ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೆಬ್ಬಾಳ ಜಂಕ್ಷನ್‌ನಲ್ಲಿ ಕೆಂಪೇಗೌಡ ಪ್ರತಿಮೆ ಸ್ಥಾಪನೆ

|
Google Oneindia Kannada News

ಬೆಂಗಳೂರು, ಮಾರ್ಚ್ 07: ಹೆಬ್ಬಾಳ ಜಂಕ್ಷನ್ ನಲ್ಲಿ ನಾಡಪ್ರಭು ಕೆಂಪೇಗೌಡ ಪ್ರತಿಮೆ ಪ್ರತಿಷ್ಠಾಪನೆ ಗೊಂಡಿದೆ. ಮಾರ್ಚ್ ಅಂತ್ಯದೊಳಗಾಗಿ ಉದ್ಘಾಟನೆಗೊಳ್ಳಲಿದೆ. ಈ ಮೂಲಕ ದಶಕದ ಹಿಂದೆ ಬಿಡಿಎ ಸಿದ್ಧಪಡಿಸಿದ್ದ ಯೋಜನೆ ಪೂರ್ತಿಯಾಗಿದ್ದು, ಈ ಮಾಸಾಂತ್ಯಕ್ಕೆ ಉದ್ಘಾಟನೆಯಾಗಲಿದೆ.

ವಿಧಾನ ಸೌಧ ಆವರಣದಲ್ಲಿ ಮಹರ್ಷಿ ವಾಲ್ಮೀಕಿ ವಿಗ್ರಹ ಸ್ಥಾಪನೆ ವಿಧಾನ ಸೌಧ ಆವರಣದಲ್ಲಿ ಮಹರ್ಷಿ ವಾಲ್ಮೀಕಿ ವಿಗ್ರಹ ಸ್ಥಾಪನೆ

ಒಂದು ಕೋಟಿ ರೂ. ಮೊತ್ತದ ಈ ಯೋಜನೆಗೆ ಸರ್ಕಾರ ಒಪ್ಪಿಗೆ ನೀಡಿದ ಬಳಿಕ ಹಲವು ಅಡೆತಡೆ ಎದುರಾಗಿತ್ತು. ಎಲ್ಲವೂ ನಿವಾರಣೆಯಾಗಿರುವ ಕಾರಣ, ಪ್ರತಿಮೆ ಸ್ಥಾಪನೆ ಕಾರ್ಯವೂ ಮುಗಿದಿದೆ. ಅಂತಿಮ ಕಾರ್ಯಗಳಷ್ಟೇ ಬಾಕಿ ಉಳಿದಿದ್ದು, ಈ ತಿಂಗಳೊಳಗೆ ಅದನ್ನು ಮುಗಿಸುವ ಭರದಿಂದ ಕಾಮಗಾರಿ ನಡೆಸಲಾಗುತ್ತಿದೆ.

Kempegowda statue in Hebbal junction unveil soon

ಕೋಟೆ ಮಾದರಿ ವೇದಿಕೆ: ಅಶ್ವಾರೂಢ ಭಂಗಿಯಲ್ಲಿರುವ ನಾಡಪ್ರಭುವಿನ ಪ್ರತಿಮೆ ನಿಲ್ಲಿಸಲು ಕೋಟೆ ಮಾದರಿಯ ಬೃಹತ್ ವೇದಿಕೆ ನಿರ್ಮಿಸಲಾಗಿದೆ. ನೆಲದಿಂದ 30ಅಡಿ ಎತ್ತರ ಹಾಗೂ 16 ಅಡಿ ಅಗಲದ ಕಲ್ಲಿನ ಕೋಟೆಯ ಚಿತ್ರಣ ಮೂಡಿಸಲಾಗಿದೆ. ಈ ವೇದಿಕೆ ಮೇಲೆ 2750ಕೆಜಿ ತೂಕದ ಕೆಂಪೇಗೌಡರ ಕಂಚಿನ ಪ್ರತಿಮೆ ಪ್ರತಿಷ್ಠಾಪಿಸಲಾಗಿದೆ.ಪ್ರತಿಮೆ ಸ್ಥಾಪನೆಯಾಗಲಿರುವ ಜಾಗ ಬಿಡಿಎಗೆ ಸೇರಿದ್ದು, ಅಲ್ಲೀಗ ಉದ್ಯಾನ ಅಸ್ತಿತ್ವದಲ್ಲಿದೆ, ಟ್ರೀ ಪಾರ್ಕ್ ಮಾದರಿಯಲ್ಲಿ ಅಭಿವೃದ್ಧಿಪಡಿಸಿರುವ ಉದ್ಯಾನವನ್ನು ಇನ್ನಷ್ಟು ಚಂದ ಮಡುವ ಆಲೋಚನೆ ಇದೆ ಎಂದು ಬಿಡಿಎ ಎಂಜಿಯರ್ ತಿಳಿಸಿದ್ದಾರೆ.

English summary
Kempegowda statue will be unveiled in Hebbal junction by end of the March.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X