ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಿಕ್ಕರ್ ಲೈಸನ್ಸ್ ವಿಚಾರದಲ್ಲಿ ಕೆಐಎಡಿಬಿ ಮೂಗು ತೂರಿಸೋ ಹಾಗಿಲ್ಲ!

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 12: ಮದ್ಯದಂಗಡಿ ಪರವಾನಗಿಯ ನವೀಕರಣ ವಿಚಾರಗಳಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯು (ಕೆಐಎಡಿಬಿ) ಮೂಗು ತೂರಿಸುವ ಹಾಗಿಲ್ಲ ಎಂದು ರಾಜ್ಯ ಹೈಕೋರ್ಟ್ ಸ್ಪಷ್ಟಪಡಿಸಿದೆ.

2015ರ ಜನವರಿ 31ರಂದು ರಾಜ್ಯ ಅಬಕಾರಿ ಕಮೀಷನರ್ ಅವರಿಗೆ ಪತ್ರ ಬರೆದಿದ್ದ ಕೆಐಎಡಿಬಿ, ಮೈಸೂರಿನಲ್ಲಿರುವ ಕೈಗಾರಿಕಾ ಪ್ರದೇಶಗಳಲ್ಲಿ ನಡೆಸಲಾಗುವ ಬಾರ್ ಹಾಗೂ ರೆಸ್ಟೋರೆಂಟ್ ಗಳ ಪರವಾನಗಿಯನ್ನು ನವೀಕರಿಸದಂತೆ ಪತ್ರ ಬರೆದಿತ್ತು.

85 ವರ್ಷದ ವೃದ್ಧೆ ಕೆಐಎಡಿಬಿಗೆ ಕೋಟಿಗಟ್ಟಲೆ ನಾಮ ಹಾಕಿದ ಕುತೂಹಲದ ಕತೆ!85 ವರ್ಷದ ವೃದ್ಧೆ ಕೆಐಎಡಿಬಿಗೆ ಕೋಟಿಗಟ್ಟಲೆ ನಾಮ ಹಾಕಿದ ಕುತೂಹಲದ ಕತೆ!

KIADB HAS NO SAY IN LIQUOR LICENCE

ಇದರ ಪರಿಣಾಮವಾಗಿ, 2016-17ರ ಅವಧಿಗೆ ಈ ಹೋಟೆಲ್ ಗಳ ಪರವಾನಗಿ ನವೀಕರಣಕ್ಕೆ ಅಬಕಾರಿ ಇಲಾಖೆ ತಡೆ ಹಾಕಲಾಗಿತ್ತು. ಇದರ ವಿರುದ್ಧ ಆ ಬಾರ್ ಮಾಲೀಕರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಆಗಿನಿಂದಲೂ ಈ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಟ್ಟಿತ್ತು.

ಸೋಮವಾರ, ಈ ಬಗ್ಗೆ ಸ್ಪಷ್ಟ ಆದೇಶ ನೀಡಿರುವ ಹೈಕೋರ್ಟ್, ಮದ್ಯದಂಗದಿ ಪರವಾನಗಿ ವಿಚಾರವಾಗಿ ಕೆಐಎಡಿಬಿಗೆ ಮೂಗು ತೂರಿಸುವ ಅಗತ್ಯತೆಯಿಲ್ಲ ಎಂದು ಹೇಳಿದೆ. ಅಲ್ಲದೆ, ಕೆಐಎಡಿಬಿಯಿಂದ ತೊಂದರೆಗೊಳಗಾಗಿರುವ 10 ಮದ್ಯದಂಗಡಿಗಳಿಕೆ ತಲಾ 5 ಸಾವಿರ ರು. ಮೊತ್ತವನ್ನು ದಂಡದ ರೂಪವಾಗಿ ನೀಡಬೇಕೆಂದು ಕೆಐಎಡಿಬಿಗೆ ಆದೇಶಿಸಿದೆ.

English summary
The High Court has ruled that the Karnataka Industrial Area Development Board (KIADB) has no say in the grant or renewal of liquor licences even in bars that are attached to hotels situated in industrial areas.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X