ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಗಸ್ಟ್‌ನಲ್ಲಿ ಕೆಂಪೇಗೌಡ ಬಡಾವಣೆ ನಿವೇಶನ ಹಂಚಿಕೆ ಸಾಧ್ಯತೆ

By Nayana
|
Google Oneindia Kannada News

ಬೆಂಗಳೂರು, ಜು.18: ನಾಡಪ್ರಭು ಕೆಂಪೇಗೌಡ ಬಡಾವಣೆ ಎರಡನೇ ಹಂತದ ನಿವೇಶನ ಹಂಚಿಕೆ ಪ್ರಕ್ರಿಯೆ ಇನ್ನಷ್ಟು ವಿಳಂಬವಾಗುವ ಸಾಧ್ಯತೆ ಇದೆ.

ತಾತ್ಕಾಲಿಕ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಜು.10ರವರೆಗೆ ನೀಡಲಾಗಿದ್ದ ಗಡುವು ಮುಗಿದಿದೆ.ನಾಗರಿಕರಿಂದ ಆಕ್ಷೇಪಣೆಗಳನ್ನು ಸೈಟ್‌ ವಿಸ್ತೀರ್ಣ ಆಧರಿಸಿ ಸಂಬಂಧಿತ ವಿಭಾಗಗಳಿಗೆ ರವಾನಿಸಲಾಗಿದೆ. ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಸೈಟ್‌ ಹಂಚಿಕೆ ವಿಳಂಬವಾಗಿತ್ತು.

ಕೆಂಪೇಗೌಡ ಬಡಾವಣೆ: ನಿವೇಶನ ಹಂಚಿಕೆ ಪ್ರಕ್ರಿಯೆ ಮತ್ತಷ್ಟು ವಿಳಂಬ ಕೆಂಪೇಗೌಡ ಬಡಾವಣೆ: ನಿವೇಶನ ಹಂಚಿಕೆ ಪ್ರಕ್ರಿಯೆ ಮತ್ತಷ್ಟು ವಿಳಂಬ

ಈ ತಿಂಗಳಾಂತ್ಯಕ್ಕೆ ಬಿಡುಗಡೆ ಮಾಡಬಹುದಾಗಿದ್ದರೂ ಆಗಸ್ಟ್ ಮಧ್ಯಭಾಗದವರೆಗೆ ಫಲಾನುಭವಿಗಳು ಕಾಯಬೇಕಿದೆ. ಕೆಲವೊಂದು ಹೊರತುಪಡಿಸಿ ಹೆಚ್ಚಿನ ಆಕ್ಷೇಪಗಳೇನು ಸಲ್ಲಿಕೆಯಾಗಿಲ್ಲ, ಆದರೆ ನಿಯಮದಂತೆ ಮುಂದುವರೆಯಬೇಕಿರುವ ಕಾರಣ ಈ ತಿಂಗಳಾಂತ್ಯವರೆಗೆ ಕಾಲಾವಕಾಶ ಬೇಕಿದೆ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ.

Kempegowda layout site allotment may delay

ಎರಡನೇ ಹಂತದ ಐದು ಸಾವಿರ ನಿವೇಶನಗಳನ್ನು ಸಿಎಂ ಕುಮಾರಸ್ವಾಮಿ ಅವರಿಂದ ಫಲಾನುಭವಿಗಳಿಗೆ ವಿತರಿಸಲು ಬಿಡಿಎ ಚಿಂತನೆ ನಡೆಸಿದೆ.ಇದಕ್ಕಾಗಿ ಬಿಡಿಎ ಸಿಎಂ ಕಚೇರಿ ಸಂಪರ್ಕಿಸಿದ್ದು ಸೂಕ್ತ ದಿನಾಂಕ ನಿಗದಿಪಡಿಸುವಂತೆ ವಿನಂತಿಸಿದೆ.

ನಾಗರಿಕರು ಸಲ್ಲಿಸಿರುವ ಆಕ್ಷೇಪಣೆಗಳನ್ನು ನಾಲ್ಕೈದು ದಿನಗಳಲ್ಲಿ ಪರಿಶೀಲಿಸಬಹುದು. ಈ ಪ್ರಕ್ರಿಯೆ ಬಳಿಕ ನಿವೇಶನ ಹಂಚಿಕೆ ಸಮಿತಿ ಪಟ್ಟಿಯನ್ನು ಅನುಮೋದಿಸಬೇಕು.

English summary
Most awaited site allotment of Nadaprabhu Kempegowda layout was delayed again, BDA officials have said aspirants of sites still wait for at least one month.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X