ಕೆಂಪೇಗೌಡ ಬಡಾವಣೆ, ನಿವೇಶನದಾರರಿಗೆ ಜನವರಿಯಲ್ಲಿ ಹಂಚಿಕೆ ಪತ್ರ

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 10: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಅಭಿವೃದ್ಧಿ ಪಡಿಸುತ್ತಿರುವ ಕೆಂಪೇಗೌಡ ಬಡಾವಣೆ ಮೊದಲ ಹಂತದಲ್ಲಿ ಐದು ಸಾವಿರ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ನಿವೇಶನದಾರರಿಗೆ ಜನವರಿಯಲ್ಲಿ ಹಂಚಿಕೆ ಪತ್ರ ವಿತರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.

ಮುಖ್ಯಮಂತ್ರಿ ಅವರು ಹಂಚಿಕೆಯಾಗಿರುವ ನಿವೇಶನಗಳಿಗೆ ಪಾರದರ್ಶಕವಾಗಿರಲು ಸಂಖ್ಯೆಯನ್ನು ಕಂಪ್ಯೂಟರ್ Randomisation ವಿಧಾನದ ಮೂಲಕ ನಿಗದಿ ಪಡಿಸುವ ಪ್ರಕ್ರಿಯೆಗೆ ಗೃಹ ಕಚೇರಿ ಕೃಷ್ಣಾದಲ್ಲಿ ಬುಧವಾರ ಚಾಲನೆ ನೀಡಿ ಮಾತನಾಡಿದರು.[ಕೆಂಪೇಗೌಡ ಬಡಾವಣೆ: ಯಾವ ಕೆಟಗೆರಿಗೆ ಎಷ್ಟು ನಿವೇಶನ?]

ಹಂಚಿಕೆ ಪತ್ರ ವಿತರಿಸಿದ ಬಳಿಕ ನಿವೇಶನದಾರರು ಮನೆಗಳನ್ನು ಕಟ್ಟಿಕೊಳ್ಳಬಹುದು. ಈ ಬಡಾವಣೆಯಲಿ 60:40 ಅನುಪಾತ ಪ್ರಕಾರ 2174 ನಿವೇಶನಗಳನ್ನು ರೈತರಿಗೆ ಪರಿಹಾರದ ರೂಪದಲ್ಲಿ ಹಂಚಿಕೆ ಮಾಡಲಾಗಿದೆ.

Kempegowda Layout: Siddaramaiah allots 5,000 Sites

20x30 ಅಳತೆಯ 1500, 30x40 ಅಳತೆಯ ಎರಡು ಸಾವಿರ, 40x60 ಅಳತೆಯ ಒಂದು ಸಾವಿರ ಮತ್ತು 50x80 ಅಳತೆಯ 500 ಸೇರಿದಂತೆ ಒಟ್ಟು ಐದು ಸಾವಿರ ನಿವೇಶನಗಳನ್ನು ಹಂಚಿಕೆ ಮಾಡಲಾಗುವುದು.[ಕೆಂಪೇಗೌಡ ಬಡಾವಣೆ ನಿವೇಶನಕ್ಕೆ ಅರ್ಜಿ, ನಿಮಗಿದು ತಿಳಿದಿರಲಿ]

20x30 ಅಳತೆಯ ನಿವೇಶನ ಮೌಲ್ಯ ಸಾಮಾನ್ಯ ವರ್ಗದವರಿಗೆ 10,46,251 ರೂ. ನಿಗದಿ ಮಾಡಲಾಗಿದೆ.

ಆರ್ಥಿಕವಾಗಿ ಹಿಂದುಳಿದಿರುವವರಿಗೆ 5,23,126 ರೂ., 30x40 ಅಳತೆಯ ನಿವೇಶನಕ್ಕೆ 23,25,002, 40x60 ಅಳತೆಯ ನಿವೇಶನಕ್ಕೆ 52,31,255 ಹಾಗೂ 50x80 ವಿಸ್ತೀರ್ಣದ ನಿವೇಶನಕ್ಕೆ 96,87,510 ರೂ.ಗಳನ್ನು ನಿಗದಿ ಪಡಿಸಲಾಗಿದೆ.

ಮತ್ತೆ ಐದು ಸಾವಿರ ನಿವೇಶನ ಹಂಚಿಕೆ: ಕೆಂಪೇಗೌಡ ಬಡಾವಣೆಯಲ್ಲಿ 21 ಸಾವಿರ ನಿವೇಶನಗಳನ್ನು ಹಂಚಿಕೆ ಮಾಡಲಾಗುವುದು. ಮೊದಲ ಹಂತದಲ್ಲಿ ಐದು ಸಾವಿರ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಜನವರಿಯಲ್ಲಿ ಮತ್ತೆ ಐದು ಸಾವಿರ ನಿವೇಶನಗಳನ್ನು ವಿತರಿಸಲಾಗುವುದು.

ಜೇಷ್ಠತೆ ಆಧಾರದ ಮೇಲೆ ಇಂದು ನಿವೇಶನಗಳ ಸಂಖ್ಯೆ ನಿಗದಿ ಮಾಡಲಾಗಿದೆ. ಪಾರದರ್ಶಕವಾಗಿರಬೇಕು ಎಂಬ ಕಾರಣಕ್ಕೆ Randomisation ಮೂಲಕ ಈ ಪ್ರಕ್ರಿಯೆ ನೆರವೇರಿಸಲಾಗಿದೆ ಎಂದು ಮುಖ್ಯಮಂತ್ರಿಯವರು ಹೇಳಿದರು.

ನಿವೇಶನ ಹಂಚುವ ಕೆಲಸ ಬಹು ದಿನಗಳಿಂದ ನೆನೆಗುದಿಗೆ ಬಿದ್ದಿತ್ತು. ಈಗ ಆ ಕೆಲಸ ನೆರವೇರಿದೆ. ಅರ್ಜಿ ಸಲ್ಲಿಸಿ ನಿವೇಶನ ಸಿಗದವರಿಗೆ ಹಣ ವಾಪಸ್ ನೀಡಲಾಗುವುದು ಎಂದು ತಿಳಿಸಿದರು.

ಕೆಂಪೇಗೌಡ ಬಡಾವಣೆ ಅಭಿವೃದ್ಧಿಗೆ 2408 ಕೋಟಿ ರೂ. ವೆಚ್ಚವಾಗಲಿದೆ. ಇದಕ್ಕಾಗಿ 4043 ಎಕರೆ 23 ಗುಂಟೆ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳಲಾಗಿದೆ.

ಇದರಲ್ಲಿ 2223 ಎಕರೆ ವಸತಿ ಬಡಾವಣೆಗೆ, 1723 ಎಕರೆ ನಿವೇಶನಗಳಿಗೆ, 500 ಎಕರೆ ಎತ್ತರದ ಕಟ್ಟಡಗಳಿಗೆ, ಉದ್ಯಾನಕ್ಕೆ 600, ನಾಗರಿಕ ಸೌಲಭ್ಯ ವಿಸ್ತೀರ್ಣಕ್ಕೆ 404 ಎಕರೆ ಮೀಸಲಿಡಲಾಗಿದೆ ಎಂದು ವಿವರಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Bengaluru Development Authority (BDA) will allot another 5,000 sites at Kempegowda Layout in December.Chief Minister Siddaramaiah told this to media after allotting 5,000 sites on seniority basis picked through computer randomisation process here on Wednesday. Besides, 5,000 sites to applicants, the BDA also alloted 2,170 sites to land owners as part of their share.
Please Wait while comments are loading...