ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿಗೆ ವಿಮಾನ ನಿಲ್ದಾಣ ಕೊಡುಗೆಯಾಗಿ ನೀಡಿದ್ದ ವಾಜಪೇಯಿ

By Nayana
|
Google Oneindia Kannada News

Recommended Video

Atal Bihari Vajpayee : ಬೆಂಗಳೂರಿಗೆ ವಾಜಪೇಯಿ ಕೊಟ್ಟಿದ್ದಾರೆ ದೊಡ್ಡ ಕೊಡುಗೆ..!

ಬೆಂಗಳೂರು, ಆಗಸ್ಟ್ 17: ಆಗಿನ್ನೂ ಬೆಂಗಳೂರು ಐಟಿ ಸಿಟಿ ಎಂದು ಕರೆಸಿಕೊಳ್ಳಲು ಆರಂಭಿಸಿತ್ತು, ಬೆಂಗಳೂರು ಅಷ್ಟು ಮುಂದುವರೆದಿರಲಿಲ್ಲ, ಅಂದು ಅಟಲ್‌ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದ ದಿನಗಳು ಆ ಕಾಲದಲ್ಲಿ ಡಿಜಿಟಲ್‌ ಲಾಂಚಿಂಗ್‌ ಮೂಲಕ ಏರ್‌ಪೋರ್ಟ್‌ನ್ನು ಕೊಡುಗೆಯಾಗಿ ನೀಡಿದ್ದರು.

ಆಗ ಕಾಂಗ್ರೆಸ್‌ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿತ್ತು ಆ ಸಂದರ್ಭದಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಾಜಪೇಯಿ ಅವರು ಹಸಿರು ನಿಶಾನೆ ತೋರಿದ್ದರು. ಕೆಆರ್‌ಪುರಂ ತೂಗು ಸೇತುವೆ ಹಾಗೂ ವೈಟ್‌ಫೀಲ್ಡ್‌ನಲ್ಲಿ ಐಟಿಪಪಿಎಲ್‌ ಆರಂಭಕ್ಕೂ ಅವಕಾಶ ಕಲ್ಪಿಸಿದ್ದರು.

ಬೆಂಗಳೂರಲ್ಲಿದೆ 'ಅಟಲ್‌ ಸಾರಿಗೆ' :ವಿಶೇಷತೆ ಏನು ಗೊತ್ತಾ?ಬೆಂಗಳೂರಲ್ಲಿದೆ 'ಅಟಲ್‌ ಸಾರಿಗೆ' :ವಿಶೇಷತೆ ಏನು ಗೊತ್ತಾ?

ವಿಧಾನಸೌಧದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಇನ್‌ಫೋಸಿದ್‌ ಮುಖ್ಯಸ್ಥ ನಾರಾಯಣಮೂರ್ತಿ ಅವರ ಜತೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಭೂಮಿ ಪೂಜೆ ನೆರವೇರಿಸಿದ್ದ ವಾಜಪೇಯಿ, ಸರ್ಕಾರ ವ್ಯವಸ್ಥೆಯಲ್ಲಿ ವಿಳಂಬ ನೀತಿಗೆ ಬೇಸರ ವ್ಯಕ್ತಪಡಿಸಿದ್ದರು. 2003ರಲ್ಲಿ ಕೆಆರ್‌ಪುರಂ ತೂಗು ಸೇತುವೆಯನ್ನು ವಾಜಪೇಯಿ ಅವರು ಉದ್ಘಾಟಿಸಿದ್ದರು.

Kempegowda international airport is the initiative of Vajpayee

ವಾಜಪೇಯಿ ಮತ್ತು ಕಂದಹಾರ್ ವಿಮಾನ ಅಪಹರಣದ ನೆನೆಪುವಾಜಪೇಯಿ ಮತ್ತು ಕಂದಹಾರ್ ವಿಮಾನ ಅಪಹರಣದ ನೆನೆಪು

ಅಷ್ಟೇ ಅಲ್ಲದೆ ಈ ಚತುಷ್ಪಥ ರಸ್ತೆ ಕೂಡ ವಾಜಪೇಯಿ ಅವರ ಕನಸಿನ ಕೂಸಾಗಿತ್ತು, ಬದಲಾಗುತ್ತಿರುವ ಭಾರತ ವ್ಯಾಪಾರ, ವಹಿವಾಟು ಸುಗಮಗೊಳ್ಳಲಿ, ಸರಕು ಸಾಗಣೆ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ಉದ್ದೇಶದಿಂದ ದ್ವಿಪಥಗಳಾಗಿದ್ದ ರಾಷ್ಟ್ರೀಯ ಹೆದ್ದಾರಿಗಳನ್ನು 4 ಪಥಗಳನ್ನಾಗಿ ಬದಲಿಸುವ ಕನಸಿನ ಯೋಜನೆಗೆ ಕೈಹಾಕಿದ್ದೇ ಅಟಲ್‌ ಬಿಹಾರಿ ವಾಜಪೇಯಿ ಅವರು. ಒಟ್ಟು 5846 ಕಿ.ಮೀ ಉದ್ದ ರಸ್ತೆಗಳನ್ನು ವಾಜಪೇಯಿ ಅವಧಿಯಲ್ಲಿ ಚತುಷ್ಪಥಗೊಳಿಸಲಾಯಿತು.

English summary
Former prime minister AB Vajpayee's stepping the stone for Bengaluru international airport. Despite of local congress government he supported for IT city development.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X