ಚುಂಬಿಸಿ, ನಾಲಿಗೆ ಕಚ್ಚಿ ಪರಾರಿಯಾಗಿದ್ದ ವಿಕೃತಕಾಮಿ ಬಂಧನ

Written By: Ramesh
Subscribe to Oneindia Kannada

ಬೆಂಗಳೂರು, ಜನವರಿ. 08 : ಕೆ.ಜಿ.ಹಳ್ಳಿ ವ್ಯಾಪ್ತಿಯಲ್ಲಿ ಯುವತಿಯನ್ನು ಚುಂಬಿಸಿ, ನಾಲಿಗೆ ಕಚ್ಚಿ ಪರಾರಿಯಾಗಿದ್ದ ವಿಕೃತಕಾಮಿಯನ್ನು ಭಾನುವಾರ ಕೆಜಿ ಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಯುವತಿ ಮತ್ತು ಪೋಷಕರು ಯುವಕನ ಗುರುತು ಪತ್ತೆ ಹಚ್ಚಿದ್ದಾರೆ. ಇರ್ಷಾದ್ ಬಂಧಿತ ಆರೋಪಿ. ಈತ ಯುವತಿಯ ಸಂಬಂಧಿ ಎಂದು ತಿಳಿದು ಬಂದಿದೆ. ಯುವತಿಯನ್ನು ಪ್ರೀತಿಸುತ್ತಿದ್ದ ಆರೋಪಿ ಇರ್ಷಾದ್ ತಾನು ಮಾಡಿರುವ ತಪ್ಪನ್ನು ಒಪ್ಪಿಕೊಂಡಿದ್ದಾನೆ.

ಕೆ.ಜಿ.ಹಳ್ಳಿ ವ್ಯಾಪ್ತಿ ಬೆಳ್ಳಂಬೆಳಗ್ಗೆ 6.30ರ ವೇಳೆಯಲ್ಲಿ ಮನೆಯೊಂದರ ಮುಂದೆ ಯುವತಿ ಹಾದು ಹೋಗುವಾಗ ಹಿಂದಿನಿಂದ ಓಡಿ ಬಂದು ಆಕೆಯನ್ನು ಚುಂಬಿಸಿ, ನಾಲಿಗೆ ಕಚ್ಚಿ ಪರಾರಿಯಾಗಿದ್ದ.[ಚುಂಬಿಸಿ, ನಾಲಿಗೆ ಕಚ್ಚಿ ಪರಾರಿಯಾದ ವಿಕೃತಕಾಮಿ]

KG Halli molestation case accused arrested

ಬಂಧಿತ ಇರ್ಷಾದ್​, ಯುವತಿ ನಡುವೆ ಅಕ್ರಮ ಸಂಬಂಧ ಇತ್ತು ಎಂಬ ಶಂಕೆ ವ್ಯಕ್ತವಾಗಿದೆ. ತನ್ನ ಪತ್ನಿಯ ತಂಗಿಯನ್ನೂ ಈತ ಮದುವೆಯಾಗಲು ಪ್ಲಾನ್​ ಮಾಡಿದ್ದ. ಯುವತಿಗೂ ತನ್ನನ್ನು ಮದುವೆಯಾಗಲು ಇಷ್ಟ ಇತ್ತು.

ಯುವತಿಗೆ ಮುತ್ತು ನೀಡಿದರೆ ಬೇರೆ ಯಾರೂ ಮದುವೆಯಾಗಲು ಒಪ್ಪಲ್ಲ, ಬಳಿಕ ತಾನೇ ಮದುವೆಯಾಗಬಹುದುದೆಂದು ಲೈಂಗಿಕ ದೌರ್ಜನ್ಯವಾಗಿದೆ ಎಂದು ಕೆಟ್ಟ ಹೆಸರು ಬರಲು ಹೀಗೆ ಮಾಡಿದೆ ಎಂದು ವಿಚಾರಣೆ ವೇಳೆ ಇರ್ಷಾದ್ ತಿಳಿಸಿದ್ದಾನೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The Bengaluru KG Halli Police has made Person arrests on Sunday Kammanahalli molestation case.
Please Wait while comments are loading...