ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಐಎನಲ್ಲಿ ರದ್ದಾಗಲಿದೆ ಮಹಿಳೆಯರು, ಪುರುಷರ ಪ್ರತ್ಯೇಕ ಸಾಲು

|
Google Oneindia Kannada News

ಬೆಂಗಳೂರು, ಅಕ್ಟೋಬರ್ 9: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲಗೇಜ್ ಹಾಗೂ ಭದ್ರತಾ ತಪಾಸಣೆ ವೇಳೆ ಉದ್ದದ ಸಾಲುಗಳು ಕಂಡುಬರುತ್ತಿತ್ತು.

ಕೆಂಪೇಗೌಡ ಏರ್‌ಪೋರ್ಟ್ ಮಾರ್ಗ ಮಹಿಳೆಯರಿಗೆ ಇನ್ನು ಸೇಫ್ ಕೆಂಪೇಗೌಡ ಏರ್‌ಪೋರ್ಟ್ ಮಾರ್ಗ ಮಹಿಳೆಯರಿಗೆ ಇನ್ನು ಸೇಫ್

ಅದನ್ನು ತಪ್ಪಿಸಲು ಹಾಗೂ ಸಮಯವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲು ಸ್ಮಾರ್ಟ್ ಸೆಕ್ಯುರಿಟಿ ಲೇನ್ ಮತ್ತು ಆಟೋಮೆಟೆಡ್ ಟ್ರೇ ರಿಟ್ರೈವಲ್ ಸಿಸ್ಟಮ್ ಜಾರಿಗೆ ತರಲಾಗುತ್ತಿದೆ. ತಪಾಸಣೆ ಸಂದರ್ಭದಲ್ಲಿ ಮಹಿಳೆ ಮತ್ತು ಪುರುಷರನ್ನು ಪ್ರತ್ಯೇಕ ಸ್ಥಳದಲ್ಲಿ ತಪಾಸಣೆ ಮಾಡುವ ಬದಲು ಒಂದೇ ಸಾಲಿನಲ್ಲಿರುವಾಗಲೇ ತಪಾಸಣೆ ನಡೆಸಲು ಸಾಧ್ಯವಾಗಲಿದೆ.

ಕೆಂಪೇಗೌಡ ಏರ್‌ಪೋರ್ಟ್ ನಲ್ಲಿ ಲಗೇಜ್ ತಪಾಸಣೆಗೆ ಹೊಸ ತಂತ್ರಜ್ಞಾನ ಕೆಂಪೇಗೌಡ ಏರ್‌ಪೋರ್ಟ್ ನಲ್ಲಿ ಲಗೇಜ್ ತಪಾಸಣೆಗೆ ಹೊಸ ತಂತ್ರಜ್ಞಾನ

ಕುಟುಂಬ ಸದಸ್ಯರು ಒಂದೇ ಕಡೆ ಇರಬಹುದು ಮತ್ತು ಲಗೇಜ್ ಗಳ ತಪಾಸಣೆ ಶೀಘ್ರವಾಗಲಿದೆ. ಈ ಕುರಿತು ಇಂಗ್ಲೆಂಟ್ ಮೂಲದ ಎಲ್ 3 ಮೆಕ್ಡೊನಾಲ್ಡ್ ಹೆಮ್ಫ್ರೈ ಇಂಡಿಯಾ ಜತೆಗೆ ಕೆಐಎ ಒಪ್ಪಂದ ಮಾಡಿಕೊಂಡಿದೆ. ಈ ವ್ಯವಸ್ಥೆಯು ಸೆಕ್ಯುರಿಟಿ ಚೆಕ್ ಪಾಯಿಂಟ್ ಜಾಗದಲ್ಲಿ ವ್ಯರ್ಥವಾಗುವ ಸಮಯವನ್ನು ಕಡಿಮೆ ಮಾಡಲಿದೆ.

KIA to screen men and woman together by December

ಸೆಕ್ಯುರಿಟಿ ತಪಾಸಣೆಗಾಗಿ ಪುರುಷರು ಹಾಗೂ ಮಹಿಳೆಯರ ಸಾಲುಗಳ ನಡುವ ಸಾಕಷ್ಟು ಅಂತರವಿರುತ್ತದೆ. ಕೆಲವು ಸಾಲಿನಲ್ಲಿ ತಪಾಸಣೆ ಬೇಗ ಮುಕ್ತಾಯಗೊಂಡರೆ ನತ್ತೆ ಕೆಲವೆಡೆ ಸಮಯ ಹೆಚ್ಚು ತೆಗೆದುಕೊಳ್ಳುತ್ತದೆ, ಆಗ ಒಬ್ಬರಿಗಾಗಿ ಮತ್ತೊಬ್ಬರು ಕಾಯುವ ಸ್ಥಿತಿ ನಿರ್ಮಾಣವಾಗುತ್ತದೆ.

ಕೆಂಪೇಗೌಡ ಏರ್‌ಪೋರ್ಟ್: ಬೋರ್ಡಿಂಗ್ ಪಾಸ್‌ ಮತ್ತಷ್ಟು ಸುಲಭ ಕೆಂಪೇಗೌಡ ಏರ್‌ಪೋರ್ಟ್: ಬೋರ್ಡಿಂಗ್ ಪಾಸ್‌ ಮತ್ತಷ್ಟು ಸುಲಭ

2018ರ ವರ್ಷಾಂತ್ಯಕ್ಕೆ ಹೊಸ ಸ್ವಯಂಚಾಲಿತ ವ್ಯವಸ್ಥೆಯನ್ನು ಅಳವಡಿಸುವ ಕಾರ್ಯ ಆರಂಭವಾಗಲಿದ್ದು, ಹಂತ-ಹಂತವಾಗಿ 2019ರ ಮಾರ್ಚ್ ವೇಳೆಗೆ ಸಂಪೂರ್ಣವಾಗಿ ಸ್ವಯಂಚಾಲಿತವಾಗಲಿದೆ. ಈ ವ್ಯವಸ್ಥೆಯು ಅಮೆರಿಕ, ಯುರೋಪ್ ರಾಷ್ಟ್ರಗಳ ವಿಮಾನ ನಿಲ್ದಾಣದಲ್ಲಿ ಅಳವಡಿಸಲಾಗಿದೆ.

English summary
Come March, security queues at the Kempegowda International Airport (KIA) won’t be segregated as per gender. Bangalore International Airport Limited (BIAL) will introduce smart security lanes where men and women passengers will no longer need to be screened at different locations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X