ಸ್ವಾತಂತ್ರ್ಯ ಉದ್ಯಾನದಲ್ಲಿ ಅಪ್ಪಟ ಖಾದಿ ವಸ್ತುಗಳ ಮಾರಾಟ ಮೇಳ

Posted By: Nayana
Subscribe to Oneindia Kannada

ಬೆಂಗಳೂರು, ಜನವರಿ 3 : ವಿವಿಧ ರಾಜ್ಯಗಳಲ್ಲಿ ತಯಾರಾದ ಅಪ್ಪಟ ಖಾದಿ ವಸ್ತ್ರಗಳ ಮಾರಾಟ ಮತ್ತು ಪ್ರದರ್ಶನ ಮೇಳ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರಾರಂಭವಾಗಿದೆ.

ಖಾದಿಗೂ ಬಂತು GST: ಸ್ವಾತಂತ್ರ್ಯ ನಂತರ ಮೊದಲ ಬಾರಿಗೆ ತೆರಿಗೆ ಬರೆ

ರಾಜ್ಯದ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯು ಉತ್ಸವವನ್ನು ಆಯೋಜಿಸಿದ್ದು ರಾಷ್ಟ್ರ ಮಟ್ಟದ ಉತ್ಸವ ಜನವರಿ 31 ರವರೆಗೆ ನಡೆಯಲಿದೆ. ರಾಜ್ಯದ ಖಾದಿ ವಸ್ತ್ರ ತಯಾರಕರಷ್ಟೇ ಅಲ್ಲದೆ 11 ರಾಜ್ಯಗಳಿಂದ ಖಾದಿ ವಸ್ತ್ರ ತಯಾರಕರು ಭಾಗವಹಿಸಿದ್ದಾರೆ.

Khadi Mela kick off in Bengaluru

ಕೈಮಗ್ಗದಿಂದ ನೇಯ್ದ ಖಾದಿ ಸೀರೆಗಳು, ಖಾದಿ ಜುಬ್ಬಾ, ಪೈಜಾಮ, ರೇಷ್ಮೆ ಸೀರೆಗಳು, ಲಂಗ-ದಾವಣಿ, ಜಮಖಾನಾ, ಮ್ಯಾಟ್ , ಕಂಬಳಿ ಹೀಗೆ ಎಲ್ಲವೂ ಲಭ್ಯವಿದೆ. 200 ಮಳಿಗೆಗಳಿವೆ.

ಯೋಗ ಆಯ್ತು, ಈಗ ಖಾದಿಗೆ ವಿಶ್ವ ಮನ್ನಣೆ ತರಲು ನಿರ್ಧಾರ

ಚಿಂತಾಮಣಿಯ ಟಿ ಎನ್ ಆರ್ ಮಳಿಗೆಯಲ್ಲಿದ್ದ ರೇಷ್ಮೆ ಸೀರೆಗಳಿಗೆ ಮನಸೋಲದ ಮಹಿಳೆಯರೇ ಇಲ್ಲ. ಕಂಚಿ ರೇಷ್ಮೆ ಸೀರೆಗಳಿಗಿಂತಲೂ ಶುದ್ಧ ರೇಷ್ಮೆ ಸೀರೆಗಳು ಇಲ್ಲಿಯೇ ದೊರೆಯುತ್ತದೆ. ಬೆಲೆಯೂ ಕಡಿಮೆ ಇದೆ.

40 ಕೋಟಿ ವಹಿವಾಟು ನಿರೀಕ್ಷೆ: ಕಳೆದ ಬಾರಿ ಉತ್ಸವಕ್ಕೆ 1.20ಲಕ್ಷ ಜನರು ಭೇಟಿ ನೀಡಿದ್ದರು. 31 ಕೋಟಿ ರೂ. ವಹಿವಾಟು ನಡೆದಿತ್ತು. ಈ ಬಾರಿ ಮೊದಲ ದಿನವೇ 5 ಸಾವಿರ ಕ್ಕೂ ಹೆಚ್ಚು ಜನರು ಭೇಟಿ ನೀಡಿದ್ದಾರೆ. 31 ರವರೆಗೆ 2 ಲಕ್ಷಕ್ಕೂ ಹೆಚ್ಚು ಜನರು ಭೇಟಿ ನೀಡುವ ನಿರೀಕ್ಷೆ ಇದೆ. ಅಂದಾಜು 40 ಕೋಟಿ ವಹಿವಾಟು ನಡೆಯುವ ನಿರೀಕ್ಷೆ ಇದೆ ಎಂದು ಖಾದಿ ಗ್ರಾಮೋದ್ಯೋಗ ಮಂಡಳಿ ಸಿಇಐ ಜಯವಿಭವ ಸ್ವಾಮಿ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
With a new fashionable and traditional style, a month long Khadi Mela kicked off in Bengaluru.Khadi mela has around 200 shops with variety of dresses, dress materials and handloom cloths and many things.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ