ಕೆಂಗೇರಿ: 9 ಲಕ್ಷ ಮೌಲ್ಯದ 300 ಗ್ರಾಂ ಚಿನ್ನ ವಶ

Posted By:
Subscribe to Oneindia Kannada

ನವೆಂಬರ್ 10, ಬೆಂಗಳೂರು : ಕುಖ್ಯಾತ ಸರಗಳ್ಳ ಸಿದ್ದಗಂಗಾಚಾರಿ ಅಲಿಯಾಸ್ ಮಂಜ ಎಂಬುವನನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ.

ಸರಗಳ್ಳತನ, ಮನೆ ಕಳವು, ವಂಚನೆಗಳನ್ನು ಮಾಡುತ್ತಿದ್ದ ಈತನ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ 11 ಪ್ರಕರಣಗಳು ದಾಖಲಾಗಿದ್ದವು. ಆರೋಪಿ ಮಂಜನಿಂದ 9 ಲಕ್ಷ ಮೌಲ್ಯದ 300 ಗ್ರಾಂ ಚಿನ್ನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ನೆಲಮಂಗಲ ತಾಲ್ಲೂಕು ಹುರುಚಿಕ್ಕನಹಳ್ಳಿ ಆರೋಪಿಯ ಹುಟ್ಟೂರು.

Kengeri police arrested chain snatcher

ಆರೋಪಿ ಮಂಜನ ವಿವಿಧ ಪ್ರಕರಣ ನ್ಯಾಯಾಲಯದಲ್ಲಿ ಚಾಲ್ತಿಯಲ್ಲಿದ್ದವು. ಜಾಮೀನಿನ ಮೇಲೆ ಹೊರಗಿದ್ದ ಈತ ಸರಿಯಾಗಿ ವಿಚಾರಣೆಗೆ ಹಾಜರಾಗದ ಕಾರಣ ನ್ಯಾಯಾಲಯ ಸಹ ಈತನನ್ನು ಬಂಧಿಸುವಂತೆ ಆದೇಶ ನೀಡಿತ್ತು.

Kengeri police arrested chain snatcher

ಪಶ್ಚಿಮ ವಿಭಾಗ ಉಪ ಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್ ಅವರ ಮಾರ್ಗದರ್ಶನದಲ್ಲಿ ಕೆಂಗೇರಿ ಗೇಟ್ ಸಹಾಯಕ ಕಮಿಷನರ್ ಡಾ.ಪ್ರಕಾಶ್ ನೇತೃತ್ವದಲ್ಲಿ ಕೆಂಗೇರಿ ಠಾಣೆಯ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Kengeri Police arrested chain snatcher Siddalingachar alias Manja. police seized 300 grams of gold value of 900000 rupees.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ