ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಂಪೇಗೌಡ ವಿಮಾನ ನಿಲ್ದಾಣದ ಪಾರ್ಕಿಂಗ್ ಫೀ ಹೆಚ್ಚಳ

By Vanitha
|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್, 11 : ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದ್ವಿಚಕ್ರ ವಾಹನ ಹೊರತು ಪಡಿಸಿ ಕಾರು ಇನ್ನಿತರೆ ನಾಲ್ಕು ಚಕ್ರ ವಾಹನಗಳ ಪಾರ್ಕಿಂಗ್ ಶುಲ್ಕವನ್ನು ಬುಧವಾರದಿಂದ ದಿಢೀರನೆ ಏರಿಸಲಾಗಿದೆ.

ವಿಮಾನ ನಿಲ್ದಾಣದಲ್ಲಿ ಕಾರನ್ನು 4 ಗಂಟೆ ಕಾಲ ನಿಲ್ಲಿಸಿದರೆ 90 ರೂ ಶುಲ್ಕ ನೀಡಬೇಕಿತ್ತು. ಆದರೆ ಈಗ ಕೇವಲ ಎರಡು ಗಂಟೆಗೆಯೇ 90 ರೂ ಶುಲ್ಕ ಪಾವತಿಸಬೇಕಿದೆ. ಅಲ್ಲದೇ ನಾಲ್ಕು ಗಂಟೆಗೂ ಹೆಚ್ಚು ಕಾಲ ಕಾರು ನಿಂತಲ್ಲಿ ಪ್ರತಿ ಗಂಟೆಗೆ 45 ರೂ ವಿಧಿಸಲಾಗುತ್ತಿತ್ತು. ಈಗ ನಂತರದ ಪ್ರತಿ ಎರಡು ಗಂಟೆಗೆ 50 ರೂ ವಿಧಿಸಲಾಗುತ್ತಿದೆ. [ಬೆಂಗಳೂರಿನಲ್ಲಿ ಪೇ ಅಂಡ್ ಪಾರ್ಕ್ ವ್ಯವಸ್ಥೆ : ಎಲ್ಲಿ, ಏನು?]

Kempegowda International Airport increase parking rate

ಟೆಂಪೊ ಟ್ರಾವೆಲರ್ ಗಳಿಗೆ ಎರಡು ಗಂಟೆಗೆ ಈ ಹಿಂದೆ 150 ರೂ ಇದ್ದ ಶುಲ್ಕವನ್ನು 200 ಕ್ಕೆ ಹೆಚ್ಚಳ ಮಾಡಲಾಗಿದೆ. ಬಸ್ಸು ನಿಲುಗಡೆಗೆ ಸಂಬಂಧಿಸಿದಂತೆ 250 ರೂ ಯಿಂದ 500ರೂಗೆ ಏರಿಕೆ ಮಾಡಲಾಗಿದೆ.

ವಾಹನ ಪಾರ್ಕಿಂಗ್ ವೇಳೆ ನೀಡಿದ್ದ ಟಿಕೆಟ್ ಕಳೆದುಕೊಂಡಲ್ಲಿ ಶುಲ್ಕದ ಜೊತೆ 500ರೂ ದಂಡ ವಿಧಿಸಲಾಗುವುದು. ಸೂಕ್ತ ದಾಖಲೆಗಳನ್ನು ತೋರಿಸಿದ್ದಲ್ಲಿ ಮಾತ್ರ ವಾಹನವನ್ನು ತೆಗೆದುಕೊಂಡು ಹೋಗಲು ಅವಕಾಶ ನೀಡಲಾಗುವುದು ಎಂದು ವಿಮಾನ ನಿಲ್ದಾಣದ ಕಾರ್ಪೋರೇಟ್ ಸೇವೆಗಳ ವಿಭಾಗದ ಸರೋಜ್ ಮರಿಯಾ ತಿಳಿಸಿದರು.

English summary
Kempegowda International Airport is increasing parking rate on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X