ಹೊಸ ದಾಖಲೆ ನಿರ್ಮಿಸಿದ ಕೆಂಪೇಗೌಡ ವಿಮಾನ ನಿಲ್ದಾಣ

Posted By: Nayana
Subscribe to Oneindia Kannada

   ಹೊಸ ದಾಖಲೆಯನ್ನ ನಿರ್ಮಿಸಿದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ( ಕೆ ಎ ಐ ) | Oneindia Kannada

   ಬೆಂಗಳೂರು, ಏಪ್ರಿಲ್ 11: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು 2017-18ನೇ ಸಾಲಿನಲ್ಲಿ 2.69ಕೋಟಿ ಪ್ರಯಾಣಿಕರು ಬಳಸಿದ್ದು, ವಾರ್ಷಿಕ ಶೇ.17.6ರಷ್ಟು ಪ್ರಗತಿ ಸಾಧಿಸುವ ಮೂಲಕ ದಾಖಲೆ ನಿರ್ಮಿಸಿದೆ.

   ವಿಮಾನಗಳ ಹಾರಾಟದಲ್ಲಿಯೂ ಶೇ.10.8ರಷ್ಟು ಬೆಳವಣಿಗೆ ಕಂಡಿದ್ದು, ಒಟ್ಟು 1,97,330 ವಿಮಾನಗಳು ಹಾರಾಟ ನಡೆಸಿವೆ. 3,48,403 ಮೆಟ್ರಿಕ್ ಟನ್ ಸರಕು ಸಾಗಾಣಿಕೆ ಮೂಲಕ ಕಾರ್ಗೋ ವಿಭಾಗವು ಶೇ.9.1ರಷ್ಟು ಬೆಳವಣಿಗೆ ಸಾಧಿಸಿದೆ.

   ಏರ್‌ಪೋರ್ಟ್ ರಸ್ತೆ:ಉದ್ದೇಶಿತ ಟೋಲ್ ಸಂಗ್ರಹ ತಾತ್ಕಾಲಿಕವಾಗಿ ಮುಂದಕ್ಕೆ

   ವಿಮಾನ ನಿಲ್ದಾಣವು ದೇಶಿಯ 46 ಸ್ಥಳಗಳು ಹಾಗೂ ಅಂತಾರಾಷ್ಟ್ರೀಯ ಮಾರ್ಗದಲ್ಲಿ 21 ಜಾಗಕ್ಕೆ ಸೇರಿ ಒಟ್ಟು 67 ಸ್ಥಳಗಳಿಗೆ 44 ವಿಮಾನಯಾನ ಸಂಸ್ಥೆಗಳ ಮೂಲಕ ವಿಮಾನ ಸಂಪರ್ಕ ಹೊಂದಿದೆ.

   KIA set new record by serving 2.76 crore passengers

   ಫೆ.19ರಂದು ಒಂದೇ ದಿನ 91,339 ಪ್ರಯಾಣಿಕರು ಹಾರಾಟ ನಡೆಸಿದ್ದು ಹೊಸ ಸಾಖಲೆ, ಅಲ್ಲದೇ, ಮಾ.17ರಂದು ಒಂದೇ ದಿ ಟೇಕಾಫ್ ಮತ್ತು ಲ್ಯಾಂಡಿಂಗ್ ಸೇರಿ 664 ವಿಮಾನಗಳು ಕೆಐಎನಿಂದ ಹಾರಾಟ ನಡೆಸಿದೆ. 2008ರಲ್ಲಿ ಕಾರ್ಯಾಚರಣೆ ಆರಂಭದ ನಂತರ ಇದುವರೆಗೂ 150 ದಶಲಕ್ಷಕ್ಕೂ ಅಧಿಕ ಪ್ರಯಾಣಿಕರು ಕೆಐಎ ಬಳಕೆ ಮಾಡಿದ್ದಾರೆ. ಮಾರ್ಚ್ ತಿಂಗಳೊಂದರಲ್ಲೇ 25,49,523 ಪ್ರಯಾಣಿಕರು ವಿಮಾನ ನಿಲ್ದಾಣವನ್ನು ಬಳಕೆ ಮಾಡಿದ್ದೂ ಈ ವರ್ಷದ ದಾಖಲೆಯಾಗಿದೆ.

   ವಿಮಾನ ಟಿಕೆಟ್ ಜತೆಗೆ ಬಸ್, ಆಟೋಗಳನ್ನೂ ಬುಕ್ ಮಾಡಬಹುದು!

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Kempegowda international airport of Bangalore has served 2.76 crore passengers during financial year of 2017-18 and set a new record. It was around 17 percent growth in service.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ