ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಜೆಪಿಗೆ ರಾಜಕೀಯ ಸಂಸ್ಕೃತಿ ಪಾಠ ಮಾಡಿದ ಖರ್ಗೆ

|
Google Oneindia Kannada News

Recommended Video

ಮಲ್ಲಿಕಾರ್ಜುನ ಖರ್ಗೆಯಿಂದ ಬಿಜೆಪಿಗೆ ರಾಜಕೀಯ ಸಂಸ್ಕೃತಿಯ ಪಾಠ | Oneindia Kannada

ಬೆಂಗಳೂರು, ಸೆಪ್ಟೆಂಬರ್ 22: ಬಿಜೆಪಿಯವರು ಕೇಂದ್ರದಲ್ಲಿ ತಮ್ಮ ಅಧಿಕಾರವಿದೆ ಎಂದು ರಾಜ್ಯದ ಜನರನ್ನು ಹೆದರಿಸುತ್ತಿದ್ದಾರೆ, ಇದು ಬಿಜೆಪಿಯ ಡಿಕ್ಟೇಟರ್ ಶಿಪ್ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಲೋಕಪಾಲ್ ಆಯ್ಕೆ ಸಮಿತಿಗೆ ಖರ್ಗೆ ಗೈರು, ಮೋದಿಗೆ ಪತ್ರ ಲೋಕಪಾಲ್ ಆಯ್ಕೆ ಸಮಿತಿಗೆ ಖರ್ಗೆ ಗೈರು, ಮೋದಿಗೆ ಪತ್ರ

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು 47 ವರ್ಷಗಳಿಂದ ನೋಡುತ್ತಲೇ ಬಂದಿದ್ದೇನೆ, ಎಲ್ಲರಿಗೂ ಒಂದೊಂದು ಸ್ಥಾನವನ್ನು ಪಕ್ಷ ನೀಡಲಿದೆ, ಯಾರಿಗೆ ಯಾವ ಸ್ಥಾನ ನೀಡಬೇಕು, ಕಾರ್ಯಕರ್ತರಿಗೆ ಯಾವ ಸ್ಥಾನಮಾನ ನೀಡಬೇಕು ಎನ್ನುವುದು ಸರ್ಕಾರಕ್ಕೆ ಗೊತ್ತಿದೆ.

ರಾಮಲಿಂಗಾರೆಡ್ಡಿಗೆ ಸಚಿವ ಸ್ಥಾನ: ಮಲ್ಲಿಕಾರ್ಜುನ ಖರ್ಗೆ ಬ್ಯಾಟಿಂಗ್ ರಾಮಲಿಂಗಾರೆಡ್ಡಿಗೆ ಸಚಿವ ಸ್ಥಾನ: ಮಲ್ಲಿಕಾರ್ಜುನ ಖರ್ಗೆ ಬ್ಯಾಟಿಂಗ್

ಆದರೆ ಪಕ್ಷದಲ್ಲಿ ಒಡಕು ಮೂಡಿಸುವುದು ಭಿನ್ನಾಭಿಪ್ರಾಯ ಉಂಟುಮಾಡುವುದು ಬಿಜೆಪಿಯ ಕೆಲಸ ಬಿಜೆಪಿಯು ರಾಜಕೀಯ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳುವ ಅಗತ್ಯವಿದೆ ಎಂದು ಅಭಿಪ್ರಾಯ ಪಟ್ಟರು. ಹಿಂದೆ ಕೂಡ ಗೋವಾದಲ್ಲಿಟ್ಟು ಸರ್ಕಾರ ರಚಿಸಿದ್ದರು. ಇದೀಗ ಮೆಜಾರಿಟಿ ಸರ್ಕಾರ ಅಧಿಕಾರದಲ್ಲಿದೆ ಅದನ್ನು ಅಸ್ಥಿರಗೊಳಿಸಬೇಕು ಎಂದು ಪ್ರಯತ್ನ ಮಾಡುತ್ತಿದ್ದಾರೆ ಎಂದು ದೂರಿದರು.

Kharge opines Divide and rule is BJPs culture

ಸಿಎಂ ದಂಗೆ ಹೇಳಿಕೆಗೆ ಈಗಾಗಲೇ ಕ್ಲಾರಿಫಿಕೇಷನ್ ನೀಡಿದ್ದಾರೆ, ನಾನು ಆ ಭಾವನೆಯಲ್ಲಿ ಹೇಳಿಲ್ಲ ಎಂದು ಸಿಎಂ ಅವರೇ ಹೇಳಿದ್ದಾರೆ ಆದರೂ ರಾಜ್ಯಪಾಲರಿಗೆ ದೂರು ಕೊಡ್ತಾರೆ, ಕೇಂದ್ರಕ್ಕೂ ದೂರು ಕೊಡುತ್ತಾರೆ ಇದು ಅವರ ಕೆಲಸ ಕೇಂದ್ರದಲ್ಲಿ ತಮ್ಮ ಸರ್ಕಾರವಿದ್ದರೆ ಏನು ಬೇಕಾದರೂ ಮಾಡಬಹುದು ಎಂದು ಕೊಂಡಿದ್ದಾರೆ ಬಿಜೆಪಿಯವರು ಎಂದು ಕಿಡಿಕಾರಿದರು.

English summary
Senior congress leader Mallikarjun Kharge made an alligations against BJP that Divising other party is their cultures. Even they Did it in Many states.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X