ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೈಟ್ ಸಿಗದಿದ್ದರೂ ಠೇವಣಿ ವಾಪಸ್ ಖಾತ್ರಿ ಕೊಟ್ಟ ಬಿಡಿಎ

|
Google Oneindia Kannada News

ಬೆಂಗಳೂರು, ಸೆ.24: ನಾಡಪ್ರಭು ಕೆಂಪೇಗೌಡ ಬಡಾವಣೆಯ ಎರಡನೇ ಹಂತದ ಸೀಟು ಹಂಚಿಕೆ ಪ್ರಕ್ರಿಯೆ ಆರಂಭವಾಗಲಿದೆ.. ಇದರಲ್ಲಿ ನಿವೇಶನ ಸಿಗದೆ ಠೇವಣಿ ಕಳೆದುಕೊಂಡವರಿಗೆ ಬ್ಯಾಂಕ್‌ಗೆ ನೇರವಾಗಿ ಹಣ ಜಮಾ ಮಾಡಲಾಗುತ್ತದೆ.

ಸೆಪ್ಟೆಂಬರ್ 25ರಂದು ಐದು ಸಾವಿರ ಮಂದಿಗೆ ಸಿಎಂ ಸೈಟು ಜಂಚಿಕೆ ಮಾಡಲಿದ್ದಾರೆ. ಮರುದಿನದಿಂದಲೇ ಠೇವಣಿ ಹಣವನ್ನು ವಾಪಸ್ ನೀಡಲಾಗುತ್ತದೆ.

ಸೆ.25ರಂದು ಬಿಡಿಎಯ 5 ಸಾವಿರ ನಿವೇಶನ ಹಂಚಿಕೆಸೆ.25ರಂದು ಬಿಡಿಎಯ 5 ಸಾವಿರ ನಿವೇಶನ ಹಂಚಿಕೆ

ನಿವೇಶನ ಸಿಗದವರಿಗೆ ಹಿಂದಿರುಗಸಲಾಗುವ ಹಣಕ್ಕೆ ಬಡ್ಡಿ ಸಿಗುವುದಿಲ್ಲ, ಬಿಡಿಎ ನಿಯಮದ ಪ್ರಕಾರ ಫಲಾನುಭವಿಗಳ ಅಂತಿಮ ಪಟ್ಟಿ ಬಿಡುಗಡೆಯಾಗಿ ಆರು ತೀಮಗಳೊಳಗೆ ಠೇವಣಿ ವಾಪಸ್ ಮಾಡಬೇಕು. ಈ ಗಡುವಿನ ಬಳಿಕ ಠೆವಣಿ ಹಿಂದಿರುಗಿಸದಿದ್ದಲ್ಲಿ ಪ್ರಾಧಿಕಾರ ಅಂತಹ ಫಲಾನುಭವಿಗಳಿಗೆ ಬಡ್ಡಿ ಹಣ ಪಾವತಿಸಬೇಕಾಗುತ್ತದೆ.

Kempegowda layout: Applicants can get deposit money immediately

ಈ ಪೈಕಿ ಸೈಟು ಸಿಗದ ಹತ್ತು ಸಾವಿರ ಜನರಿಗೆ ಠೇವಣಿ ಹಣ ವಾಪಸ್ ಮಾಡಲಾಗುತ್ತಿದೆ. ಈ ಬಾಬ್ತಿಗಡ ಅಗತ್ಯವಾದ 107 ಕೋಟಿ ರೂ ಹಣವನ್ನು ಪ್ರತ್ಯೇಕ ಖಾತೆಯಲ್ಲಿ ಇರಿಸಿದೆ. ಹೀಗಾಗಿ ಠೇವಣಿ ವಾಪಸ್ ಗೆ ಹಣದ ಕೊರೆತಯಾಗುವುದಿಲ್ಲ ಎಂದು ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.

16 ಕೋಟಿ ವೆಚ್ಚದಲ್ಲಿ ಕೆಂಪೇಗೌಡ ಬಡಾವಣೆ ಅಭಿವೃದ್ಧಿಗೆ ಸಿಎಂ ಚಾಲನೆ16 ಕೋಟಿ ವೆಚ್ಚದಲ್ಲಿ ಕೆಂಪೇಗೌಡ ಬಡಾವಣೆ ಅಭಿವೃದ್ಧಿಗೆ ಸಿಎಂ ಚಾಲನೆ

ನಾಡಪ್ರಭು ಕೆಂಪೇಗೌಡ ಬಡಾವಣೆಯ ಎರಡನೇ ಹಂತದ ಐದು ಸಾವಿರ ನಿವೇಶನಗಳ ಹಂಚಿಕೆ ಪ್ರಕ್ರಿಯೆಗೆ ಸಿಎಂ ಕುಮಾರಸ್ವಾಮಿ ಸೆ.25ರಂದು ಚಾಲನೆ ನೀಡಲಿದ್ದಾರೆ. ಅಂದು ಬೆಳಗ್ಗೆ 11.30ಕ್ಕೆ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಕಂಪ್ಯೂಟರ್ ಯಂತ್ರ ರಾಂಡಮೈಸೇಷನ್ ಮಾದರಿ ಮೂಲಕ ಸೈಟು ಹಂಚಿಕೆ ಮಾಡಲಿದ್ದಾರೆ.

English summary
Bangalore development authority has decided to return deposit amount for applicants who will be missed sites in the second phase of Kempegowda layout. The allocation of sites will be held in September 25.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X