ್ಷಣೆಗೆ ಕೆಲವು ಪ್ರಕ್ರಿಯೆಗಳನ್ನು ಪಾಲಿಸಬೇಕು. ನಮ್ಮ ಇ ಮೇಲ್ ಮೂಲಕ ಸಂರ್ಕಿಸಿದರೆ ಅದಕ್ಕೆ ಸೂಕ್ತ ವ್ಯವಸ್ಥೆ ಮಾಡುತ್ತೇವೆ ಎಂದರು.

ಎಚ್‌ಎಎಲ್ ನಲ್ಲಿ ಇತ್ತು ವ್ಯವಸ್ಥೆ: 2008ಕ್ಕೆ ಮುನ್ನ ಎಚ್‌ಎಎಲ್ ವಿಮಾನ ನಿಲ್ದಾಣ ನಾಗರೀಕ ವಿಮಾನಗಳ ಹಾರಾಟ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಸಾರ್ವಜನಿಕರಿಗೆ ವಿಮಾನ ವೀಕ್ಷಣೆಗೆ ವ್ಯವಸ್ಥೆ ಒದಗಿಸಿತ್ತು. ಸದ್ಯ ಈ ನಿಲ್ದಾಣದಲ್ಲಿ ಕೇವಲ ಸೇನೆ ಹಾಗೂ ವಿಶೇಷ ವಿಮಾನಗಳ ಹಾರಾಟಕ್ಕೆ ಮಾತ್ರ ಬಳಕೆಯಾಗುತ್ತಿದೆ.

English summary
Two watch landing and taking off flight in Bengaluru International Airport. KIAL planning to set up eatching lounge at phase of terminal. Presently general public can watch with special permission from authorities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X