ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಜೆಪಿಗೆ ಲೋಕಸಭೆ ಚುನಾವಣೆಯಲ್ಲಿ ಸೋಲು ಕಟ್ಟಿಟ್ಟ ಬುತ್ತಿ: ಖಂಡ್ರೆ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 20: ಸಮ್ಮಿಶ್ರ ಸರ್ಕಾರ ಅಸ್ಥಿರಗೊಳಿಸಲು ಯತ್ನಿಸುತ್ತಿರುವ ಬಿಜೆಪಿಗೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೇಳಿದ್ದಾರೆ.

ಈಗಾಗಲೇ ರಾಜ್ಯದಲ್ಲಿ ತಿರಸ್ಕೃತಗೊಂಡಿರುವ ಬಿಜೆಪಿ ಇದೀಗ ಹಿಂಬಾಗಿಲಿನಿಂದ ಆಪರೇಷನ್ ಕಮಲ ಮಾಡುವ ಮೂಲಕ ಅಧಿಕಾರದ ಗದ್ದುಗೆ ಹಿಡಿಯಲು ಪ್ರಯತ್ನಿಸುತ್ತಿದೆ. 2008ರಲ್ಲಿ ಹೀಗೆಯೇ ರಾಜ್ಯದ ಜನತೆ ತಿರಸ್ಕರಿಸಿತ್ತು.

ಲೋಕಸಭೆ ಟಿಕೆಟ್ ಆಕಾಂಕ್ಷಿಯಾಗಿದ್ದ ರಮಾನಾಥ್ ರೈಗೆ ಶುರುವಾಯ್ತು ಹೊಸ ಮಂಡೆಬಿಸಿಲೋಕಸಭೆ ಟಿಕೆಟ್ ಆಕಾಂಕ್ಷಿಯಾಗಿದ್ದ ರಮಾನಾಥ್ ರೈಗೆ ಶುರುವಾಯ್ತು ಹೊಸ ಮಂಡೆಬಿಸಿ

ಹಾದಿಬೀದಿಯಲ್ಲಿ ನಿಂತು ಕಚ್ಚಾಡುತ್ತಿದ್ದ ಬಿಜೆಪಿ ವರಸೆಯನ್ನು ನೋಡಿದ್ದಾರೆ. ಹೀಗಾಗಿ ಈ ಬಾರಿಯೂ ಅಂತಹ ಪ್ರಯತ್ನಗಳನ್ನು ಮಾಡಿದರೆ ಫಲಿಸುವುದಿಲ್ಲ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹೀನಾಯ ಸೋಲಿ ಕಾದಿದೆ ಎಂದು ವಿಶ್ಲೇಷಿಸಿದರು.

Khandre says Bjp will learn big lesson in parliament election

ಲೋಕಸಭಾ ಚುನಾವಣೆ: ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿರುವ ಸಂಭಾವ್ಯ ಕಾಂಗ್ರೆಸ್ ಅಭ್ಯರ್ಥಿಗಳುಲೋಕಸಭಾ ಚುನಾವಣೆ: ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿರುವ ಸಂಭಾವ್ಯ ಕಾಂಗ್ರೆಸ್ ಅಭ್ಯರ್ಥಿಗಳು

ಆಡಳಿತ ಏರುಪೇರಿಗೆ ಈ ಷಡ್ಯಂತ್ರಗಳು ನಡೆಯುತ್ತಿದೆ, ಸರ್ಕಾರವನ್ನು ಅಸ್ಥಿರಗೊಳಿಸುವುದಷ್ಟೇ ಬಿಜೆಪಿಯ ಕೆಲಸ, ಆದರೆ ಸರ್ಕಾರ ಸ್ಥಿರವಾಗಿದೆ, ಭದ್ರವಾಗಿದೆ, ನಮ್ಮ ಯಾವ ಶಾಸಕರೂ ಬಿಜೆಪಿಗೆ ಹೋಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

English summary
KPCC working president Eshwar Khandre asserted that Bjp will be defeated by the people of the state as the party was involved in unethical politics with operation lotus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X