ಮಹಿಳಾ ದಿನ: ಮಹಿಳೆಯರಿಂದಲೇ ಏರ್ ಪೋರ್ಟ್ ನಿರ್ವಹಣೆ

Posted By: Nayana
Subscribe to Oneindia Kannada

ಬೆಂಗಳೂರು, ಮಾರ್ಚ್ 09: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುರುವಾರ ಬೆಳಗಿನ ಪಾಳಿಯಲ್ಲಿ (ಬೆಳಗ್ಗೆ 6ರಿಂದ ಮಧ್ಯಾಹ್ನ 2ಗಂಟೆಯವರೆಗೆ) ಮಹಿಳಾ ಸಿಬ್ಬಂದಿಯೇ ನಿಲ್ದಾಣದ ಕಾರ್ಯಾಚರಣೆಯನ್ನು ನಡೆಸಿದರು.ಈ ರೀತಿಯಾಗಿ ಕೆಐಎಎಲ್ ನಲ್ಲಿ ಮಹಿಳಾ ದಿನವನ್ನು ಆಚರಿಸಲಾಯಿತು.

ಏಫ್ರಾನ್, ಏರ್ ಸೈಡ್, ಏರ್ ರೆಗ್ಯುಲೇಷನ್ಸ್, ಟ್ಯಾಕ್ಸಿ ವೇ, ರನ್ ವೇ, ಆರ್ ಟಿಇ, ಟ್ಯಾಕ್ಸಿ ವೇ, ಫಾಲೋ ಮಿ ಕಾರುಗಳು, ಏವಿಯೇಷನ್ ಸೇಫ್ಟಿ, ಗೆಸ್ಟ್ ರಿಲೇಷನ್ಸ್, ಟರ್ಮಿನಲ್ ಆಪರೇಷನ್ ಹಾಗೂ ಏರ್ ಪೋರ್ಟ್ ಆಫರೇಷನ್ ಕಂಟ್ರೋಲ್ ಸೆಂಟರ್ ನ ಕೆಲಸವನ್ನು 36 ಮಹಿಳಾ ಅಧಿಕಾರಿಗಳ ತಂಡ ನಿರ್ವಹಿಸಿತು. ಜತೆಗೆ ಏರ್ ಟ್ರಾಫಿಕ್ ಕಂಟ್ರೋಲ್ ನ ನಿರ್ವಹಣೆಯನ್ನೂ ಮಹಿಳಾ ತಂಡವೇ ಮಾಡಿತು.

ಏರ್‌ಪೋರ್ಟ್ ಗೆ ಬಿಎಂಟಿಸಿ ಬಸ್‌ನಲ್ಲಿ ಹೋದರೆ ಶಾಂಪಿಂಗ್ ಡಿಸ್ಕೌಂಟ್

ಮಹಿಳಾ ಅಧಿಕಾರಿಗಳಿಗೆ ತಿಂಗಳಿಂದ ತರಬೇತಿ ನೀಡಿ, ಲಿಖಿತ ಪರೀಕ್ಷೆ ಮಾಡಲಾಗಿತ್ತು. ಬಳಿಕ ಸಂಬಂಧಪಟ್ಟ ಎಲ್ಲ ಇಲಾಖೆಗಳಿಂದ ಅನುಮತಿ ಪಡೆದ ಬಳಿಕವೇ ಕಾರ್ಯಾಚರಣೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಏರ್ ಪೋರ್ಟ್ ನ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಟಿ.ಸಿ. ಸಜಿತ್ ತಿಳಿಸಿದ್ದಾರೆ.

Kempegowda International Airport takes off on girl power

ನಿಯಂತ್ರಿತ ಕ್ಷೇತ್ರವಾಗಿರುವ ವೈಮಾನಿಕ ವಲಯದಲ್ಲಿ ಲೋಪಗಳು ಆಗದಂತೆ ನೋಡಿಕೊಳ್ಳಬೇಕು. ಅದಕ್ಕೆ ಪೂರಕವಾದ ಮಹಿಳಾ ಸಿಬ್ಬಂದಿಯನ್ನು ಸಜ್ಜುಗೊಳಿಸಲಾಗಿತ್ತು. ಎಂದು ಏರ್ ಪೋರ್ಟ್ ನ ಮುಖ್ಯ ಕಾರ್ಯಾಚರಣೆ ಅಧಿಕಾರಿ ಜಾವೇದ್ ಮಲಿಕ್ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
An all -women team was in charge of operations at KIA on the occasion of the International women's day. A team of 36 women took charge of the operations during the first shift between 6am to 12pm . The airport managed 245 air traffic movements including a few international flights in this duration.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ