ಕೆಂಪೇಗೌಡ ಜಯಂತಿ ರದ್ದುಗೊಳಿಸಿದ ಸಿದ್ದು ಸರಕಾರ

By: ಒನ್ಇಂಡಿಯಾ ಪ್ರತಿನಿಧಿ
Subscribe to Oneindia Kannada

ಬೆಂಗಳೂರು, ಏಪ್ರಿಲ್ 15: ಏಪ್ರಿಲ್ 17ರಂದು ರಾಜ್ಯ ಸರಕಾರದಿಂದ ಆಚರಿಸಲು ನಿರ್ಧರಿಸಿದ್ದ ಕೆಂಪೇಗೌಡ ಜಯಂತಿಯನ್ನು ರದ್ದುಗೊಳಿಸಿರುವುದಾಗಿ ಇಂಧನ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಕೆಂಪೇಗೌಡರ ಜನ್ಮದಿನದ ಬಗ್ಗೆ ಗೊಂದಲ ಇರುವುದರಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ತಿಳಿಸಿದ್ದಾರೆ.

Kempegowda jayanti cancelled by Congress government

ಆದರೆ, ಆದಿಚುಂಚನಗಿರಿ ಮಠದ ನಿರ್ಮಲಾನಂದ ನಾಥ ಸ್ವಾಮೀಜಿ ಸೂಚನೆ ಮೇರೆಗೆ ಈ ತೀರ್ಮಾನ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಇದೇ ಮೊದಲ ಬಾರಿಗೆ ರಾಜ್ಯ ಸರಕಾರದಿಂದ ಕೆಂಪೇಗೌಡ ಜಯಂತಿ ಆಚರಣೆಗೆ ನಿರ್ಧರಿಸಲಾಗಿತ್ತು. ಆದರೆ ಜನ್ಮದಿನದ ಬಗ್ಗೆ ಗೊಂದಲ ಇರುವುದರಿಂದ ಕಾರ್ಯಕ್ರಮವನ್ನೇ ರದ್ದುಗೊಳಿಸಲಾಗಿದೆ.[ರಾಜ್ಯಾದ್ಯಂತ ಕೆಂಪೇಗೌಡ, ರಾಣಿ ಚೆನ್ನಮ್ಮ ಜಯಂತಿ: ಏನಿದರ ಗುಟ್ಟು?]

Kempegowda jayanti cancelled by Congress government

ಈ ಮಧ್ಯೆ ಸರಕಾರದ ಈ ಕ್ರಮಕ್ಕೆ ಆಕ್ಷೇಪ ವ್ಯಕ್ತವಾಗಿದ್ದು, ಕೆಂಪೇಗೌಡ ಜಯಂತಿ ಆಚರಣೆ ಎಂಬುದೇ ಗಿಮಿಕ್ ಆಗಿತ್ತು. ಅದ್ಯಾವ ಉದ್ದೇಶವಿಟ್ಟುಕೊಂಡು ಸರಕಾರದಿಂದ ಘೋಷಣೆ ಮಾಡಲಾಗಿತ್ತೋ ಅದು ಈಡೇರಿದ ಬಳಿಕ ನೆಪ ಮಾಡಿಕೊಂಡು ಕಾರ್ಯಕ್ರಮ ರದ್ದು ಮಾಡುತ್ತಿದ್ದಾರೆ. ಘೋಷಣೆಗೆ ಮುನ್ನ ಈ ಬಗ್ಗೆ ಚರ್ಚೆ ಮಾಡಿರಲಿಲ್ಲವೆ? ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Kempegowda jayanti cancelled by Congress government. There is a confusion in Kempegowda's date of birth, so, according to Adichunchanagiri seer Nirmalanandanatha seer's instruction jayanti cancelled, said by minister DK Shivakumar.
Please Wait while comments are loading...