ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಂಪೇಗೌಡ ಬಡಾವಣೆ : ಸೈಟ್‌ ಪಡೆದವರ ಪಟ್ಟಿ ಬಿಡುಗಡೆಗೆ ಕ್ಷಣಗಣನೆ

|
Google Oneindia Kannada News

ಬೆಂಗಳೂರು, ಜೂನ್ 22 : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿನ ನಿವೇಶನಗಳ ಹಂಚಿಕೆಗೆ ದಿನಗಣನೆ ಆರಂಭವಾಗಿದೆ. 5 ಸಾವಿರ ನಿವೇಶನಗಳನ್ನು ಪಡೆಯಲು ಮೂವತ್ತು ಸಾವಿರಕ್ಕೂ ಅಧಿಕ ಜನರು ಅರ್ಜಿ ಸಲ್ಲಿಸಿದ್ದಾರೆ.

ಬುಧವಾರ ಬಿಡಿಎ ನೂತನ ಆಯುಕ್ತರಾಗಿ ರಾಜಕುಮಾರ್ ಖತ್ರಿ ಅವರು ಶ್ಯಾಂ ಭಟ್ ಅವರಿಂದ ಸ್ವೀಕರಿಸಿದರು. ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಅವರು, ನಿವೇಶನದ ಫಲಾನುಭವಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಿದ್ದಾರೆ. [ಬಿಡಿಎ ಆಯುಕ್ತ ಶ್ಯಾಂ ಭಟ್ ವರ್ಗಾವಣೆ]

kempegowda layout

ಬುಧವಾರ ಸಂಜೆ ಅಥವ ಗುರುವಾರ ಬಿಡಿಎ ವೆಬ್‌ಸೈಟ್‌ನಲ್ಲಿ ಪಟ್ಟಿ ಬಿಡುಗಡೆಯಾಗಲಿದೆ. ಒಟ್ಟು 5 ಸಾವಿರ ನಿವೇಶನಗಳ ಹಂಚಿಕೆಗೆ ಬಿಡಿಎ ಅರ್ಜಿ ಆಹ್ವಾನಿಸಿತ್ತು. 30 ಸಾವಿರಕ್ಕೂ ಅಧಿಕ ಅರ್ಜಿಗಳು ಬಂದಿದ್ದು, ಲಾಟರಿ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತದೆ. [ಬಿಡಿಎ ವೆಬ್ ಸೈಟ್]

ಎಲ್ಲಿದೆ ಬಡಾವಣೆ : ಮೈಸೂರು ರಸ್ತೆ ಮತ್ತು ಮಾಗಡಿ ರಸ್ತೆ ನಡುವೆ ನಾಡಪ್ರಭು ಕೆಂಪೇಗೌಡ ಬಡಾವಣೆಯನ್ನು ಬಿಡಿಎ ನಿರ್ಮಿಸಿದ್ದು, ಸುಮಾರು 25 ಸಾವಿರ ನಿವೇಶಗಳನ್ನು ಬಡಾವಣೆಯಲ್ಲಿ ನಿರ್ಮಿಸುವ ಗುರಿ ಇದೆ. ಪ್ರಸ್ತುತ 5 ಸಾವಿರ ನಿವೇಶಗಳನ್ನು ಮಾತ್ರ ಹಂಚಿಕೆ ಮಾಡಲಾಗುತ್ತಿದೆ. [ಚಾಲುಕ್ಯ ವೃತ್ತ-ಹೆಬ್ಬಾಳ ಉಕ್ಕಿನ ಸೇತುವೆ ಯೋಜನೆಗೆ ಅಸ್ತು]

English summary
The selection list for site allotment in Kempegowda Layout will be published soon. Bangalore Development Authority (BDA) developed layout.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X