ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಂಪೇಗೌಡ ಏರ್‌ಪೋರ್ಟ್: ಟಿ-1 ದೇಶೀಯ ವಿಮಾನಗಳಿಗೆ ನಿಗದಿ ಸಾಧ್ಯತೆ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 10: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈಗಿರುವ ಟರ್ಮಿನಲ್ 1ನ್ನು ದೇಶೀಯ ವಿಮಾನಗಳಿಗೆ ಮಾತ್ರ ಮೀಸಲಿಡುವ ಸಾಧ್ಯತೆ ಇದೆ.

ಟರ್ಮಿನಲ್ 2 ನಿರ್ಮಾಣವಾದ ಬಳಿಕ ಇದು ಜಾರಿಗೆ ಬರಲಿದೆ. ಈ ಹೊಸ ವ್ಯವಸ್ಥೆಯು 2021ರ ವೇಳೆ ಜಾರಿಗೆ ಬರುವ ನಿರೀಕ್ಷೆಗಳಿವೆ. ಟಿ 1 ಅನ್ನು ದೇಶೀಯ ವಿಮಾನಗಳಿಗೆ ಮೀಸಲಿಡುವುದು ಮತ್ತು ಟಿ 2 ಅನ್ನು ಸಮಗ್ರವಾಗಿ ಬಳಕೆ ಮಾಡಿಕೊಳ್ಳುವುದರಿಂದ ಕಾರ್ಯಾಚರಣೆ ವೆಚ್ಚ ಕಡಿಮೆಯಾಗಲಿದೆ.

ಕೆಐಎನಲ್ಲಿ ರದ್ದಾಗಲಿದೆ ಮಹಿಳೆಯರು, ಪುರುಷರ ಪ್ರತ್ಯೇಕ ಸಾಲು ಕೆಐಎನಲ್ಲಿ ರದ್ದಾಗಲಿದೆ ಮಹಿಳೆಯರು, ಪುರುಷರ ಪ್ರತ್ಯೇಕ ಸಾಲು

ಅಲ್ಲದೇ ಕಾರ್ಯಕ್ಷಮತೆಯು ಸುಧಾರಿಸಲಿದೆ. ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಒಂದೇ ಟರ್ಮಿನಲ್ ನಲ್ಲಿ ಅವಕಾಶ ಕಲ್ಪಿಸುವುದರಿಂದ ಅಗತ್ಯವಾದ ಗರಿಷ್ಠ ಸೌಲಭ್ಯಗಳನ್ನು ಒದಗಿಸಲು ಸಾಧ್ಯವಾಗುತ್ತದೆ. ಸಂಚಾರ ಒತ್ತಡವನ್ನು ಎರಡೂ ಟರ್ಮಿನಲ್ ಗಳಲ್ಲಿ ವಿಭಾಗಿಸಲಾಗುತ್ತದೆ.

ವಿಮಾನಗಳ ಟ್ರಾಫಿಕ್ ನಿರ್ವಹಣೆಗೆ ಉಪಾಯ

ವಿಮಾನಗಳ ಟ್ರಾಫಿಕ್ ನಿರ್ವಹಣೆಗೆ ಉಪಾಯ

ಹೊಸ ವ್ಯವಸ್ಥೆಯು 2021ರ ವೇಳೆ ಜಾರಿಗೆ ಬರಲಿದೆ. ಟರ್ಮಿನಲ್ 2 ಮಾಸ್ಟರ್ ಪ್ಲಾನ್ ನಲ್ಲಿಯೇ ಟ್ರಾಫಿಕ್ ಹಂಚಿಕೆಯ ಅಂಶವನ್ನು ನಮೂದಿಸಲಾಗಿದೆ. ನವದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ವಿಸ್ತರಿಸಿದ ಮಾದರಿಯನ್ನೇ ಬೆಂಗಳೂರಿಗೂ ಅನ್ವಯಿಸಲಾಗುತ್ತದೆ.

ಬೆಂಗಳೂರಿನಿಂದ ಹೊಸ ಮಾರ್ಗದಲ್ಲಿ ಹಲವು ವಿಮಾನಗಳ ಸಂಚಾರ ಬೆಂಗಳೂರಿನಿಂದ ಹೊಸ ಮಾರ್ಗದಲ್ಲಿ ಹಲವು ವಿಮಾನಗಳ ಸಂಚಾರ

 ಟರ್ಮಿನಲ್ 2ನಲ್ಲಿ ಪ್ರಯಾಣಿಕರ ಸಾಮರ್ಥ್ಯ

ಟರ್ಮಿನಲ್ 2ನಲ್ಲಿ ಪ್ರಯಾಣಿಕರ ಸಾಮರ್ಥ್ಯ

ಟಿ 2 ನಿರ್ಮಾಣವು ಎರಡು ಹಂತಗಳಲ್ಲಿ ಆಗುತ್ತದೆ. ವರ್ಷಕ್ಕೆ 5.5ಕೋಟಿ ಪ್ರಯಾಣಿಕರನ್ನು ನಿಭಾಯಿಸುವ ಸಾಮರ್ಥ್ಯ ಇದು ಹೊಂದಲಿದೆ. ಒಂದು ವಾರದ ಹಿಂದೆಯಷ್ಟೇ ಎಲ್ ಅಂಡ್ ಟಿ ಕಂಪನಿ 3036 ಕೋಟಿ ರೂ ವೆಚ್ಚದ ಈ ಯೋಜನೆಯ ಬಿಡ್ ಅನ್ನು ತನ್ನದಾಗಿಸಿಕೊಂಡಿದೆ.

ಕೆಂಪೇಗೌಡ ಏರ್‌ಪೋರ್ಟ್ ನಲ್ಲಿ ಲಗೇಜ್ ತಪಾಸಣೆಗೆ ಹೊಸ ತಂತ್ರಜ್ಞಾನ ಕೆಂಪೇಗೌಡ ಏರ್‌ಪೋರ್ಟ್ ನಲ್ಲಿ ಲಗೇಜ್ ತಪಾಸಣೆಗೆ ಹೊಸ ತಂತ್ರಜ್ಞಾನ

ಗೋಲ್ಡನ್ ಟರ್ಮಿನಲ್ ಥೀಮ್

ಗೋಲ್ಡನ್ ಟರ್ಮಿನಲ್ ಥೀಮ್

ಟರ್ಮಿನಲ್ 2ರ ಥೀಮ್ ಅನ್ನು ಟರ್ಮಿನಲ್ ಇನ್ ಗೋಲ್ಡನ್ ಎಂದು ಕರೆಯಲಾಗಿದೆ. ಇದರ ನಿರ್ಮಾಣದಲ್ಲಿ ಪರಿಸರಸ್ನೇಹಿ ವ್ಯವಸ್ಥೆಗೆ ಒತ್ತು ನೀಡಲಾಗಿದೆ. ಉದ್ಯಾನದ ಮಾದರಿಯ ಒಳಾಂಗಣ ವಿನ್ಯಾಸವನ್ನು ಇದು ಹೊಂದಲಿದೆ.

ಕೆಂಪೇಗೌಡ ಏರ್‌ಪೋರ್ಟ್: ಬೋರ್ಡಿಂಗ್ ಪಾಸ್‌ ಮತ್ತಷ್ಟು ಸುಲಭ ಕೆಂಪೇಗೌಡ ಏರ್‌ಪೋರ್ಟ್: ಬೋರ್ಡಿಂಗ್ ಪಾಸ್‌ ಮತ್ತಷ್ಟು ಸುಲಭ

ವಾರ್ಷಿಕ 1.15 ಕೋಟಿ ಅಂತಾರಾಷ್ಟ್ರೀಯ ಪ್ರಯಾಣಿಕರು

ವಾರ್ಷಿಕ 1.15 ಕೋಟಿ ಅಂತಾರಾಷ್ಟ್ರೀಯ ಪ್ರಯಾಣಿಕರು

ವಾರ್ಷಿಕವಾಗಿ 1.15 ಕೋಟಿ ಅಂತಾರಾಷ್ಟ್ರೀಯ ಪ್ರಯಾಣಿಕರ ಗುರಿಯನ್ನು ಬಿಐಎಎಲ್ ಹೊಂದಿದ್ದು, ಅದನ್ನು ನಿಭಾಯಿಸಲು ಟರ್ಮಿನಲ್ 1ರಿಂದ ಸಾಧ್ಯವಾಗುವುದಿಲ್ಲ. ಟರ್ಮಿನಲ್ ಗಳನ್ನು ವಿಭಾಗಿಸದೇ ಒಟ್ಟಿಗೆ ಬಳಸಿಕೊಳ್ಳುವುದರಿಂದ ಸೇವೆಗಳನ್ನು ಸುಧಾರಿಸಿದಂತೆ ಆಗುವುದಿಲ್ಲ, ಟರ್ಮಿಲ್ ಗಳ ಸಂಯೋಜನೆಯಿಂದ ದೇಶೀಯ ಮತ್ತು ವಿದೇಶಿ ಪ್ರಯಾಣಿಕರಿಗೆ ಗೊಂದಲೇ ಹೆಚ್ಚು ಎನ್ನುವ ಅಂಶವನ್ನು ಟರ್ಮಿನಲ್ ಮಾಸ್ಟರ್ ಪ್ಲಾನ್ ನಲ್ಲಿ ನಮೂದಿಸಲಾಗಿದೆ.

ಬೆಂಗಳೂರಲ್ಲಿ ಗೋ ಏರ್ ವಿಮಾನ ತುರ್ತು ಲ್ಯಾಂಡಿಂಗ್ ಬೆಂಗಳೂರಲ್ಲಿ ಗೋ ಏರ್ ವಿಮಾನ ತುರ್ತು ಲ್ಯಾಂಡಿಂಗ್

English summary
Terminus one of Kempegowda international airport will be dedicated to domestic flights soon after terminus two will be completed by 2021 March.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X